Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆಫ್ ವಿಜಯ್ ಘರ್ಜನೆ ; ಹತ್ತು ಲಕ್ಷ ಕೋಟಿ ಸಾಲ ಮಾಡಿಟ್ಟಿದ್ದಾರೆ, ಹಣಕಾಸು ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ! ನಿಮ್ಮ ಮಗನಾಗಿ, ಸೋದರನಾಗಿ ಸ್ವೀಕರಿಸಿ, 200 ಯುನಿಟ್ ಉಚಿತ ವಿದ್ಯುತ್ತಿಗೆ ಸಹಿ ! 

10-05-26 12:26 pm       HK News Staffer   ದೇಶ - ವಿದೇಶ

ಒಂದು ವಾರದ ಹಾವು ಏಣಿಯಾಟದ ಬಳಿಕ ತಮಿಳುನಾಡು ಮುಖ್ಯಮಂತ್ರಿಯಾಗಿ ತಿರು ಜೋಸೆಫ್ ವಿಜಯ್ ಕೊನೆಗೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ‌ಒಂಬತ್ತು ಮಂದಿ ಸಚಿವರ ಜೊತೆಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಅವರಿಂದ ಪ್ರಮಾಣ ಸ್ವೀಕಾರ ಮಾಡಿದ್ದಾರೆ. 

ಚೆನ್ನೈ, ಮೇ 10: ಒಂದು ವಾರದ ಹಾವು ಏಣಿಯಾಟದ ಬಳಿಕ ತಮಿಳುನಾಡು ಮುಖ್ಯಮಂತ್ರಿಯಾಗಿ ತಿರು ಜೋಸೆಫ್ ವಿಜಯ್ ಕೊನೆಗೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ‌ಒಂಬತ್ತು ಮಂದಿ ಸಚಿವರ ಜೊತೆಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಅವರಿಂದ ಪ್ರಮಾಣ ಸ್ವೀಕಾರ ಮಾಡಿದ್ದಾರೆ. 

ಮುಖ್ಯಮಂತ್ರಿ ಪದವಿ ಸ್ವೀಕರಿಸಿ ಮೊದಲ ಭಾಷಣದಲ್ಲಿಯೇ ವಿಜಯ್ ತನ್ನ ಅಭಿಮಾನಿಗಳನ್ನು ಆಕರ್ಷಿಸುವ ಭಾಷಣ ಮಾಡಿದ್ದಾರೆ. ನಿಮ್ಮೆಲ್ಲರ ಮಗನಾಗಿ, ಸೋದರನಾಗಿ ನನ್ನನ್ನು ಈ ಹಂತಕ್ಕೆ ಬೆಳೆಸಿದ್ದೀರಿ, ನಾನು ನಿಮ್ಮೆಲ್ಲರಿಗೆ ಆಭಾರಿಯಾಗಿದ್ದೇನೆ. ಸದಾ ನಿಮ್ಮೊಂದಿಗೆ ಇರುತ್ತೇನೆ. ನಾನು ಮುಖ್ಯಮಂತ್ರಿ ಆಗಿರಬಹುದು, ಆದರೆ ನನ್ನ ಪಕ್ಷದ ಕಾರ್ಯಕರ್ತನ ಮುಂದೆ ನಾನು ಸಣ್ಣವನು ಎಂದು ಹೇಳಿ ವಿಜಯ್ ಭಾವುಕ ಮಾತುಗಳನ್ನಾಡಿದ್ದಾರೆ. 

ಅಲ್ಲದೆ, ನಿರ್ಗಮನ ಮುಖ್ಯಮಂತ್ರಿ ಡಿಎಂಕೆ ಪಕ್ಷದ ಎಂಕೆ ಸ್ಟಾಲಿನ್ ಬಗ್ಗೆ ಕಿಡಿಕಾರಿದ್ದು ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿಟ್ಟು ಹೋಗಿದ್ದಾರೆ. ಹತ್ತು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ತಮಿಳುನಾಡು ಜನರನ್ನು ಸಾಲಗಾರನಾಗಿ ಮಾಡಿದ್ದಾರೆ. ಹಣಕಾಸು ಸ್ಥಿತಿಯನ್ನು ಪರಿಶೀಲನೆ ಮಾಡಿದ ಬಳಿಕ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಗುಡುಗಿದ ವಿಜಯ್, ಆದರೆ ನನ್ನೆಲ್ಲ ಯುವ ಅಭಿಮಾನಿಗಳಿಗೆ ಈ ಮಾಮಾ ಒಂದು ಮಾತು ಹೇಳುತ್ತೇನೆ, ನಾನ್ಯಾವತ್ತೂ ನಿಮ್ಮ ಕೈಬಿಟ್ಟು ಹೋಗಲ್ಲ. ನೀವೇ ನನ್ನ ಜೀವನ, ನಿಮಗಾಗಿ ಒಳ್ಳೆಯದನ್ನೇ ಮಾಡುತ್ತೇನೆ. ತಮಿಳುನಾಡಿನಲ್ಲಿ ಹೊಸ ಸೆಕ್ಯುಲರ್, ಸಮಾನತೆಯ ಸರ್ಕಾರದ ಆಡಳಿತವನ್ನು ಕೊಡುತ್ತೇನೆ ಎಂದು ಹೇಳಿದರು. 

ಇದಲ್ಲದೆ, ಸಿಎಂ ಆಗುತ್ತಲೇ ರಾಜ್ಯದಲ್ಲಿ ಎಲ್ಲ ಕುಟುಂಬಗಳಿಗೂ ಪ್ರತಿ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಕ್ಕೆ ಅಧಿಕೃತ ಸಹಿ ಮಾಡಿದ್ದಾರೆ. ನಿನ್ನೆಯಷ್ಟೇ ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳು ವಿಜಯ್ ಅವರ ಟಿವಿಕೆಗೆ ಬೆಂಬಲ ಘೋಷಿಸಿದ್ದು ಇದರೊಂದಿಗೆ ಬಹುಮತ 120 ಸ್ಥಾನಕ್ಕೆ ಏರಿಕೆಯಾಗಿತ್ತು. ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಹತ್ತು ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಮೂಲಕ ಎಂಜಿಆರ್, ಜಯಲಲಿತಾ ಬಳಿಕ ಸಿನಿಮಾ ರಂಗದಿಂದ ನೇರ ರಾಜಕೀಯಕ್ಕಿಳಿದು ಸಿಎಂ ಸ್ಥಾನಕ್ಕೇರಿ ಹೊಸ ದಾಖಲೆ ಬರೆದಿದ್ದಾರೆ.

ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಿತ್ರಪಕ್ಷಗಳ ಇತರ ನಾಯಕರು, ಸಿನಿಮಾ ನಟಿ ತ್ರಿಷಾ ಉಪಸ್ಥಿತರಿದ್ದರು.

After a week of intense political drama, Thiru Joseph Vijay has finally taken oath as the Chief Minister of Tamil Nadu. Governor Rajendra Vishwanath Arlekar administered the oath of office to Vijay along with nine ministers at a grand ceremony held in Chennai.