ಬ್ರೇಕಿಂಗ್ ನ್ಯೂಸ್
30-12-21 10:37 pm HK Desk news ದೇಶ - ವಿದೇಶ
ದೆಹಲಿ, ಡಿ.30 : ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಅಂದ್ರೆ, ಪ್ರತಿ ಬಾರಿ ಪ್ರಧಾನಿ ಸ್ವಾತಂತ್ರ್ಯದ ಧ್ವಜಾರೋಹಣ ಮಾಡುವ ಕೇಂದ್ರ. ಅತ್ಯಂತ ಸುಂದರ ವಾಸ್ತುಶಿಲ್ಪ, ಮೊಘಲರ ಕಾಲದ ಬೃಹತ್ ಕೋಟೆ ಕೆಂಪುಕೋಟೆಯೆಂದೇ ಜನಜನಿತ. ಆದರೆ, ಮೊಘಲರ ರಾಜ ಶಹಜಹಾನ್ ಕಟ್ಟಿರುವ ಈ ಕೆಂಪು ಕೋಟೆ ತನಗೆ ಸೇರಿದ್ದು ಎಂದು ಇಲ್ಲೊಬ್ಬರು ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಗುಡಿಸಲಿನಲ್ಲಿ ವಾಸವಿರುವ ವಿಧವೆ ಮಹಿಳೆ ಸುಲ್ತಾನಾ ಬೇಗಂ ಎನ್ನುವಾಕೆಯೇ ಈ ತಗಾದೆ ತೆಗೆದವರು. ದೆಹಲಿಯನ್ನಾಳಿದ್ದ ಕೊನೆಯ ಮೊಘಲ್ ರಾಜ ಬಹಾದುರ್ ಷಾ ಝರಾಫ್ ಅವರ ಮರಿ ಮೊಮ್ಮಗನ ಪತ್ನಿಯೆಂದು ಹೇಳಿಕೊಂಡಿರುವ ಬೇಗಂ ಕೆಂಪುಕೋಟೆ ತನಗೆ ಸೇರಬೇಕು ಎಂದು ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಕೋಟೆಯನ್ನು ತನಗೆ ಕೊಡಲು ಸಾಧ್ಯವಾಗದಿದ್ದರೆ, ಅದರ ಬದಲಿಗೆ ಹಣದ ಪರಿಹಾರ ನೀಡಲಿ ಎಂದು ಆಕೆ ಹೇಳಿದ್ದಾರೆ.
ಆದರೆ ಈಕೆಯ ಅರ್ಜಿ ನೋಡಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶೆ ರೇಖಾ ಪಳ್ಳಿ, 150 ವರ್ಷಗಳ ಸುದೀರ್ಘ ಸಮಯದ ಬಳಿಕ ಕೋಟೆಯ ಬಗ್ಗೆ ಹಕ್ಕು ಸ್ಥಾಪಿಸುವುದು ನ್ಯಾಯ ಸಮ್ಮತವಲ್ಲ. ಇದನ್ನು ಪರಿಗಣಿಸಲು ಸಾಧ್ಯವೂ ಇಲ್ಲ ಎಂದು ಅರ್ಜಿಯನ್ನು ವಜಾ ಮಾಡಿದ್ದಾರೆ. ಸುಲ್ತಾನಾ ಬೇಗಂ ಪರ ವಕೀಲರ ಪ್ರಕಾರ, ಸುಲ್ತಾನಾ ಬೇಗಂ ಪತಿ ಮಿರ್ಜಾ ಮೊಹಮ್ಮದ್ ಬೇಡರ್ ಬಕ್ತ್ , ಕೊನೆಯ ಮೊಘಲ್ ರಾಜ ಬಹಾದುರ್ ಷಾ ಅವರ ಮರಿ ಮೊಮ್ಮಗ. 1980ರಲ್ಲಿ ಮಿರ್ಜಾ ಮೊಹಮ್ಮದ್ ನಿಧನದ ನಂತರ ಸುಲ್ತಾನಾ ಬೇಗಂ ಅವರಿಗೆ ಕೇಂದ್ರ ಗೃಹ ಸಚಿವಾಲಯದಿಂದ ಪಿಂಚಣಿ ನೀಡಲಾಗುತ್ತಿತ್ತು. 1857ರಲ್ಲಿ ಬ್ರಿಟಿಷರು ಮೊಘಲರನ್ನು ಸೋಲಿಸಿ, ಅವರ ಆಸ್ತಿಗಳನ್ನು ವಶಕ್ಕೆ ಪಡೆದ ಬಳಿಕ ನಮ್ಮ ಆಸ್ತಿಯನ್ನು ಮರಳಿಸಿಲ್ಲ ಎಂದು ಸುಲ್ತಾನಾ ಬೇಗಂ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದ ನ್ಯಾಯಾಧೀಶರು, 1857ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ವಂಚನೆ ಆಗಿದ್ದರೆ ಅದನ್ನು ಈಗ ಕೇಳುವುದರಲ್ಲಿ ಯಾವ ನ್ಯಾಯವಿದೆ.. 150 ವರ್ಷಗಳ ಕಾಲ ನೀವು ಎಲ್ಲಿ ಹೋಗಿದ್ದಿರಿ. ನೀವು ಯಾಕೆ ಹಕ್ಕು ಸ್ಥಾಪಿಸಲು ಬಂದಿಲ್ಲ ಎಂದು ಪ್ರಶ್ನೆ ಮಾಡಿದರಲ್ಲದೆ, ಈ ಬಗ್ಗೆ ಪರಿಹಾರ ಕೇಳುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.
A woman from Delhi, claiming to be the widow of the great grandson of the last Mughal King Bahadur Shah Zaraf II recently approached the court and asked for reparations. Sultana Begum claimed ownership of the Red Fort and asked the court to hand it over to her. She said that if this was not possible, she would like to get monetary compensation.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am