ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್ ರಿಲೀಫ್‌ನಿಂದ ರೈಲ್ವೆ ವರೆಗೆ – ಬಜೆಟ್ 2026-27 ಏನ್ ಕೊಡುತ್ತೆ? ಜನರ ನಿರೀಕ್ಷೆ ಏನೇನು ? ಮೋದಿ- ನಿರ್ಮಲಕ್ಕನ ಲೆಕ್ಕ ಏನಿರುತ್ತೋ? 

31-01-26 10:20 pm       HK News Desk   ದೇಶ - ವಿದೇಶ

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಈ ಸಲದ ಬಜೆಟ್‌ನಲ್ಲಿ ಸರ್ಕಾರ ಯಾವ ಕ್ಷೇತ್ರದ ಮೇಲೆ ಹೆಚ್ಚು ಒತ್ತು ಕೊಡುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿದೆ. ಜಾಗತಿಕ ಆರ್ಥಿಕ ಅಸ್ಥಿರತೆ, ಅಮೆರಿಕದ ಸುಂಕದ ಬರೆ ಹಿನ್ನೆಲೆಯಲ್ಲಿ ದೇಶದೊಳಗೆ ಉತ್ಪಾದನಾ ಕ್ಷೇತ್ರಕ್ಕೆ ಬೂಸ್ಟಿಂಗ್ ನೀಡಲು ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ದೇಶದ ಜಿಡಿಪಿ ಬೆಳವಣಿಗೆಗೆ ಒತ್ತು ಕೊಡಲು ಸರ್ಕಾರ ಅಜೆಂಡಾ ಮಾಡಿಕೊಂಡ ರೀತಿ ಇದೆ.

ನವದೆಹಲಿ, ಜ.31 : ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಈ ಸಲದ ಬಜೆಟ್‌ನಲ್ಲಿ ಸರ್ಕಾರ ಯಾವ ಕ್ಷೇತ್ರದ ಮೇಲೆ ಹೆಚ್ಚು ಒತ್ತು ಕೊಡುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿದೆ. ಜಾಗತಿಕ ಆರ್ಥಿಕ ಅಸ್ಥಿರತೆ, ಅಮೆರಿಕದ ಸುಂಕದ ಬರೆ ಹಿನ್ನೆಲೆಯಲ್ಲಿ ದೇಶದೊಳಗೆ ಉತ್ಪಾದನಾ ಕ್ಷೇತ್ರಕ್ಕೆ ಬೂಸ್ಟಿಂಗ್ ನೀಡಲು ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ದೇಶದ ಜಿಡಿಪಿ ಬೆಳವಣಿಗೆಗೆ ಒತ್ತು ಕೊಡಲು ಸರ್ಕಾರ ಅಜೆಂಡಾ ಮಾಡಿಕೊಂಡ ರೀತಿ ಇದೆ.

ಟ್ಯಾಕ್ಸ್ ಕಟ್ಟೋರಿಗೆ ಗುಡ್ ನ್ಯೂಸ್ ಇದೆಯಾ?

ಇನ್ಕಮ್ ಟ್ಯಾಕ್ಸ್ ಮೇಲೆ 2024 ಮತ್ತು 2025ರ ಬಜೆಟ್‌ನಲ್ಲಿ ಸ್ವಲ್ಪ ರಿಲೀಫ್ ಸಿಕ್ಕಿದ್ದರೂ, ಈ ಸಲ ಜನರ ನಿರೀಕ್ಷೆ ಇನ್ನೂ ಜಾಸ್ತಿ ಇದೆ. ಬಜೆಟ್ 2026-27ರಲ್ಲಿ ಟ್ಯಾಕ್ಸ್ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಆಗಿ, ಜನರ ಕೈಯಲ್ಲಿ ಹೆಚ್ಚು ದುಡ್ಡು ಉಳಿಯುತ್ತಾ? ಮಧ್ಯಮ ವರ್ಗದವರು ಇದನ್ನೇ ಕಾದು ನೋಡ್ತಿದ್ದಾರೆ.

ಹಿರಿಯ ನಾಗರಿಕರಿಗೆ ದೊಡ್ಡ ರಿಲೀಫ್?

ಹಿರಿಯ ನಾಗರಿಕರಿಗೆ ಬ್ಯಾಂಕ್ ಬಡ್ಡಿ ಹಣವೇ ಜೀವನದ ಆಧಾರ. ಇವರಿಗಾಗಿ ಸೆಕ್ಷನ್ 80 TTB ಅಡಿಯಲ್ಲಿ ಸಿಗೋ ₹50,000 ರಿಯಾಯಿತಿಯನ್ನು ₹1 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಇದು ಜಾರಿಯಾದ್ರೆ ವಯೋವೃದ್ಧರಿಗೆ ದೊಡ್ಡ ನೆಮ್ಮದಿ ಸಿಗುತ್ತೆ. ಜೊತೆಗೆ ಮೆಡಿಕಲ್, ಟ್ರಾವೆಲ್‌ನಲ್ಲಿ ಇನ್ನಷ್ಟು ಸೌಲಭ್ಯ ಸಿಗುತ್ತಾ ಅನ್ನೋ ಕುತೂಹಲ ಇದೆ.

ಮನೆ ಸಾಲದ ಬಡ್ಡಿಗೆ ನೆಮ್ಮದಿ ಬರತ್ತಾ?

ಈಗಿನ ದಿನಗಳಲ್ಲಿ ಮನೆ‌ ಕಟ್ಟೋದು ಅಂದ್ರೆ ಸಾಹಸವೇ ಸರಿ. ಗೃಹ ಸಾಲದ ಬಡ್ಡಿ ಕಟ್ಟಿ ಸುಸ್ತಾಗಿರೋರಿಗೆ ಈ ಬಜೆಟ್ ಸ್ವಲ್ಪ ರಿಲೀಫ್ ಕೊಡಬಹುದು. ಸೆಕ್ಷನ್ 24(b) ಅಡಿಯಲ್ಲಿ ಸ್ವಂತ ಮನೆಗೆ ಸಿಗೋ ₹2 ಲಕ್ಷ ಬಡ್ಡಿ ಕಡಿತದ ಮಿತಿಯನ್ನ ಹೆಚ್ಚಿಸೋ ಪ್ಲಾನ್ ಇದೆ ಅನ್ನೋ ಮಾತು ಕೇಳಿ ಬರ್ತಿದೆ. ಇದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಬೂಸ್ಟ್ ಸಿಗುವ ಸಾಧ್ಯತೆ ಇದೆ.

ಸಣ್ಣ ಉದ್ಯಮಗಳಿಗೆ ದೊಡ್ಡ ಶಕ್ತಿ!

ದೇಶದ ಆರ್ಥಿಕ ಬೆನ್ನೆಲುಬಾಗಿರೋ MSME ಕ್ಷೇತ್ರಕ್ಕೆ ದೊಡ್ಡ ಘೋಷಣೆಗಳು ಬರಬಹುದು. ‘ಮೇಕ್ ಇನ್ ಇಂಡಿಯಾ’ಗೆ ಇನ್ನಷ್ಟು ಒತ್ತು ಕೊಟ್ಟು, ನಮ್ಮ ಲೋಕಲ್ ಬ್ರ್ಯಾಂಡ್‌ಗಳು ಗ್ಲೋಬಲ್ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡೋ ಹಾಗೆ ಸರ್ಕಾರ ಪ್ಲಾನ್ ಮಾಡ್ತಿದೆ. ಇದರಿಂದ ಸ್ಥಳೀಯ ಉದ್ಯೋಗಕ್ಕೂ ಬಂಪರ್ ಲಾಭ ಸಿಗಲಿದೆ.

ರೈಲ್ವೆಗೆ ದಾಖಲೆ ಅನುದಾನ?

ಇತ್ತೀಚಿನ ರೈಲು ಅಪಘಾತಗಳ ಹಿನ್ನೆಲೆಯಲ್ಲಿ ಸುರಕ್ಷತೆ ಸರ್ಕಾರದ ಟಾಪ್ ಪ್ರಿಯಾರಿಟಿ ಆಗಿದೆ.
ಈ ಸಲ ರೈಲ್ವೆ ಬಜೆಟ್‌ ಅನ್ನು ಕಳೆದ ಬಾರಿಗಿಂತ ಸುಮಾರು 10% ಹೆಚ್ಚಿಸಿ ₹ 2.75 ಲಕ್ಷ ಕೋಟಿ ರೂ. ಮೀಸಲಿಡೋ ನಿರೀಕ್ಷೆ ಇದೆ. ‘ಕವಚ್ (KAVACH)’ ಸುರಕ್ಷತಾ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಲು ಈ ಹಣ ಬಳಸುವ ಸಾಧ್ಯತೆ ಜಾಸ್ತಿ.

ರೈತರಿಗೆ ಹೊಸ ಬೀಜ ಮಂತ್ರ!

ಅನ್ನದಾತನಿಗೂ ಈ ಬಜೆಟ್‌ನಲ್ಲಿ ಸಿಹಿ ಸುದ್ದಿ ಕಾದಿದೆ. ಹೊಸ ‘ಬೀಜ ಮಸೂದೆ’ ಜಾರಿ ಮೂಲಕ ಕೃಷಿಗೆ ಸುಮಾರು ₹1.5 ಲಕ್ಷ ಕೋಟಿ ಹೆಚ್ಚುವರಿ ಅನುದಾನ ಸಿಗಬಹುದು. ಇದರಿಂದ ಕೃಷಿ ಉತ್ಪಾದನೆ ಹೆಚ್ಚಾಗಿ, ರೈತರ ಆದಾಯ ಹೆಚ್ಚಿಸುವುದು ಸರ್ಕಾರದ ಗುರಿ.

ಡಿಜಿಟಲ್ ಇಂಡಿಯಾ & AI ಹವಾ!

ಇದು AI ಯುಗ. ಡಿಜಿಟಲ್ ಆರ್ಥಿಕತೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್ ಸಂಬಂಧಿಸಿದ ಹೊಸ ಘೋಷಣೆಗಳು ಈ ಬಜೆಟ್‌ನಲ್ಲಿ ಕೇಳಿ ಬರೋ ಸಾಧ್ಯತೆ ಇದೆ.
ಒಟ್ಟಾರೆ, ಫೆಬ್ರವರಿ 1ರಂದು ಬಜೆಟ್ ಪೆಟ್ಟಿಗೆ ತೆರೆದ ಮೇಲಷ್ಟೇ ಅಸಲಿ ಮ್ಯಾಜಿಕ್ ಗೊತ್ತಾಗಲಿದೆ!

The Union Budget 2026–27 will be presented on February 1, with Finance Minister Nirmala Sitharaman set to table her ninth consecutive Budget. Amid global economic uncertainty and trade pressures, expectations are high over the government’s focus areas — from income tax relief to infrastructure, MSMEs, agriculture, and digital innovation.