ಬ್ರೇಕಿಂಗ್ ನ್ಯೂಸ್
31-08-25 01:04 pm HK News Desk ದೇಶ - ವಿದೇಶ
ಕಾಸರಗೋಡು, ಆ.31 : ಕಣ್ಣೂರು ಜಿಲ್ಲೆಯ ಕಣ್ಣಾಪುರಂ ಎಂಬಲ್ಲಿನ ಮನೆಯೊಂದರಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿದ್ದು, ವ್ಯಕ್ತಿಯೊಬ್ಬ ಛಿದ್ರ ಛಿದ್ರಗೊಂಡಿದ್ದಾನೆ. ಇನ್ನೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾನೆ. ಕಣ್ಣೂರು ನಗರದ ಚಾಲಾಡ್ ನಿವಾಸಿ ಮುಹಮ್ಮದ್ ಆಶಮ್ ಮೃತಪಟ್ಟವರೆಂದು ಗುರುತು ಪತ್ತೆ ಮಾಡಲಾಗಿದೆ.
ಘಟನೆಯಲ್ಲಿ ಮನೆ ಸಂಪೂರ್ಣ ಧ್ವಂಸಗೊಂಡಿದ್ದು, ಮೃತಪಟ್ಟ ವ್ಯಕ್ತಿಯ ದೇಹ ಛಿದ್ರಗೊಂಡಿದೆ. ಮೂವರು ವ್ಯಕ್ತಿಗಳು ಬಾಡಿಗೆ ಪಡೆದಿದ್ದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯೊಳಗೆ ಬಾಂಬ್ ನಿರ್ಮಾಣ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧಿಸಿ ಅನು ಮಲಿಕ್ ಎಂಬಾತನನ್ನು ಕಾಞಂಗಾಡ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸ್ಫೋಟ ನಡೆದ ಮನೆಯನ್ನು ಅನು ಮಲಿಕ್ ಬಾಡಿಗೆಗೆ ಪಡೆದಿದ್ದು, ಮೃತ ವ್ಯಕ್ತಿ ಈತನ ಸಂಬಂಧಿ. ಇವರು ಪೆರಿಯಾರಂನಲ್ಲಿ ಬಿಡಿ ಭಾಗಗಳ ಅಂಗಡಿ ಹೊಂದಿದ್ದು ವ್ಯಾಪಾರ ಮಾಡುತ್ತಿದ್ದರು ಎಂದು ಮನೆಯ ಮಾಲೀಕ ಗೋವಿಂದನ್ ತಿಳಿಸಿದ್ದಾರೆ. ಆಸುಪಾಸಿನ ಮನೆ, ಕಟ್ಟಡಗಳಲ್ಲಿಯೂ ಬಿರುಕು ಉಂಟಾಗಿದ್ದು ಆ ಮನೆ ಪೂರ್ತಿಯಾಗಿ ನೆಲಸಮಗೊಂಡಿದೆ. ಸ್ಥಳದಲ್ಲಿ ಪಟಾಕಿ ದಾಸ್ತಾನು ಮಾದರಿಯ ವಸ್ತುಗಳೂ ಪತ್ತೆಯಾಗಿವೆ. ಬಾಂಬ್ ತಯಾರಿ ನಡೆಸುತ್ತಿದ್ದಾಗ ಸ್ಫೋಟಗೊಂಡಿರುವ ಶಂಕೆಯೂ ವ್ಯಕ್ತವಾಗಿದೆ.
ಅನು ಮಲಿಕ್ ಈ ಹಿಂದೆಯೂ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. 2016ರಲ್ಲಿ ಕಣ್ಣೂರಿನ ಪೋಡಿಕುಂಡು ಎಂಬಲ್ಲಿ ಅನು ಮಲಿಕ್ ವಾಸವಿದ್ದ ಎರಡು ಅಂತಸ್ತಿನ ಮನೆಯೊಂದರಲ್ಲಿ ಸ್ಫೋಟ ನಡೆದಿತ್ತು. ಪರಿಸರದ 15 ಮನೆಗಳಿಗೂ ಹಾನಿಯಾಗಿತ್ತು. ಘಟನೆಯಲ್ಲಿ ಮಲಿಕ್ ಪತ್ನಿ, ಮಗು ಸೇರಿ ಹತ್ತು ಮಂದಿ ಗಾಯಗೊಂಡಿದ್ದರು. ಮಲಿಕ್ ಸ್ಥಳೀಯವಾಗಿ ದೇವಸ್ಥಾನಗಳಿಗೆ ಪಟಾಕಿ ದಾಸ್ತಾನುಗಳ ಪೂರೈಕೆ ಮಾಡುತ್ತಿದ್ದರು ಎನ್ನುವ ಮಾಹಿತಿಯೂ ಇದ್ದು ಶುಕ್ರವಾರ ರಾತ್ರಿ ತಡವಾಗಿ ಮನೆಗೆ ಬಂದಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.
A powerful explosion rocked a house in Kannapuram, Kannur district, around 2 a.m. on Saturday, leaving one man dismembered and another critically injured. The deceased has been identified as Muhammad Asham of Chalad, Kannur, while the injured has been hospitalized.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm