ಬ್ರೇಕಿಂಗ್ ನ್ಯೂಸ್
10-11-21 11:13 pm HK News Desk ದೇಶ - ವಿದೇಶ
ನವದೆಹಲಿ, ನ. 10: ಅಂತರರಾಷ್ಟ್ರೀಯ ಕುಸ್ತಿಪಟು ನಿಶಾ ದಾಹಿಯಾ ಮತ್ತಾಕೆಯ ಸಹೋದರನನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ ಎಂಬ ಸುದ್ದಿ ಕೆಲ ಹೊತ್ತಿನ ಮೊದಲು ಮಾಧ್ಯಮಗಳಲ್ಲಿ ರಾಚಿತ್ತು. ಆದರೆ ಅದೃಷ್ಟಕ್ಕೆ ನಕಲಿ ಎಂಬುದು ಗೊತ್ತಾಗಿದೆ. ಈ ಸುದ್ದಿಯನ್ನು ಸ್ವತಃ ನಿಶಾ ಅವರೇ ತಳ್ಳಿಹಾಕಿದ್ದಾರೆ.
ತಾನಿನ್ನೂ ಜೀವಂತವಾಗಿರುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಕೆ ಮಾತನಾಡಿರುವ ವಿಡಿಯೋವನ್ನೂ ಎಎನ್ಐ ಪೋಸ್ಟ್ ಮಾಡಿದೆ. ಆದರೆ, ಸೋನೆಪತ್ನಲ್ಲಿ ನಿಶಾ ದಾಹಿಯಾ ಎಂಬ ಇನ್ನೊಬ್ಬ ಮಹಿಳೆಯ ಹತ್ಯೆಯಾಗಿರುವ ಸುದ್ದಿ ನಿಜ ಎನ್ನಲಾಗಿದೆ.
“ನಾನು ಗೋಂಡಾದಲ್ಲಿ ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಸಾವಿನ ಸುದ್ದಿ ಸುಳ್ಳು. ನಾನು ಚೆನ್ನಾಗಿದ್ದೇನೆ” ಎಂದು ಮಹಿಳಾ ಕುಸ್ತಿಪಟು ನಿಶಾ ದಾಹಿಯಾ ಈ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಕೂಡ ಟ್ವೀಟ್ ಮಾಡಿದ್ದು, ನಿಶಾ ದಾಹಿಯಾ ಬದುಕಿದ್ದಾರೆ ಎಂದು ತಿಳಿಸಿದ್ಧಾರೆ.
ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಇತ್ತೀಚೆಗಷ್ಟೆ ಪದಕ ಗೆದ್ದು ಹೆಸರು ಮಾಡಿದ್ದ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ನಿಶಾ ದಾಹಿಯಾ ಹಾಗೂ ಆಕೆಯ ಒಬ್ಬ ಸಹೋದರನನ್ನು ಆಗುಂತಕರು ಇಂದು ಬುಧವಾರ ಗುಂಡಿಟ್ಟು ಹತ್ಯೆಗೈದ ಘಟನೆ ಹರಿಯಾಣದಲ್ಲಿ ನಡೆದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಸೋನೆಪತ್ನ ಹಲಾಲ್ಪುರ್ನಲ್ಲಿ ಈ ಕೃತ್ಯ ನಡೆದಿದೆ. ಈ ಘಟನೆಯಲ್ಲಿ ನಿಶಾ ದಾಹಿಯ ತಾಯಿಯ ಮೇಲೂ ಅಪರಿಚಿತರು ಗುಂಡು ಹೊಡೆದಿದ್ದಾರೆ. ಧನ್ಪತಿ ಅವರು ಗಂಭೀರವಾಗಿ ಗಾಯಗೊಂಡಿದ್ಧಾರೆ. ಅವರನ್ನ ರೋಹ್ಟಕ್ನಲ್ಲಿರುವ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈ ಸುದ್ದಿಯಲ್ಲಿ ತಿಳಿಸಲಾಗಿದೆ..
ಆದರೆ, ಹತ್ಯೆಯಾದ ನಿಶಾ ದಾಹಿಯಾ ಕುಸ್ತಿಪಟುವಲ್ಲ. ಕುಸ್ತಿಪಟು ನಿಶಾ ಬೇರೆ ಹತ್ಯೆಯಾದ ನಿಶಾ ಬೇರೆ. ಕುಸ್ತಿಪಟು ನಿಶಾ ಅವರು ಪಾನಿಪತ್ನವರು ಎಂದು ಸೋನಿಪತ್ ಎಸ್ಪಿ ರಾಹುಲ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಕಳೆದ ಶುಕ್ರವಾರವಷ್ಟೇ ನಿಶಾ ದಾಹಿಯಾ ಅವರು ಸರ್ಬಿಯಾ ದೇಶದ ಬೆಲ್ಗ್ರೇಡ್ನಲ್ಲಿ ನಡೆದ ಅಂಡರ್-23 ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ 65 ಕಿಲೋ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಟೂರ್ನಿಯಲ್ಲಿ ಭಾರತದ ಇತರ ಕೆಲ ಕುಸ್ತಿಪಟುಗಳೂ ಮಿಂಚಿ ಪದಕ ಜಯಿಸಿದ್ದರು. ಪ್ರಧಾನಿ ಮೋದಿ ಅವರು ನಿಶಾ ಸೇರಿದಂತೆ ಎಲ್ಲಾ ಕುಸ್ತಿಪಟುಗಳನ್ನ ಅಭಿನಂದಿಸಿದ್ದರು.
Wrestler Nisha Dahiya has released a video this evening saying she is absolutely fine after reports emerged that she had been shot dead in Haryana. With Olympic medallist Sakshi Malik by her side, Nisha says in the video that she is in Gonda, Uttar Pradesh, for the senior national meet.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm