ಬ್ರೇಕಿಂಗ್ ನ್ಯೂಸ್
29-08-20 01:35 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 29: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರ ಪಕ್ಷದ ಹಿರಿಯ ನಾಯಕರಲ್ಲಿ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಸಾಂಸ್ಥಿಕ ಹುದ್ದೆಗಳಿಗೆ ಚುನಾವಣೆ ಮೂಲಕ ಆಯ್ಕೆ ನಡೆಯದೇ ಇದ್ದರೆ ಮುಂದಿನ 50 ವರ್ಷವೂ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿಯೇ ಕುಳಿತುಕೊಳ್ಳಬೇಕಷ್ಟೇ ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಗುಲಾಮ್ ನಬಿ ಆಝಾದ್, ತಳಮಟ್ಟದಿಂದಲೇ ಪಕ್ಷದ ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಬೇಕು. ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷ , ರಾಜ್ಯಾಧ್ಯಕ್ಷ ಹೀಗೆ ಎಲ್ಲ ವಿಭಾಗಗಳಿಗೆ ಚುನಾವಣೆ ನಡೆಯಬೇಕು. ತಮ್ಮ ಆಯ್ಕೆ ಬಗ್ಗೆ ಭಯ ಇರುವವರು ಮಾತ್ರ ಚುನಾವಣೆಗೆ ವಿರೋಧ ಮಾಡುತ್ತಾರೆ ಎಂದು ಹೇಳಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿದರೆ ನೀವು ಕಡಿಮೆ ಅಂದರೂ 51 ಶೇಕಡಾ ಮತ ಪಡೆದೇ ಅಧ್ಯಕ್ಷನಾಗಬೇಕಷ್ಟೇ. ಉಳಿದವರು 10, 15 ಶೇಕಡಾ ಮತ ಪಡೆಯಬಹುದು. ಯಾವುದೇ ವ್ಯಕ್ತಿ ಸ್ಪರ್ಧೆಯಲ್ಲಿ ಗೆದ್ದು ಅಧ್ಯಕ್ಷ ಹುದ್ದೆಗೇರಿದರೆ ಆತನಿಗೆ 51 ಶೇಕಡಾ ಜನರ ಬೆಂಬಲ ಇದೆಯಂದರ್ಥ. ಆದರೆ ನೇಮಕಾತಿ ಮೂಲಕ ಅಧ್ಯಕ್ಷನ ಆಯ್ಕೆ ಆಗಿದ್ದಲ್ಲಿ ಆತನಿಗೆ ಒಂದು ಶೇಕಡಾ ಸದಸ್ಯರ ಬೆಂಬಲವೂ ಇರುವುದಿಲ್ಲ. ಸಿಡಬ್ಲ್ಯುಸಿ ಸದಸ್ಯರಿಂದ ಅಧ್ಯಕ್ಷನ ಆಯ್ಕೆ ಆಗಿದ್ದಲ್ಲಿ ಆತನನ್ನು ಕಿತ್ತು ಹಾಕುವ ಪ್ರಮೇಯವೂ ಬರುವುದಿಲ್ಲ. ಹಾಗಾದರೆ ಚುನಾವಣೆ ನಡೆದರೆ ಸಮಸ್ಯೆ ಏನು ಎಂದು ಆಜಾದ್ ಪ್ರಶ್ನೆ ಮಾಡಿದ್ದಾರೆ.
ಚುನಾವಣೆಯಲ್ಲಿ ಎರಡು, ಮೂರನೇ ಸ್ಥಾನ ಪಡೆದವರು ಮುಂದಿನ ಬಾರಿ ಆಯ್ಕೆಯಾಗಲು ಅವಕಾಶಗಳಿರುತ್ತವೆ. ಇಂತಹ ಸ್ಪರ್ಧೆಯಿಂದ ಪಕ್ಷ ತಳಮಟ್ಟದಿಂದ ಗಟ್ಟಿಯಾಗುತ್ತದೆ. ಮುಂದೆ ಆಯ್ಕೆಯಾಗಲು ಬಯಸುವವರು ಸಹಜವಾಗಿಯೇ ಹೆಚ್ಚು ಶ್ರಮ ವಹಿಸುತ್ತಾರೆ. ಅದೇ ನೇಮಕಾತಿ ಮೂಲಕ ಅಧ್ಯಕ್ಷನಾದಲ್ಲಿ ಆತನಿಗೆ ಪಾರ್ಟಿ ಸದಸ್ಯರ ಬೆಂಬಲ ಇರಬೇಕಂತಿಲ್ಲ. ಪಕ್ಷದ ತಳಪಾಯ ಗಟ್ಟಿಗೊಳ್ಳುವ ಅವಕಾಶವೂ ಸಿಗಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ನಾನು ಮುಖ್ಯಮಂತ್ರಿ, ರಾಜ್ಯಸಭೆ ಸದಸ್ಯ, ಎಐಸಿಸಿ ಸದಸ್ಯ ವಿವಿಧ ಹುದ್ದೆಗಳನ್ನು ಹೊಂದಿದ್ದೇನೆ. ನನಗೇನು ಯಾವುದೇ ಆಸೆಯಿಲ್ಲ. ಅಧ್ಯಕ್ಷನಾಗುವ ಆಸೆಯೂ ಇಲ್ಲ. ಪಕ್ಷದಲ್ಲಿ ಸಕ್ರಿಯವಾಗಿ ಆರೇಳು ವರ್ಷ ಇರಬಹುದಷ್ಟೆ. ಆದರೆ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಚುನಾವಣೆ ಬಗ್ಗೆ ಹೇಳುತ್ತಿದ್ದೇನೆ ಎಂದು ಗುಲಾಂ ನಬಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷನ ಆಯ್ಕೆ ಆಗಬೇಕೆಂದು 23 ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಅವರಲ್ಲಿ ಗುಲಾಂ ನಬಿ ಆಜಾದ್, ವೀರಪ್ಪ ಮೊಯ್ಲಿ , ಶಶಿ ತರೂರ್, ಕಪಿಲ್ ಸಿಬಲ್, ಮುಕುಲ್ ವಾಸ್ನಿಕ್ ಪ್ರಮುಖರು. ಈ ಪತ್ರ ಮಾಧ್ಯಮಕ್ಕೆ ಲೀಕ್ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ವಿವಾದದ ಅಲೆ ಎದ್ದಿದೆ. ಸದ್ಯಕ್ಕೆ ಹೊಸ ಅಧ್ಯಕ್ಷನ ನೇಮಕ ಆಗುವಲ್ಲಿ ವರೆಗೆ ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಿ ಇರಲಿದ್ದಾರೆ ಎಂದು ನಿರ್ಣಯಿಸಲಾಗಿದೆ. ಆದರೆ, ಈ ಪತ್ರದ ವಿಚಾರ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಕಚ್ಚಾಟಕ್ಕೆ ಕಾರಣವಾಗಿದೆ. ಗುಲಾಮ್ ನಬಿ ಆಜಾದ್ ಈಗ ಅಧ್ಯಕ್ಷ ಹುದ್ದೆಗೂ ಚುನಾವಣೆ ನಡೆಯಲಿ ಎಂದು ಹೇಳಿಕೆ ನೀಡಿರುವುದು ಪಕ್ಷದಲ್ಲಿ ಸಂಚಲನ ಸೃಷ್ಟಿಸಲಿದೆ.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm