ಬ್ರೇಕಿಂಗ್ ನ್ಯೂಸ್
18-01-26 08:20 pm HK News Desk ದೇಶ - ವಿದೇಶ
ಮುಂಬೈ, ಜ.18: ಬಾಲಿವುಡ್ ಚಿತ್ರರಂಗ ಕೋಮುವಾದದತ್ತ ಹೊರಳುತ್ತಿದೆ, ಅದರಿಂದಾಗಿ ನನ್ನಂಥವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆಡಿರುವ ಮಾತು ವಿವಾದಕ್ಕೆ ಕಾರಣವಾಗಿದ್ದು, ಚಿತ್ರರಂಗದ ಹಲವು ದಿಗ್ಗಜರು ರೆಹ್ಮಾನ್ ವಾದವನ್ನು ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ರೆಹ್ಮಾನ್ ಸ್ಪಷ್ಟೀಕರಣ ನೀಡಿದ್ದು, ತನ್ನ ಮಾತನ್ನು ಅರ್ಥ ಮಾಡಿಕೊಂಡಿದ್ದು ತಪ್ಪಾಗಿದೆ ಎಂದು ಹೇಳಿದ್ದಾರೆ.
ಭಾರತವೇ ನನ್ನ ಸಂಗೀತಕ್ಕೆ ಪ್ರೇರಣೆ, ನನ್ನ ಪಾಲಿಗೆ ಗುರು. ನನ್ನ ಮಾತುಗಳು ಕೆಲವರಿಗೆ ಅನರ್ಥವಾಗಿ ತೋರಿದೆ ಎನ್ನುವುದು ಅರಿವಿಗೆ ಬಂದಿದೆ. ಆದರೆ ನನ್ನ ಮಾತುಗಳು ಸಂಗೀತವನ್ನು ಎತ್ತರಿಸುವುದು ಮತ್ತು ಗೌರವ ಕೊಡಿಸುವ ಉದ್ದೇಶ ಹೊಂದಿದ್ದವು. ಯಾರಿಗೂ ನೋವು ಮಾಡುವ ಉದ್ದೇಶ ಇರಲಿಲ್ಲ, ಪ್ರಾಮಾಣಿಕ ಅನಿಸಿಕೆ ಹೇಳಿಕೊಂಡಿದ್ದೆ ಅಷ್ಟೇ ಎಂದು ರೆಹಮಾನ್ ತನ್ನ ಮಾತು ವಿವಾದ ಆಗುತ್ತಲೇ ಸ್ಪಷ್ಟನೆ ಹೇಳಿದ್ದಾರೆ.
ಬಿಬಿಸಿ ಏಶ್ಯನ್ ನೆಟ್ವರ್ಕ್ ಜೊತೆಗಿನ ಸಂದರ್ಶನ ಸಂದರ್ಭದಲ್ಲಿ ಎ.ಆರ್.ರೆಹಮಾನ್, ಯಾವುದಾದ್ರೂ ಪೂರ್ವಾಗ್ರಹ ಪೀಡಿತ ತೊಂದರೆಯನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ, ಅಂತಹ ತೊಂದರೆ ನೇರವಾಗಿ ನನ್ನ ಅರಿವಿಗೆ ಬಂದಿಲ್ಲ, ಆದರೆ ಕಳೆದ ಎಂಟು ವರ್ಷಗಳಲ್ಲಿ ಅಧಿಕಾರ ರಾಜಕಾರಣ ಬದಲಾವಣೆ ಆಗಿರುವ ಕಾರಣವೋ ಗೊತ್ತಿಲ್ಲ. ಕ್ರಿಯೇಟಿವಿಟಿ ಇಲ್ಲದವರು ಮುನ್ನೆಲೆಗೆ ಬಂದಿದ್ದಾರೆ. ಇದರ ಹಿಂದೆ ಕಮ್ಯುನಲ್ ವಿಷಯವೂ ಇದ್ದಿರಬಹುದು ಎಂದು ಹೇಳಿದ್ದರು. ಇಲ್ಲಿ ಕಮ್ಯುನಲ್ ಕಾರಣಕ್ಕೆ ತನಗೆ ಅವಕಾಶಗಳು ಸಿಗುತ್ತಿಲ್ಲ ಅನ್ನುವ ವಿಚಾರ ಹೈಲೈಟ್ ಆಗಿದ್ದರಿಂದ ರೆಹಮಾನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಪೂರ್ವಾಗ್ರಹ ಪೀಡಿತ – ಕಂಗನಾ
ರೆಹಮಾನ್ ಹೇಳಿಕೆಯನ್ನು ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್ ತೀವ್ರ ಖಂಡಿಸಿದ್ದು, ರೆಹಮಾನ್ ಹೇಳಿಕೆ ಪೂರ್ವಾಗ್ರಹ ಪೀಡಿತ ಮತ್ತು ನಿಂದನಾತ್ಮಕ ಎಂದು ಟೀಕಿಸಿದ್ದಾರೆ. ನನ್ನ ಎಮರ್ಜೆನ್ಸಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿಕೊಳ್ಳಲು ನಿಮ್ಮನ್ನು ಕೇಳಿಕೊಂಡಿದ್ದೆ. ಆದರೆ ನೀವು ಅದರ ಬಗ್ಗೆ ಮಾತನಾಡುವುದಕ್ಕೂ ನಿರಾಕರಣೆ ಮಾಡಿದ್ದೀರಿ. ನನ್ನ ಚಿತ್ರದ ಬಗ್ಗೆ ವಿರೋಧ ಪಕ್ಷದವರು ಕೂಡ ಶಹಭಾಷ್ ಹೇಳಿದ್ದಾರೆ. ಆದರೆ ನೀವು ಮಾತ್ರ ಕುರುಡಾಗಿ ವರ್ತಿಸಿದ್ದೀರಿ ಎಂದು ಟೀಕಿಸಿದ್ದಾರೆ.
ಛಾವಾದಿಂದ ಪ್ರತ್ಯೇಕತೆ ಎಂದಿದ್ದ ರೆಹ್ಮಾನ್
ತನ್ನ ಸಂದರ್ಶನದಲ್ಲಿ ಶಿವಾಜಿಯ ಮಗ ಸಂಭಾಜಿ ಕುರಿತ ಛಾವಾ ಚಿತ್ರದ ಬಗ್ಗೆ ಮಾತನಾಡಿದ್ದ ರೆಹಮಾನ್, ಅದೊಂದು ಜನರಲ್ಲಿ ಪ್ರತ್ಯೇಕವಾದ ಬಿತ್ತುವ ರೀತಿಯ ಚಿತ್ರ. ಅದರ ನಿರ್ದೇಶಕರಿಗೆ ಈ ಚಿತ್ರಕ್ಕೆ ನಾನು ಯಾಕೆ ಬೇಕು ಅಂತ ಕೇಳಿದ್ದೆ. ಆದರೆ ಇದಕ್ಕೆ ನೀವೇ ಬೇಕು, ಅದೊಂದು ರೀತಿ ಎಂಜಾಯ್ ಮಾಡಬಲ್ಲ ಚಿತ್ರ ಎಂದಿದ್ದರು. ಆದರೆ ಜನರು ನಮಗಿಂತ ಹೆಚ್ಚು ಸ್ಮಾರ್ಟ್ ಇದ್ದಾರಲ್ವಾ.. ಇದರಿಂದ ಜನರು ಪ್ರೇರಣೆಗೊಂಡಿದ್ದು ನಿಜ ತಾನೇ.. ಅದರಲ್ಲಿ ಕೆಲವು ವಿಚಾರಗಳನ್ನು ತೋರಿಸಿದ್ದಾರೆ, ಯಾರಿಗೊತ್ತು ನಿಜ ಏನೆಂದು, ಇತಿಹಾಸ ತಿರುಚಿದ್ದಾರೆಯೇ ಅಂತ ಗೊತ್ತಿಲ್ಲ ಅಲ್ವಾ.. ಎಂದು ಹೇಳುವ ಮೂಲಕ ಚಿತ್ರವನ್ನು ಟೀಕಿಸಿದ್ದರು.
ಅಪಾಯಕಾರಿ ಹೇಳಿಕೆ, ಆ ರೀತಿ ಏನೂ ಇಲ್ಲ!
ರೆಹಮಾನ್ ಹೇಳಿಕೆಯನ್ನು ಬಾಲಿವುಡ್ ಚಿತ್ರರಂಗದ ದಿಗ್ಗಜರಾದ ಜಾವೇದ್ ಅಖ್ತರ್, ಶೋಭಾ ಡೇ ಸೇರಿದಂತೆ ಹಲವರು ಟೀಕಿಸಿದ್ದಾರೆ. ಇದೊಂದು ತುಂಬ ಅಪಾಯಕಾರಿ ಹೇಳಿಕೆ. ಆತ ಈ ರೀತಿ ಯಾಕೆ ಹೇಳಿದ್ದಾನೋ ಗೊತ್ತಿಲ್ಲ, ಆತನಲ್ಲೇ ಕೇಳಬೇಕು ಎಂದು ಶೋಭಾ ಡೇ ಪ್ರಶ್ನಿಸಿದ್ದಾರೆ. ನಾನು 50 ವರ್ಷಗಳಿಂದ ಬಾಲಿವುಡ್ ನೋಡಿಕೊಂಡು ಬಂದಿದ್ದೇನೆ, ಕಮ್ಯುನಲ್ ಅನ್ನುವುದು ಅಲ್ಲಿ ಕಾಣಿಸಿಕೊಂಡಿಲ್ಲ, ಯಾರಿಗೆ ಟ್ಯಾಲೆಂಟ್ ಇದೆಯೋ ಅವರು ಶೈನ್ ಆಗುತ್ತಾರೆ. ಧರ್ಮದ ಕಾರಣಕ್ಕೆ ಅವಕಾಶ ಸಿಕ್ಕಿಲ್ಲ ಅನ್ನುವುದನ್ನು ಒಪ್ಪಲ್ಲ ಎಂದಿದ್ದಾರೆ.
ಜಾವೇದ್ ಅಕ್ತರ್ ಕೂಡ ಪ್ರತಿಕ್ರಿಯಿಸಿದ್ದು, ಆ ರೀತಿ ನನಗೆ ಯಾವತ್ತೂ ಅನಿಸಿಲ್ಲ, ನಾನು ಎಲ್ಲರ ಜೊತೆಗೂ ಜೊತೆಯಾಗಿದ್ದೇನೆ. ಎಲ್ಲರೂ ರೆಹಮಾನ್ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ರೆಹಮಾನ್ ಅಷ್ಟು ದೊಡ್ಡ ಸ್ಥಾನ ಪಡೆದಿದ್ದಾರೆ. ನಿರ್ಮಾಪಕನೇ ಆದ್ರೂ ರೆಹಮಾನ್ ಬಳಿ ನೇರ ಹೋಗಲು ಭಯಪಡುತ್ತಾನೆ ಎಂದು ಹೇಳಿದ್ದಾರೆ.
A R Rahman has become a cry baby (or a Islamic propagandist??).
— Kana (@Kanatunga) January 17, 2026
In 2020, he said "a gang working against me"
Now, he blames "communal bias" for not getting work.
ON AN INTERNATIONAL MEDIA PLATFORM.
He is returning the gratitude to the country.🫡🫡pic.twitter.com/qnQr0Z2SlW pic.twitter.com/d3W74vMQrQ
Music maestro A.R. Rahman’s comment suggesting that communal factors may have limited his opportunities in recent years has triggered sharp reactions across Bollywood. Kangana Ranaut called the remark “biased,” while Shobhaa De termed it “dangerous,” and Javed Akhtar rejected the claim outright. Amid the backlash, Rahman clarified that his words were misunderstood, stressing that India is his greatest inspiration and that he never intended to hurt sentiments or demean the film industry.
18-01-26 03:34 pm
Bangalore Correspondent
ಬ್ಯಾನರ್ ಗಲಾಟೆ ; ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ಬ...
17-01-26 08:02 pm
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
18-01-26 08:20 pm
HK News Desk
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
18-01-26 12:58 pm
Mangalore Correspondent
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm