ಬ್ರೇಕಿಂಗ್ ನ್ಯೂಸ್
30-12-21 08:57 pm HK Desk news ದೇಶ - ವಿದೇಶ
ಪ್ಯಾರಿಸ್, ಡಿ.30 : ಮಸೀದಿಯೊಂದರ ಇಮಾಮ್ ಜಿಹಾದ್ ಸಮರ್ಥಿಸಿ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಫ್ರಾನ್ಸ್ ಸರಕಾರ ಅಲ್ಲಿನ ಮಸೀದಿಯನ್ನೇ ಮುಚ್ಚುವಂತೆ ಆದೇಶ ಮಾಡಿದೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಿಂದ 100 ಕಿಮೀ ದೂರದಲ್ಲಿರುವ ಬಿವಾಯ್ಸ್ ಎನ್ನುವ ನಗರದಲ್ಲಿ ಈ ಪ್ರಕರಣ ನಡೆದಿದೆ. ಮಸೀದಿ ಇಮಾಮ್ ತನ್ನ ಭಾಷಣದಲ್ಲಿ ಕ್ರಿಸ್ತಿಯನ್ನರು, ಜೆಹೂದಿಗಳನ್ನು ಗುರಿಯಾಗಿಸಿ ಈ ಹೇಳಿಕೆ ನೀಡಿದ್ದಾನೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಫ್ರಾನ್ಸ್ ಸರಕಾರದ ಇಂಟೀರಿಯರ್ ಮಿನಿಸ್ಟರ್ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಸ್ಥಳೀಯ ಪತ್ರಿಕೆಯೊಂದರ ಮಾಹಿತಿ ಪ್ರಕಾರ, ಪ್ರಚೋದನಕಾರಿ ಭಾಷಣ ಮಾಡಿರುವ ಇಮಾಮ್ ಇತ್ತೀಚೆಗಷ್ಟೇ ಮತಾಂತರಗೊಂಡಿದ್ದ ವ್ಯಕ್ತಿ. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಮಸೀದಿ ಕಮಿಟಿಯವರು ಆ ವ್ಯಕ್ತಿಯನ್ನು ಇಮಾಮ್ ಹುದ್ದೆಯಿಂದ ತೆಗೆದು ಹಾಕಿದ್ದಾರೆ.
ಇತ್ತೀಚೆಗಷ್ಟೇ ಫ್ರಾನ್ಸ್ ಸರಕಾರ, ದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದ ವಿಚಾರಗಳನ್ನು ಬಿತ್ತುವ ಪ್ರಾರ್ಥನಾ ಕೇಂದ್ರಗಳ ಬಗ್ಗೆ ನಿಗಾ ಇಡುವುದಾಗಿ ಹೇಳಿತ್ತು. 2020ರ ಅಕ್ಟೋಬರ್ ನಲ್ಲಿ ಸಾಮುವೆಲ್ ಪ್ಯಾಟಿ ಎನ್ನುವ ಶಿಕ್ಷಕನೊಬ್ಬ ಕೊಲೆಯಾದ ಬಳಿಕ ಫ್ರಾನ್ಸ್ ಸರಕಾರ ಜಾಗೃತ ಆಗಿತ್ತು. ಸಾಮುವೆಲ್ ಪ್ಯಾಟಿ, ಕೊಲೆಯಾಗುವುದಕ್ಕೂ ಮುನ್ನ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತ ವಿವಾದಿತ ಕಾರ್ಟೂನ್ ಗಳನ್ನು ಪ್ರಚಾರಪಡಿಸಿದ್ದ. ಇದಕ್ಕಾಗಿ ಪ್ಯಾಟಿಯನ್ನು ಟಾರ್ಗೆಟ್ ಮಾಡಿದ್ದ ಗುಂಪೊಂದು ಆನ್ಲೈನಲ್ಲಿ ಅಭಿಯಾನವನ್ನೂ ನಡೆಸಿತ್ತು.
ಆಂತರಿಕ ಸಚಿವಾಲಯದ ಮಾಹಿತಿ ಪ್ರಕಾರ ಡಿಸೆಂಬರ್ ತಿಂಗಳಲ್ಲಿ 100 ಮಸೀದಿಗಳನ್ನು ನಿಗಾ ಇಟ್ಟು ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲದೆ, ಇತ್ತೀಚಿನ ಕೆಲವು ತಿಂಗಳಲ್ಲಿ ಫ್ರಾನ್ಸ್ ದೇಶದ 2600ಕ್ಕೂ ಹೆಚ್ಚು ಪ್ರಾರ್ಥನಾ ಕೇಂದ್ರಗಳಲ್ಲಿ ತನಿಖೆ ನಡೆಸಲಾಗಿದೆ. ದೇಶದ ಕಾನೂನಿಗೆ ವಿರುದ್ಧವಾಗಿ ಇಸ್ಲಾಮಿಕ್ ಪ್ರತ್ಯೇಕತವಾದ ಬಿತ್ತಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖಾ ಏಜನ್ಸಿಗಳು ತನಿಖೆ ಆರಂಭಿಸಿವೆ.
France closes mosque after unacceptable preaching.
16-01-26 09:38 pm
Bangalore Correspondent
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 10:28 pm
Mangalore Correspondent
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm