ಬ್ರೇಕಿಂಗ್ ನ್ಯೂಸ್
22-11-21 06:04 pm Headline Karnataka News Network ದೇಶ - ವಿದೇಶ
ಚೆನ್ನೈ, ನ.22: ಇತ್ತೀಚೆಗೆ ಅಮೆರಿಕದ ಚಿಕಾಗೋದಲ್ಲಿ ಭಾರತೀಯ ಮೂಲದ ಖಾದಿ ವಸ್ತ್ರ ಭಂಡಾರವನ್ನು ಆರಂಭಿಸಿ ಎರಡು ದಿನಗಳ ಹಿಂದಷ್ಟೇ ಚೆನ್ನೈಗೆ ಮರಳಿದ್ದ ಬಹುಭಾಷಾ ನಟ ಕಮಲ್ ಹಾಸನ್ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ ಪಾಸಿಟಿವ್ ಆಗಿರುವುದನ್ನು ಕಮಲಹಾಸನ್ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಕೆಮ್ಮು ಇನ್ನಿತರ ಕೋವಿಡ್ ಲಕ್ಷಣಗಳನ್ನು ಹೊಂದಿರುವ ನಟ ಕಮಲಹಾಸನ್ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಮಲಹಾಸನ್, ವಿಕ್ರಮ್ ಕನಗರಾಜನ್ ನಿರ್ದೇಶನದ ತಮಿಳು ಚಿತ್ರ ಮತ್ತು ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತಮಿಳು ಬಿಗ್ ಬಾಸ್ ಸೀಸನ್ –5 ಅನ್ನು ನಡೆಸಿಕೊಡುತ್ತಿದ್ದಾರೆ. ಅಮೆರಿಕದಿಂದ ಹಿಂತಿರುಗಿದ ಬಳಿಕ ಮಾತನಾಡಿದ್ದ ಕಮಲ್, ಕೆಲವರು ನಾನು ಅಮೆರಿಕದಲ್ಲಿದ್ದರಿಂದ ಈ ವಾರದ ಬಿಗ್ ಬಾಸ್ ಸೀಸನಿಂದ ಮಿಸ್ ಆಗಲಿದ್ದಾರೆ ಅಂದ್ಕೊಂಡಿದ್ದರು. ಆದರೆ ನಾನು ಯಾವತ್ತೂ ಮಿಸ್ ಮಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ ಎಂದಿದ್ದರು.
ಆದರೆ, ಅದರ ಮರುದಿನ ಅಂದರೆ ನ.22ರಂದು ತನ್ನ ಟ್ವಿಟರ್ ನಲ್ಲಿ ಕೋವಿಡ್ ಪಾಸಿಟಿವ್ ಎಂದು ಹೇಳಿಕೊಂಡಿದ್ದು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿರುವುದಾಗಿ ಹೇಳಿದ್ದಾರೆ. ಅಮೆರಿಕದಿಂದ ಹಿಂತಿರುಗಿದ ಬಳಿಕ ಸ್ವಲ್ಪ ಕೆಮ್ಮು ಆಗಿತ್ತು. ಹಾಗಾಗಿ ಟೆಸ್ಟ್ ಮಾಡಿದ್ದೆ. ಟೆಸ್ಟ್ ನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ನಾನು ಚೆನ್ನೈನ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ಜನರು ಕೋವಿಡ್ ನಮ್ಮಿಂದ ದೂರವಾಗಿದೆ ಎಂದು ಅಂದ್ಕೊಳ್ಳುವುದು ಬೇಡ. ಕೋವಿಡ್ ಬಗ್ಗೆ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದು ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.
ವಾರದ ಹಿಂದೆ ಅಮೆರಿಕದ ಚಿಕಾಗೋ ನಗರದಲ್ಲಿ ಕಾಸ್ಟ್ಯೂಮ್ ಡಿಸೈನರ್ ಅಮೃತಾ ರಾಮ್ ಜೊತೆಗೂಡಿ ಕೆಎಚ್ ಹೌಸ್ ಖದ್ದರ್ ಎನ್ನುವ ಹೆಸರಲ್ಲಿ ಖಾದಿ ವಸ್ತ್ರಗಳ ಮಳಿಗೆಯನ್ನು ತೆರೆದಿದ್ದಾರೆ. ಖಾದಿ ವಸ್ತ್ರಗಳನ್ನು ಅಮೆರಿಕದಲ್ಲಿ ಪರಿಚಯಿಸಲು ಖಾದಿ ಬ್ರಾಂಡಿನ ಮಳಿಗೆಯನ್ನು ಆರಂಭಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಕಮಲ್ ಹಾಸನ್, ಚಿಕಾಗೋ ಸಮೃದ್ಧ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವ ಸ್ಪೆಷಲ್ ಆಗಿರುವ ಸಿಟಿ. ದೇಸಿ ಸಂಸ್ಕೃತಿ ಇಲ್ಲಿಯೂ ಜನರಲ್ಲಿ ಬೆಳೆಯಬೇಕು. ನಮ್ಮ ಬ್ರಾಂಡ್ ಜನರಿಗೆ ತಲುಪಲು ಸೂಕ್ತ ನಗರವನ್ನು ನಾವು ಆಯ್ದುಕೊಂಡಿದ್ದೇವೆ ಎನ್ನುವ ಭರವಸೆ ಇದೆ. ಉತ್ತರ ಅಮೆರಿಕಾದಲ್ಲೇ ಇಲ್ಲಿನ ಜನ ಅತಿ ಹೆಚ್ಚು ವಸ್ತ್ರ, ಉಡುಪುಗಳ ಬಗ್ಗೆ ಹೆಚ್ಚು ಗಮನ ಹೊಂದಿದ್ದಾರೆ ಎಂದು ಹೇಳಿದ್ದರು.
Makkal Needhi Maiam president and actor Kamal Haasan on Monday said he has tested positive for COVID-19 and has been admitted to a hospital.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm