ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡಲಿಲ್ಲ? ರಾಜಕೀಯ ಲಾಭಕ್ಕೆ ಚಲೋ ಮಾಡ್ತಿದ್ದಾರೆ ; ಸಿದ್ದರಾಮಯ್ಯ ಲೇವಡಿ 

01-09-25 05:03 pm       HK News Desk   ಕರ್ನಾಟಕ

ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕೆ ಚಲೋ ಮಾಡ್ತಿದ್ದಾರೆ. ಆದ್ರೆ ಅವರಿಗೆ ಇದರಿಂದ ಲಾಭ ಸಿಗಲ್ಲ. ನಮಗೆ ಧರ್ಮಸ್ಥಳದ ಬಗ್ಗೆ ಅಪಾರ ಗೌರವವಿದೆ. ಅದಕ್ಕಾಗಿಯೇ ಎಸ್ಐಟಿ ರಚನೆ ಮಾಡಿದ್ದೆವು.‌ ಹಾಗಾದರೆ ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ‌

ಮೈಸೂರು, ಸೆ.1 : ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕೆ ಚಲೋ ಮಾಡ್ತಿದ್ದಾರೆ. ಆದ್ರೆ ಅವರಿಗೆ ಇದರಿಂದ ಲಾಭ ಸಿಗಲ್ಲ. ನಮಗೆ ಧರ್ಮಸ್ಥಳದ ಬಗ್ಗೆ ಅಪಾರ ಗೌರವವಿದೆ. ಅದಕ್ಕಾಗಿಯೇ ಎಸ್ಐಟಿ ರಚನೆ ಮಾಡಿದ್ದೆವು.‌ ಹಾಗಾದರೆ ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ‌

ದೂರುದಾರ ಹೇಳಿದಂತೆ, ಅಲ್ಲಿ ಏನೂ ಸಿಗಲಿಲ್ಲ ಅಂತ ಈಗ ಹೋರಾಟ ಎಂದು ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ.‌ ಹಿಂದೂಗಳು ಒಟ್ಟಾಗುತ್ತಾರೆ ಎಂದು ಏನೇನೋ ಹೇಳುತ್ತಾರೆ.  ನಾವೂ ಹಿಂದೂಗಳೇ ಅಲ್ವಾ.. ಎಲ್ಲ ಹಿಂದೂಗಳು ಅವರ ಪರ ಇಲ್ಲ. ರಾಮನ ಹೆಸರಲ್ಲು ರಾಜಕೀಯ ಮಾಡಿದ್ದರು. ಈಗ ನಮ್ಮ ಊರಿನಲ್ಲೂ ರಾಮ ಮಂದಿರ ಮಾಡಿದ್ದೇವೆ.‌  

ಹಿಂದೂಗಳು ಅಂದ್ರೆ ರಾಜಕೀಯ ಮಾಡೋದಲ್ಲ. ಅಪಪ್ರಚಾರ ಮಾಡೋದು ಅಲ್ಲ.‌ ಸುಳ್ಳು ಹೇಳೋದು ಅಲ್ಲ. ಮನುಷ್ಯತ್ವ ಇಲ್ಲದವರನ್ನು ಏನಂತ ಕರೀಬೇಕು? ಎಂದು ಪ್ರಶ್ನೆ ಮಾಡಿದರು.‌

ದಸರಾ ವಿಚಾರದಲ್ಲೂ ಬಿಜೆಪಿಯವರು ರಾಜಕಾರಣ ಮಾಡಿದ್ರು. ಅವರ ಮನೆಯಲ್ಲು ರಾಜಕಾರಣ ಮಾಡ್ತಾರೆ. ಸುಳ್ಳು ಹೇಳೋದು ಬಿಟ್ಟರೆ ಬಿಜೆಪಿ ಅವರಿಗೆ ಬೇರೇನೂ ಬರಲ್ಲ. ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಅಂತ ಭಾನು ಮುಷ್ತಾಕ್ ಅವರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಕರೆದಿದ್ದೇವೆ. ಅದರಲ್ಲಿ ಬೇರೇನೂ ವಿಷಯ ಇಲ್ಲ ಎಂದರು. 

ಚಾಮುಂಡಿ ಬೆಟ್ಟ ಚಲೋ ಮಾಡ್ತೀವಿ ಎಂಬ ಅಶೋಕ್ ಹೇಳಿಕೆ ವಿಚಾರದ ಪ್ರತಿಕ್ರಿಯಿಸಿದ ಅವರು, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿನೇ. ಆದ್ರೆ ದಸರಾ ಹಬ್ಬ ಎಲ್ಲರ ಹಬ್ಬ. ನಾವು ಮಾಡೋದು ದಸರಾ ಹಬ್ಬ. ಅದಕ್ಕೆ ಧರ್ಮ ಜಾತಿ ಏನು ಇಲ್ಲ ಎಂದರು. ಡಿಕೆಶಿ ಒಂದು ಕಾಲು ಹೊರಗಿಟ್ಟಿದ್ದಾರೆ 50 ಜನ ಎಂ.ಎಲ್. ಎ ಹೋಗುತ್ತಾರೆ ಎಂಬ ಯತ್ನಾಳ ಹೇಳಿಕೆಗೆ, ಅದೆಲ್ಲ ಏನೂ ಇಲ್ಲ ಎಂದು ಹೇಳುತ್ತ ಸಿಎಂ ಹೊರ ನಡೆದರು.‌

Chief Minister Siddaramaiah hit out at the BJP on Sunday, accusing the party of using the Dharmasthala issue for political mileage. He questioned why the BJP, which is now opposing the Special Investigation Team (SIT), had not raised objections when the SIT was first constituted.