ಬ್ರೇಕಿಂಗ್ ನ್ಯೂಸ್
10-12-21 08:15 pm HK Desk news ದೇಶ - ವಿದೇಶ
ತಿರುವನಂತಪುರ, ಡಿ.10 : ಆಲಪ್ಪುಳ ಜಿಲ್ಲೆಯ ಹಲವೆಡೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಜ್ವರ ಪೀಡಿತ ಪ್ರದೇಶಗಳಲ್ಲಿ ಕೋಳಿ ಸೇರಿದಂತೆ ಪಕ್ಷಿಗಳನ್ನು ಕೊಲ್ಲಲು ಆದೇಶ ಮಾಡಲಾಗಿದೆ.
ಸತ್ತ ಪಕ್ಷಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್ ಲ್ಯಾಬ್‌ನಲ್ಲಿ ಪರೀಕ್ಷಿಸಿದ್ದು ಅವುಗಳಿಗೆ ಹಕ್ಕಿಜ್ವರದ H5N1 ವೈರಸ್ ಇರುವುದು ದೃಢಪಟ್ಟಿದೆ. ಆಲಪ್ಪುಳದಲ್ಲಿ ಬಾತುಕೋಳಿಗಳಲ್ಲಿ ಕೂಡ ಇದೇ ರೋಗ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೋಳಿ ಸೇರಿದಂತೆ ಆ ಭಾಗದಲ್ಲಿರುವ ಪಕ್ಷಿಗಳನ್ನು ಕೊಲ್ಲಲು ವಿಶೇಷ ಆರೋಗ್ಯ ಮತ್ತು ಪಶುಸಂಗೋಪನಾ ತಂಡಗಳನ್ನು ರಚಿಸಲಾಗಿದೆ. ಪಕ್ಷಿಗಳನ್ನು ಕೊಂದು ನಂತರ ಸುಟ್ಟು ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಲಪ್ಪುಳ ಜಿಲ್ಲೆಯ ನೆಡುಮುಡಿ ಪ್ರದೇಶವೊಂದರಲ್ಲೇ 8,000ಕ್ಕೂ ಹೆಚ್ಚು ಬಾತುಕೋಳಿಗಳು ಸಾವನ್ನಪ್ಪಿವೆ. ತಕ್ಕಳಿ ಸೇರಿದಂತೆ ಇತರೆ ಭಾಗಗಳಲ್ಲೂ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ, ಆಲಪ್ಪುಳದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಕ್ಷಿಗಳ ವಿನಿಮಯ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಈ ನಡಿವೆ, ಹಕ್ಕಿಜ್ವರ ಮನುಷ್ಯರಿಗೆ ಹರಡುವ ಸಾಧ್ಯತೆ ಬಹಳ ವಿರಳ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ, ಇದು ಗಾಳಿಯ ಮೂಲಕ ಇತರೇ ಪಕ್ಷಿಗಳಿಗೆ ಹರಡಬಹುದು. ಹಾಗಾಗಿ, ಹರಡುವಿಕೆಯನ್ನು ನಿಯಂತ್ರಿಸಲು ಅವುಗಳನ್ನು ಕೊಲ್ಲುವುದೇ ಏಕೈಕ ಮಾರ್ಗ ಎಂದು ತಿಳಿಸಿದ್ದಾರೆ. ಹಕ್ಕಿಜ್ವರ ಇರುವ ಪ್ರದೇಶಗಳಲ್ಲಿ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
Bird flu, also known as Avian Flu, is a variety of influenza caused by air-borne virus in birds. It can spread to humans rarely and if it happens it can trigger person to person transmission, experts say. There are many varieties of viruses and H7N9 is considered dangerous among them.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm