ಬ್ರೇಕಿಂಗ್ ನ್ಯೂಸ್
27-09-21 02:25 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.27: ಇತ್ತೀಚೆಗೆ ಇನ್ಫೋಸಿಸ್ ಸಂಸ್ಥೆಯನ್ನು ತುಕ್ಡೇ ಗ್ಯಾಂಗ್, ನಕ್ಸಲರನ್ನು ಬೆಂಬಲಿಸುವ ಸಂಸ್ಥೆಯೆಂದು ಟೀಕಿಸಿದ್ದ ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ಈಗ ಜಗತ್ತಿನಲ್ಲೇ ಮುಂಚೂಣಿ ಇರುವ ಅಮೆಜಾನ್ ಸಂಸ್ಥೆಯನ್ನು ಟಾರ್ಗೆಟ್ ಮಾಡಿದೆ. ಅಮೆಜಾನ್ ಸಂಸ್ಥೆ ಭಾರತದಲ್ಲಿ ವಹಿವಾಟು ನಡೆಸುತ್ತಿದ್ದರೂ, ಭಾರತ ವಿರೋಧಿ, ಹಿಂದು ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಟೀಕಿಸಿದ್ದಲ್ಲದೆ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿ ಕಟುವಾಗಿ ವ್ಯಂಗ್ಯ ಮಾಡಿದೆ.
ಈಸ್ಟ್ ಇಂಡಿಯಾ ಕಂಪನಿ 2.0 ಎಂಬ ಶೀರ್ಷಿಕೆಯಲ್ಲಿ ಅಂಕಣ ಬರೆದಿರುವ ಪಾಂಚಜನ್ಯ ಪತ್ರಿಕೆ, ಭಾರತದಲ್ಲಿ ವಹಿವಾಟು ನಡೆಸುವ ಅಮೆಜಾನ್ ಸಂಸ್ಥೆ ಇಲ್ಲಿನ ಕಾನೂನು, ಮೌಲ್ಯಗಳನ್ನು ಕಾಪಾಡಬೇಕು. ಆದರೆ, ಅಮೆಜಾನ್ ಪ್ರೈಮ್ ವಿಡಿಯೋಗಳಲ್ಲಿ ಹಿಂದು ಪರಂಪರೆ, ಮೌಲ್ಯಗಳನ್ನು ನಿಂದಿಸಿ ತೋರಿಸಲಾಗುತ್ತಿದೆ. ಬೇನಾಮಿ ಕಂಪನಿಗಳನ್ನು ಭಾರತದ ಡಿಜಿಟಲ್ ಮಾರುಕಟ್ಟೆಗೆ ತನ್ನ ಸ್ಪೇಸ್ ಮೂಲಕ ಎಂಟ್ರಿ ಕೊಡಿಸುತ್ತಿದೆ. ಈ ಮೂಲಕ ದೇಶದ ಇ-ಮಾರ್ಕೆಟ್ ಗಳನ್ನು ಕೈಗೆ ತೆಗೆದುಕೊಳ್ಳಲು ಹುನ್ನಾರ ನಡೆಸುತ್ತಿದೆ. ಅದರಲ್ಲೂ ತನ್ನ ಪ್ರೈಮ್ ವಿಡಿಯೋಗಳಲ್ಲಿ ಭಾರತೀಯ ಪರಂಪರೆ, ಮೌಲ್ಯಗಳನ್ನು ಟೀಕಿಸಿ, ಅಣಕಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಭಾರತದಲ್ಲಿ ಸಣ್ಣ ಕಂಪನಿಗಳಿಗೆ ದೊಡ್ಡ ಮಟ್ಟಿನಲ್ಲಿ ಜಾಗತಿಕ ಮಾರ್ಕೆಟ್ ಒದಗಿಸುವ ಭರವಸೆಯೊಂದಿಗೆ ಅಮೆಜಾನ್ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆದರೆ, ಅಮೆಜಾನ್ ಭಾರತಕ್ಕೆ ಬಂದು ಹೊರ ದೇಶದ ಕಂಪನಿಗಳನ್ನು ದೇಶದ ಜನರ ಮೇಲೆ ಹೇರುತ್ತಿದೆ. ಕ್ಲೌಡ್ ಟೇಲ್ ಮತ್ತು ಅಪೀರಿಯಾ ಮುಂತಾದ ಕಂಪನಿಗಳನ್ನು ತನ್ನಲ್ಲಿ ಹೆಚ್ಚು ಪ್ರೋತ್ಸಾಹಿಸುತ್ತಿದೆ. ಇವರೆಡು ಕಂಪನಿಗಳು ಅಮೆಜಾನ್ ಮಾರುಕಟ್ಟೆಯ ಒಟ್ಟು ವ್ಯವಹಾರದಲ್ಲಿ 35 ಶೇ. ಪಾಲನ್ನು ಕಬಳಿಸಿದೆ. ಇವರ ಶೈಲಿ ನೋಡಿದರೆ, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ರೀತಿ ಇದೆ. ಮೊದಲು ಭಾರತದ ಪರಂಪರೆ, ಮೌಲ್ಯಗಳ ಮೇಲೆ ದಾಳಿ ನಡೆಸಿದರೆ, ಆನಂತರ ಮತಾಂತರಕ್ಕೆ ಮುಂದಾಗುತ್ತದೆ.
ವಿದೇಶಿ ಕಂಪನಿಗಳು ಈಗ ಅದೇ ಮಾದರಿಯನ್ನು ಅನುಸರಿಸುತ್ತಿವೆ. ಅಮೆಝಾನ್ ಈ ಕಂಪನಿಗಳಿಗೆ ವೇದಿಕೆ ಒದಗಿಸುತ್ತಿದೆ. ಅಮೆಜಾನ್ ಒಟಿಟಿ ಪ್ಲಾಟ್ ಫಾರಂನಲ್ಲಿ ಪ್ರಸಾರವಾಗುವ ಪ್ರೈಮ್ ವಿಡಿಯೋಗಳ ಪೈಕಿ, ತಾಂದವ್, ಪಾತಾಲ್ ಲೋಕ್ ನಲ್ಲಿ ಹಿಂದು ವಿರೋಧಿ ವಿಚಾರಗಳಿವೆ. ಈ ರೀತಿಯ ಪ್ರೈಮ್ ವಿಡಿಯೋಗಳು ಹೆಚ್ಚು ಪ್ರಸಾರವಾಗುತ್ತಿದ್ದು, ಹೆಚ್ಚಿನವುಗಳಲ್ಲಿ ಭಾರತೀಯ ಜೀವನ ಮೌಲ್ಯಗಳನ್ನು ಅಣಕಿಸಲಾಗುತ್ತದೆ. ಹಿಂದು ಧರ್ಮದ ಮೌಲ್ಯಗಳನ್ನು ಅಣಕಿಸಲಾಗುತ್ತದೆ. ಹೆಚ್ಚಿನ ವಿಡಿಯೋಗಳಲ್ಲಿ ಹಿಂದು ವಿರೋಧಿ ವಿಚಾರಗಳಿರುವುದನ್ನು ಜನರು ಬೊಟ್ಟು ಮಾಡುತ್ತಿದ್ದಾರೆ.
ಇವೆಲ್ಲದನ್ನು ನೋಡಿದರೆ, ಅಮೆಜಾನ್ ಸಂಸ್ಥೆ ಪರೋಕ್ಷವಾಗಿ ದೇಶದಲ್ಲಿ ಕ್ರಿಸ್ತಿಯಾನಿಟಿಯನ್ನು ಪ್ರಮೋಟ್ ಮಾಡುತ್ತಿದೆ. ಈ ಕಂಪನಿಯಲ್ಲಿ ಎರಡು ಕ್ರಿಸ್ತಿಯನ್ ಸಂಸ್ಥೆಗಳೇ ಫಂಡಿಂಗ್ ಮಾಡಿವೆ ಎನ್ನುವುದನ್ನು ಗಮನಿಸಬೇಕು. ಹಾಗಾದ್ರೆ, ತಮ್ಮ ಹಿಡನ್ ಅಜೆಂಡಾವನ್ನು ಸಾಧಿಸುವುದೇ ಇವರ ಗುರಿಯಾಗಿದೆಯೇ ಎನ್ನುವ ಪ್ರಶ್ನೆ ಬರುತ್ತದೆ ಎಂದು ಪಾಂಚಜನ್ಯ ಪತ್ರಿಕೆ ಬರೆದಿದ್ದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
Titled “East India Company 2.0”, the cover story, written by Panchjanya Bureau, says, “Actually, Amazon too wants to have sole rights on the Indian market. For this it has started taking steps to encircle the political, economic and individual freedom of people here. It is accused of floating shell companies to capture the e-market platform, of bribing to have policies in its favor, and of airing programmes opposed to Indian culture through Prime Videos.”
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 06:05 pm
Mangalore Correspondent
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
16-05-25 09:20 pm
HK News Desk
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm