ಬ್ರೇಕಿಂಗ್ ನ್ಯೂಸ್
22-12-21 12:41 pm HK Desk news ದೇಶ - ವಿದೇಶ
ಲಕ್ನೋ, ಡಿ.22 : ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೆ ಬಂದ ಒಂದೇ ವರ್ಷದಲ್ಲಿ ಹಿಂದು ಯುವತಿಗೆ ಸುಳ್ಳು ಹೇಳಿ ಮದುವೆಯಾಗಿದ್ದ ಕಾನ್ಪುರ ಮೂಲದ ಯುವಕನಿಗೆ ಹತ್ತು ವರ್ಷದ ಶಿಕ್ಷೆ ಘೋಷಣೆಯಾಗಿದೆ. ಲವ್ ಜಿಹಾದ್ ಕಾನೂನು ಆಧರಿಸಿ, ಕೋರ್ಟ್ ಮೊದಲ ಬಾರಿಗೆ ತೀರ್ಪು ನೀಡಿದೆ.
2017ರ ಮೇ ತಿಂಗಳಲ್ಲಿ ನಡೆದ ಘಟನೆಯಾಗಿದ್ದು, ಜಾವೇದ್ ಎಂಬ ಯುವಕ ತನ್ನ ಹೆಸರನ್ನು ಮುನ್ನಾ ಎಂದು ಹೇಳಿ ಹಿಂದು ಅಪ್ರಾಪ್ತ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾಗಿ ಮನೆಗೆ ಕರೆದೊಯ್ದ ಆತನ ನಿಜಬಣ್ಣ ಯುವತಿಗೆ ತಿಳಿದುಬಂದಿತ್ತು. ಆನಂತರ, ಯುವಕ ಆಕೆಯನ್ನು ಮನವೊಲಿಸಿ ನಿಖಾ ಆಗುವಂತೆ ಒತ್ತಾಯ ಮಾಡಿದ್ದಾನೆ. ಆದರೆ ಯುವತಿ ಮಾತ್ರ ಯುವಕನಿಗೆ ಮನಸೋಲದೆ ಆತನ ವಿರುದ್ಧ ಪೊಲೀಸ್ ದೂರು ನೀಡಿದ್ದಳು. ತನ್ನನ್ನು ರೇಪ್ ಮಾಡಿದ್ದಾಗಿಯೂ ದೂರಿನಲ್ಲಿ ಹೇಳಿದ್ದಳು. ಪೊಲೀಸರು ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಅಡಿ ದೂರು ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
2020ರಲ್ಲಿ ಉತ್ತರ ಪ್ರದೇಶ ಸರಕಾರ ಲವ್ ಜಿಹಾದ್ ವಿರುದ್ಧ ಕಾನೂನು ವಿರೋಧಿ ಮತಾಂತರವನ್ನು ತಡೆಯುವ ನೆಲೆಯಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೆ ತಂದಿತ್ತು. ಅದಾಗಲೇ ಪೋಕ್ಸೋ ಕೇಸು ಮತ್ತಿತರ ಸೆಕ್ಷನ್ ಗಳಡಿ ನಡೆಯುತ್ತಿದ್ದ ಜಾವೇದ್ ಲವ್ ಜಿಹಾದ್ ಪ್ರಕರಣಕ್ಕೆ ಹೆಚ್ಚುವರಿಯಾಗಿ ಧಾರ್ಮಿಕ ಮತಾಂತರ ವಿರೋಧಿ ಕಾಯ್ದೆಯ ಸೆಕ್ಷನ್ ಕೂಡ ಸೇರಿಕೊಂಡಿತ್ತು. ಈ ಕಾಯ್ದೆಯಡಿ ಯಾವುದೇ ವ್ಯಕ್ತಿಯನ್ನು ಆಮಿಷ, ಬಲವಂತ, ಇನ್ನಿತರ ಸುಳ್ಳು ಮಾಹಿತಿಗಳನ್ನು ನೀಡಿ ಮತಾಂತರ ಅಥವಾ ಮದುವೆ ಮಾಡಿಕೊಂಡಿದ್ದಲ್ಲಿ ದಂಡ ಮತ್ತು ಶಿಕ್ಷೆ ವಿಧಿಸಬಹುದು. ಹೊಸ ಕಾಯ್ದೆ ಮತ್ತು ಪೋಕ್ಸೋ ಕೇಸು ಒಳಗೊಂಡು ಆರೋಪಿ ಜಾವೇದ್ ಗೆ ಕಾನ್ಪುರದ ನ್ಯಾಯಾಲಯ ಹತ್ತು ವರ್ಷ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿದೆ.
ಅಪರಾಧ ಕೃತ್ಯಗಳನ್ನು ಆಧರಿಸಿ ತಪ್ಪಿತಸ್ಥರಿಗೆ ಗರಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರದಿಂದ 50 ಸಾವಿರದ ವರೆಗೆ ದಂಡ ವಿಧಿಸಲು ಅವಕಾಶ ಇದೆ. ಯುವಕ- ಯುವತಿ ಸ್ವತಃ ಒಪ್ಪಿಕೊಂಡು ಅಂತರ್ ಧರ್ಮೀಯ ಮದುವೆಯಾಗುವುದಿದ್ದಲ್ಲಿ ಎರಡು ತಿಂಗಳ ಮೊದಲೇ ಆಯಾ ಪ್ರದೇಶದ ಜಿಲ್ಲಾಧಿಕಾರಿಗೆ ಎರಡು ತಿಂಗಳ ಮೊದಲೇ ಮಾಹಿತಿ ನೀಡಬೇಕಾತ್ತದೆ. ಬಲವಂತದ ಮತಾಂತರ ಕೃತ್ಯಗಳಿಗೆ 3ರಿಂದ 5 ವರ್ಷ ಶಿಕ್ಷೆ ಮತ್ತು 15 ಸಾವಿರ ದಂಡ, ಎಸ್ಸಿ ಎಸ್ಟಿ ಯುವತಿಯರು ಅಥವಾ ಅಪ್ರಾಪ್ತ ಯುವತಿಯನ್ನು ಮತಾಂತರಿಸಿದಲ್ಲಿ ಮೂರರಿಂದ ಹತ್ತು ವರ್ಷ ಜೈಲು ಶಿಕ್ಷೆ, ಒಂದು ಸಮುದಾಯ ಅಥವಾ ಕುಟುಂಬವನ್ನು ಬಲವಂತ, ಆಮಿಷದಿಂದ ಮತಾಂತರ ಮಾಡಿದಲ್ಲಿ ಆರೋಪಿಗಳಿಗೆ 3ರಿಂದ ಹತ್ತು ವರ್ಷ ಶಿಕ್ಷೆ ವಿಧಿಸಬಹುದು.
ಉತ್ತರ ಪ್ರದೇಶದ ಕಾಯ್ದೆ ಪ್ರಕಾರ, ಮದುವೆ ಅನ್ನುವುದು ಎರಡು ಕುಟುಂಬಗಳ ಪವಿತ್ರ ಸಂಬಂಧ. ಆದರೆ, ಮದುವೆಯನ್ನು ಯುವತಿಯ ಮತಾಂತರ ಉದ್ದೇಶದಿಂದ ಮಾಡಿದರೆ ಅಪರಾಧವಾಗುತ್ತದೆ. ಅವುಗಳಿಗೆ ನಿಯಂತ್ರಣ ಹೇರಲು ಹೊಸ ಕಾಯ್ದೆ ಅವಕಾಶ ನೀಡುತ್ತದೆ. ಉತ್ತರ ಪ್ರದೇಶದಲ್ಲಿ ಹೊಸ ಕಾಯ್ದೆ ಜಾರಿಗೆ ಬಂದ ಒಂದೇ ವರ್ಷದಲ್ಲಿ ಬಲವಂತ, ಆಮಿಷ, ಸುಳ್ಳು ಹೇಳಿ ಮದುವೆಯಾಗಿ ಮತಾಂತರ ಮಾಡಿರುವ ಬಗ್ಗೆ 108 ಪ್ರಕರಣಗಳು ದಾಖಲಾಗಿದ್ದು ವಿಚಾರಣೆ ಹಂತದಲ್ಲಿದೆ. ಬರೇಲಿ ವಲಯದಲ್ಲಿ ಅತಿ ಹೆಚ್ಚು ಅಂದರೆ 28 ಕೇಸುಗಳು ದಾಖಲಾಗಿದ್ದು, ನಂತರದ ಸ್ಥಾನ ಮೀರತ್ (23), ಗೋರಖ್ ಪುರ (11 ಕೇಸು) ದಲ್ಲಿ ದಾಖಲಾಗಿದೆ.
In the first sentencing under the ‘Love Jihad’ law in Uttar Pradesh, a youth in Kanpur was awarded jail term for 10 years and slapped with a fine of Rs 30,000.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm