ಬ್ರೇಕಿಂಗ್ ನ್ಯೂಸ್
28-10-21 10:02 pm H K News Desk ದೇಶ - ವಿದೇಶ
ಹೈದರಾಬಾದ್, ಅ.28: ಡ್ರಗ್ಸ್, ಗಾಂಜಾ ರೀತಿಯ ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟದಲ್ಲಿ ತೊಡಗಿರುವ ಯವಕರನ್ನು ಪತ್ತೆಹಚ್ಚಲು ಹೈದ್ರಾಬಾದ್ ಪೊಲೀಸರು ಹೊಸ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಡ್ರಗ್ಸ್ ವಹಿವಾಟು ಹೆಚ್ಚಾಗಿ ವಾಟ್ಸಪ್ ಕರೆ, ವಾಟ್ಸಪ್ ಮೆಸೇಜ್ ಗಳ ಮೂಲಕವೇ ನಡೆಯುತ್ತಿರುವುದರಿಂದ ಪೊಲೀಸರು ತಪಾಸಣೆ ನೆಪದಲ್ಲಿ ಬೈಕ್ ತಡೆದು ಮೊಬೈಲ್ ಚೆಕ್ ಮಾಡಲು ಆರಂಭಿಸಿದ್ದಾರೆ.
ಪೊಲೀಸರು ಮೊಬೈಲ್ ಪಡೆದು ಗಾಂಜಾ ಇನ್ನಿತರ ಕೀ ವರ್ಡ್ ಗಳನ್ನು ಹಾಕಿ, ಅದರಲ್ಲಿ ಆ ರೀತಿಯ ವಹಿವಾಟು ನಡೆಸಿದ್ದರೆ ಪತ್ತೆ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ರೀತಿ ಪೊಲೀಸರು ಮೊಬೈಲ್ ತಪಾಸಣೆ ನಡೆಸುವ ವಿಡಿಯೋ ವೈರಲ್ ಆಗಿದ್ದು, ಹೈದ್ರಾಬಾದ್ ಪೊಲೀಸರ ನಡೆಗೆ ವಿರೋಧವೂ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೈದ್ರಾಬಾದ್ ದಕ್ಷಿಣ ವಲಯ ಡಿಸಿಪಿ ಗಜರಾವ್ ಭೂಪಾಲ್, ನಾವು ಮೊಬೈಲ್ ತಪಾಸಣೆ ನಡೆಸುತ್ತಿರುವುದು ಹೌದು. ಹಾಗಂತ, ಯಾವುದೇ ಮೊಬೈಲನ್ನು ವಶಕ್ಕೆ ಪಡೆದಿಲ್ಲ. ಅಥವಾ ಬಲವಂತದಿಂದ ಮೊಬೈಲ್ ಪಡೆದು ತಪಾಸಣೆ ನಡೆಸುತ್ತಿಲ್ಲ. ಜನರು ನಮ್ಮ ತಪಾಸಣೆಗೆ ಸಹಕರಿಸುತ್ತಿದ್ದಾರೆ. ಯಾರು ಕೂಡ ಈ ಬಗ್ಗೆ ಕಂಪ್ಲೇಂಟ್ ಮಾಡಿಲ್ಲ. ಇದು ಕಾನೂನಿಗೆ ವಿರುದ್ಧ ಅಂತ ನನಗನಿಸುತ್ತಿಲ್ಲ ಎಂದಿದ್ದಾರೆ.
ಒಂದು ವೇಳೆ, ಜನರು ಮೊಬೈಲ್ ತಪಾಸಣೆಗೆ ನಿರಾಕರಿಸಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ಆ ರೀತಿಯ ಸನ್ನಿವೇಶ ಎದುರಾಗಿಲ್ಲ. ಅಂತಹ ಸಂದರ್ಭ ಬಂದಲ್ಲಿ ನಾವು ಕಾನೂನು ರೀತ್ಯ ನೋಡಿಕೊಳ್ಳುತ್ತೇವೆ. ಈ ರೀತಿ ಮಾಡಬಾರದೆಂದು ಯಾವುದೇ ಆದೇಶ, ಸೂಚನೆ ಏನೂ ಇಲ್ಲ ಎಂದು ಡಿಸಿಪಿ ಹೇಳಿದ್ದಾರೆ. ಆದರೆ, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇದು ಕಾನೂನಿಗೆ ವಿರುದ್ಧ ಮಾತ್ರವಲ್ಲ, ಸಂವಿಧಾನ ವಿರೋಧಿ ನಡೆ. 2017ರಲ್ಲಿ ಸುಪ್ರೀಂ ಕೋರ್ಟ್, ಖಾಸಗಿತನ ಎನ್ನುವುದು ಮೂಲಭೂತ ಹಕ್ಕು ಎಂದು ತೀರ್ಪು ನೀಡಿತ್ತು. ಈ ಆದೇಶ ಭಾರತದ ಎಲ್ಲ ನಾಗರಿಕರಿಗೂ ಅನ್ವಯ ಆಗುತ್ತದೆ ಮತ್ತು ಅನುಷ್ಠಾನಕ್ಕೂ ಬರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಹೈಕೋರ್ಟ್ ಅಡ್ವಕೇಟ್ ಕಾರಮ್ ಕೋಮಿರೆಡ್ಡಿ , ಪೊಲೀಸರು ಮೊಬೈಲನ್ನು ಪಡೆದು ತಪಾಸಣೆ ನಡೆಸುವುದು ಖಾಸಗಿತನದ ಉಲ್ಲಂಘನೆಯಾಗುತ್ತದೆ. ಖಾಸಗಿತನದ ಹಕ್ಕು ಸಂವಿಧಾನದ ಮೂಲಭೂತ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತದೆ. ಆರ್ಟಿಕಲ್ 21 ಪ್ರಕಾರ, ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿಯಲ್ಲಿ ಖಾಸಗಿತನವೂ ಬರುತ್ತದೆ. ಪೊಲೀಸರು ಮೊಬೈಲ್ ಚೆಕ್ ಮಾಡಬೇಕಂದ್ರೆ, ಒಮ್ಮಿಂದೊಮ್ಮೆಲೇ ಅದನ್ನು ಮಾಡುವಂತಿಲ್ಲ. ಅದಕ್ಕಾಗಿಯೇ ಕಾನೂನು ಪ್ರಕ್ರಿಯೆ ಇದ್ದು, ಅದನ್ನು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.
ಹೈದರಾಬಾದ್ ಪೊಲೀಸರು ಈ ಹಿಂದೆಯೂ ಇದೇ ರೀತಿ ಆಪರೇಶನ್ ಛಬೂತ್ರ ಎಂಬ ಹೆಸರಲ್ಲಿ ಫಿಂಗರ್ ಪ್ರಿಂಟ್ ಮತ್ತು ಫೋಟೋ ತೆಗೆದು ವಿವಾದಕ್ಕೀಡಾಗಿದ್ದರು. ಸಾರ್ವಜನಿಕರು ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದ ಬಳಿಕ ಆಪರೇಶನ್ ಸ್ಥಗಿತ ಆಗಿತ್ತು. ಸಕಾರಣವಿಲ್ಲದೆ ಕೈಬೆರಳಿನ ಹೆಬ್ಬೆಟ್ಟು ಮತ್ತು ಫೋಟೋ ತೆಗೆಯುವಂತಿಲ್ಲ ಎಂದು ತಗಾದೆ ತೆಗೆದಿದ್ದರು.
Telangana Police’s crackdown on drug peddling has come under the scanner after videos surfaced showing cops seemingly checking vehicles, inspecting mobile phones of commoners and detaining a few out of suspicion of anti-social activities. Activists allege that the police action is illegal, unconstitutional and targets poor people.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm