ಬ್ರೇಕಿಂಗ್ ನ್ಯೂಸ್
23-12-21 02:47 pm HK Desk news ದೇಶ - ವಿದೇಶ
ಲೂಧಿಯಾನ, ಡಿ.23 : ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಪಂಜಾಬ್ ರಾಜ್ಯದ ಲೂಧಿಯಾನದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ 12.20ರ ಸುಮಾರಿಗೆ ಲೂಧಿಯಾನ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಘಟನೆ ನಡೆದಿದೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುರುವಾರ ಸ್ಥಳೀಯ ವಕೀಲರು ಮುಷ್ಕರ ನಡೆಸಿದ್ದರಿಂದ ಕೋರ್ಟ್ ಕಟ್ಟಡದಲ್ಲಿ ಹೆಚ್ಚು ಜನ ಇರಲಿಲ್ಲ. ಹೀಗಾಗಿ ಬಾಂಬ್ ಬ್ಲಾಸ್ಟ್ ಸಂದರ್ಭದಲ್ಲಿ ಕಟ್ಟಡದ ಒಳಗೆ ಕೆಲವೇ ಜನರು ಇದ್ದರು.
ಕೋರ್ಟ್ ಕಟ್ಟಡದ ಬಾತ್ ರೂಮಿನಲ್ಲಿ ಸ್ಫೋಟ ಆಗಿದ್ದು, ಅಲ್ಲಿನ ಗೋಡೆ ಮತ್ತು ಕಿಟಕಿ ಛಿದ್ರಗೊಂಡು ಬಿದ್ದಿದೆ. ಅಲ್ಲಿ ಕೆಲಸ ಮಾಡುತ್ತಿದ್ದವರು ಘಟನೆಯಲ್ಲಿ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ, ನಿಗದಿ ಮೀಟಿಂಗ್ ಬದಿಗಿಟ್ಟು ಲೂಧಿಯಾನಕ್ಕೆ ತೆರಳುತ್ತಿದ್ದೇನೆ. ತಪ್ಪಿತಸ್ಥರನ್ನು ಪತ್ತೆ ಮಾಡಿ, ಶಿಕ್ಷಿಸುತ್ತೇನೆ ಎಂದು ತಿಳಿಸಿದ್ದಾರೆ. ಪಂಜಾಬ್ ಚುನಾವಣೆ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಪೊಲೀಸರನ್ನು ಅಲರ್ಟ್ ಮಾಡಿತ್ತು.
ಬಾಂಬ್ ಬ್ಲಾಸ್ಟ್ ಘಟನೆ ಹಿನ್ನೆಲೆಯಲ್ಲಿ ಎನ್ಐಎ ಮತ್ತು ಎನ್ ಎಸ್ ಜಿ ಪಡೆಗಳ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಯಾರು ಕೃತ್ಯ ನಡೆಸಿದ್ದಾರೆ, ಯಾವ ಉದ್ದೇಶದಿಂದ ಬಾಂಬ್ ಬ್ಲಾಸ್ಟ್ ನಡೆಸಲಾಗಿದೆ ಎನ್ನುವ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
At least two people are reported to have been killed, while two others have been injured in a suspected IED blast in Ludhiana court complex on Thursday. Initial report said that many more are feared to be injured.
27-04-25 09:22 pm
HK News Desk
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
27-04-25 08:42 pm
HK News Desk
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
ಸಿಂಧು ನದಿಯನ್ನು ತಡೆದರೆ ರಕ್ತ ಹರಿಯುತ್ತದೆ ; ಮಾಜಿ...
26-04-25 08:21 pm
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
27-04-25 11:09 pm
Mangalore Correspondent
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
KMF Elections 2025, Belupu Deviprasad Shetty:...
26-04-25 08:03 pm
27-04-25 10:59 pm
Mangalore Correspondent
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm