ಬ್ರೇಕಿಂಗ್ ನ್ಯೂಸ್
17-12-21 09:57 pm HK Desk news ದೇಶ - ವಿದೇಶ
ಥಾಣೆ, ಡಿ.17 : ವಸತಿ ಸಮುಚ್ಚಯ ಆವರಣದಲ್ಲಿ ಮಹಿಳೆಯೊಬ್ಬರು ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ವಸತಿ ಸಮುಚ್ಚಯದ ಆಡಳಿತ ಮಂಡಳಿಯವರು ಸುಮಾರು ₹ 8 ಲಕ್ಷಕ್ಕೂ ಹೆಚ್ಚು ದಂಡವನ್ನು ವಿಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನವಿ ಮುಂಬೈನ ಎನ್ಆರ್ಐ ಕಾಂಪ್ಲೆಕ್ಸ್ ವಸತಿ ಸಮುಚ್ಚಯವು 40 ಕ್ಕೂ ಹೆಚ್ಚು ಕಟ್ಟಡಗಳನ್ನು ಒಳಗೊಂಡಿದ್ದು ಇದರ ವ್ಯವಸ್ಥಾಪನಾ ಸಮಿತಿ ಈ ಭಾರೀ ದಂಡ ವಿಧಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ದಂಡ ವಿಧಿಸಲ್ಪಟ್ಟ ಅಂಶು ಸಿಂಗ್ ಎಂಬ ಮಹಿಳೆ ಸಂಕೀರ್ಣದೊಳಗೆ ಬೀದಿನಾಯಿಗಳಿಗೆ ಆಹಾರ ನೀಡುವವರಿಗೆ ಹೌಸಿಂಗ್ ಸೊಸೈಟಿ ದಿನಕ್ಕೆ 5,000 ದಂಡ ವಿಧಿಸುತ್ತದೆ. ಇದನ್ನು ಕಸ ಹಾಕುವ ಶುಲ್ಕವಾಗಿ ವಿಧಿಸಲಾಗಿದೆ. ಇದುವರೆಗೆ ನನಗೆ ವಿಧಿಸಲಾದ ದಂಡದ ಮೊತ್ತ 8 ಲಕ್ಷಕ್ಕಿಂತ ಹೆಚ್ಚಿದೆ. ಆವರಣದೊಳಗೆ ನಾಯಿಗಳಿಗೆ ಆಹಾರ ನೀಡುತ್ತಿರುವವರಿಗೆ ದಂಡ ವಿಧಿಸಲು ಸೊಸೈಟಿಯ ವ್ಯವಸ್ಥಾಪಕ ಸಮಿತಿಯು ನಿರ್ಧಾರ ಕೈಗೊಂಡಿದೆ. ಇದು ಜುಲೈ 2021 ರಿಂದ ಆರಂಭವಾಗಿದೆ ಎಂದು ಹೇಳಿದ್ದಾರೆ.
ನನ್ನಂತೆಯೇ ಇಲ್ಲಿನ ಇನ್ನೋರ್ವ ನಿವಾಸಿಗೆ ವಿಧಿಸಲಾದ ಸಂಚಿತ ದಂಡದ ಮೊತ್ತ ಆರು ಲಕ್ಷ ಎಂದು ಅವರು ಹೇಳಿದ್ದಾರೆ. ಮತ್ತೊಬ್ಬ ನಿವಾಸಿ ಲೀಲಾ ವರ್ಮಾ ಮಾತನಾಡಿ, ನಾಯಿಗಳಿಗೆ ಆಹಾರ ನೀಡುತ್ತಿರುವ ಸದಸ್ಯರನ್ನು ಸೊಸೈಟಿ ಕಾವಲುಗಾರರು ಹಿಂಬಾಲಿಸಿ ಅವರ ಹೆಸರನ್ನು ನಮೂದಿಸುತ್ತಾರೆ. ನಂತರ ಅದನ್ನು ವ್ಯವಸ್ಥಾಪಕ ಸಮಿತಿಗೆ ವರದಿ ಮಾಡಲಾಗುತ್ತದೆ, ಸಮಿತಿ ದಂಡವನ್ನು ಲೆಕ್ಕಾಚಾರ ಮಾಡುತ್ತದೆ ಎಂದು ಹೇಳಿದರು.
ಆದರೆ, ವಸತಿ ಸಮುಚ್ಚಯದ ಕಾರ್ಯದರ್ಶಿ ವಿನಿತಾ ಶ್ರೀನಂದನ್ ಮಾತನಾಡಿ ಮಕ್ಕಳು ಟ್ಯೂಷನ್ಗೆ ಹೋಗುವಾಗ ಬೀದಿ ನಾಯಿಗಳು ಅವರನ್ನು ಓಡಿಸುತ್ತವೆ. ಇದರಿಂದ ಇಲ್ಲಿ ಸಣ್ಣ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಬೀದಿ ನಾಯಿಗಳ ಭಯದಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ನಾಯಿಗಳು ಪಾರ್ಕಿಂಗ್ ಸ್ಥಳ ಮತ್ತು ಇತರ ಪ್ರದೇಶಗಳಲ್ಲಿ ಕೊಳಕು ಮಾಡುತ್ತವೆ. ಹೌಸಿಂಗ್ ಸೊಸೈಟಿಯಿಂದ ನಾಯಿಗಳಿಗಾಗಿಯೇ ಒಂದು ಆವರಣವನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿನ ಕೆಲವು ಸದಸ್ಯರು ಈ ಪ್ರಾಣಿಗಳಿಗೆ ತೆರೆದ ಸ್ಥಳದಲ್ಲಿ ಆಹಾರವನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬೀದಿ ನಾಯಿಗಳಿಗೆ ಆಹಾರ ಹಾಕುವುದು ಉತ್ತಮ ಕೆಲಸ ಆದರೆ, ಹಸಿದ ನಾಯಿಗಳಿಗೆ ಯಾರು ಆಹಾರ ಹಾಕದೇ ಇದ್ದಾಗ ಅವುಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ ಎಂದು ಇದೇ ಕಟ್ಟಡದಲ್ಲಿರುವ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬೀದಿ ನಾಯಿಗಳಿಗೆ ಆಹಾರ ನೀಡುವುದು ಕಾನೂನುಬಾಹಿರವೇ ಎಂಬ ಪ್ರಶ್ನೆ ಎದುರಾಗುತ್ತದೆ. ಇನ್ನು 2011ರಲ್ಲಿ ದೆಹಲಿ ಹೈಕೋರ್ಟ್ ಬೀದಿ ನಾಯಿಗಳಿಗೆ ಆಹಾರ ನೀಡಲು ಅನೇಕ ನಿಯಮಗಳನ್ನು ವಿಧಿಸಿತ್ತು.
ಈ ನಿಯಮಗಳ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲದೇ ಇದ್ದರೆ ಆಹಾರವನ್ನು ಹಾಕಬಹುದು. ಸಾರ್ವಜನಿಕ ಬೀದಿಗಳು, ಪುಟ್ಪಾತ್, ಪಾದಚಾರಿ ಮಾರ್ಗಗಳು, ಅಪಾರ್ಟ್ಮೆಂಟ್ನ ಪ್ರವೇಶ ದ್ವಾರಗಳ ಹೊರಗಿನ ಸಾಮಾನ್ಯ ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡಬಹುದು ಎಂದು ನ್ಯಾಯಾಲಯ ನಿರ್ದೇಶಿಸಿದೆ.
A woman living in a housing complex in Navi Mumbai has alleged that the management committee of her residential society has imposed a fine of over Rs 8 lakh on her for feeding stray dogs inside the premises
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm