ಬ್ರೇಕಿಂಗ್ ನ್ಯೂಸ್
10-04-25 01:25 pm HK News Desk ದೇಶ - ವಿದೇಶ
ಚೆನ್ನೈ, ಎ.10 : ಪ್ರಧಾನಿ ನರೇಂದ್ರ ಮೋದಿ ರಾಮೇಶ್ವರ ಮತ್ತು ಧನುಷ್ಕೋಡಿ ನಡುವಿನ ಪಂಬನ್ ರೈಲು ಸೇತುವೆಯನ್ನು ಲೋಕಾರ್ಪಣೆ ಮಾಡಿದ ಬೆನ್ನಲ್ಲೇ ಭಾರತ- ಕೊಲಂಬೋ ಮಧ್ಯೆ ನೇರ ರೈಲು ಯಾನದ ಕನಸು ಗರಿಗೆದರಿದೆ. ಬ್ರಿಟಿಷರ ಆಡಳಿತ ಕಾಲದಲ್ಲೂ ಇಂತಹದ್ದೊಂದು ಸೇತುವೆ ಮಾಡಬೇಕೆಂಬ ದೊಡ್ಡ ಚಿಂತನೆಗಳಿದ್ದವು. ಅಷ್ಟೇ ಅಲ್ಲ, ಆಗಿನ ಬ್ರಿಟಿಷ್ ಸರಕಾರದ ಮುಂದೆ ಸ್ಟಡಿ ರಿಪೋರ್ಟ್ ಕೂಡ ಸಲ್ಲಿಕೆಯಾಗಿತ್ತು. ಇಷ್ಟಕ್ಕೂ ಈಗ ನಿರ್ಮಿಸಿರುವ ಪಂಬನ್ ಸೇತುವೆಯನ್ನೂ ಮೊದಲಿಗೆ ನಿರ್ಮಿಸಿದ್ದು ಬ್ರಿಟಿಷ್ ಸರಕಾರವೇ ಆಗಿತ್ತು.
1914ರಲ್ಲಿ ರಾಮೇಶ್ವರ- ಧನುಷ್ಕೋಡಿ ಮಧ್ಯೆ ಆಗಿನ ಈಸ್ಟ್ ಇಂಡಿಯಾ ಕಂಪನಿ ಭಾರತದ ಮೊಟ್ಟಮೊದಲ ಸಮುದ್ರ ಮೇಲಿನ ಸೇತುವೆ ನಿರ್ಮಾಣ ಮಾಡಿತ್ತು. ಆದರೆ ಈ ಪಂಬನ್ ಸೇತುವೆ 1964ರಲ್ಲಿ ಬಂದಿದ್ದ ಭಾರೀ ಚಂಡಮಾರುತಕ್ಕೆ ಕೊಚ್ಚಿ ಹೋಗಿತ್ತು. ಧನುಷ್ಕೋಡಿಯಿಂದ ಕೇವಲ 24 ಕಿಮೀ ಅಂತರದಲ್ಲಿ ಶ್ರೀಲಂಕಾದ ತಲೈಮನ್ನಾರ್ ದ್ವೀಪವಿದೆ. ಅಲ್ಲಿ ವರೆಗೂ ಶ್ರೀಲಂಕಾ ರಾಜಧಾನಿ ಕೊಲಂಬೋದಿಂದ ರೈಲ್ವೇ ಹಳಿಯನ್ನೂ ಬ್ರಿಟಿಷರು ಮಾಡಿಕೊಂಡಿದ್ದರು. 1914ರಲ್ಲಿ 2.7 ಕಿಮೀ ಉದ್ದಕ್ಕೆ ಸಮುದ್ರದ ಮೇಲಿನಿಂದ ಪಂಬನ್ ಸೇತುವೆಯನ್ನು ನಿರ್ಮಿಸಿದ ಬೆನ್ನಲ್ಲೇ ಇಂಡೋ- ಸಿಲೋನ್ (ಶ್ರೀಲಂಕಾ) ಮಧ್ಯೆ ರೈಲ್ವೇ ಹಳಿಯನ್ನು ಸ್ಥಾಪಿಸಬೇಕೆಂಬ ಕನಸು ಬ್ರಿಟಿಷರಲ್ಲಿ ಮೊಳೆತಿತ್ತು. ಆದರೆ ಆ ಸಂದರ್ಭದಲ್ಲೇ ಮೊದಲ ಜಾಗತಿಕ ಯುದ್ಧ ಆರಂಭಗೊಂಡಿದ್ದರಿಂದ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಹಾಗಾಗಿ, ಲಂಕಾ- ಭಾರತ ನಡುವಿನ ರೈಲ್ವೇ ಯೋಜನೆ ನೆನೆಗುದಿಗೆ ಬಿದ್ದಿತ್ತು. 1964ರಲ್ಲಿ ಚಂಡಮಾರುತ ಹೊಡೆತಕ್ಕೆ ಧನುಷ್ಕೋಡಿ ರೈಲ್ವೇ ಸ್ಟೇಶನ್ ಮಾಯವಾಗಿದ್ದರ ಕುರುಹಾಗಿ ಪಿಲ್ಲರ್ ಗಳು ಉಳಿದುಕೊಂಡಿದ್ದವು.
1964ರಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯನ್ನು ಆನಂತರ ಮರು ಸ್ಥಾಪನೆ ಮಾಡಲಾಗಿರಲಿಲ್ಲ. ಇದೀಗ 60 ವರ್ಷಗಳ ಬಳಿಕ ಕೇಂದ್ರದ ಮೋದಿ ಸರಕಾರ 550 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಸಮುದ್ರದ ಮೇಲ್ಗಡೆಯಿಂದ ಆಕರ್ಷಕ ರೈಲ್ವೇ ಸೇತುವೆಯನ್ನು ನಿರ್ಮಿಸಿದೆ. 2.7 ಕಿಮೀ ಉದ್ದಕ್ಕೆ ಸಮುದ್ರ ಮೇಲ್ಗಡೆಯಲ್ಲಿ ಸೇತುವೆ ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ಅಡಿಭಾಗದಲ್ಲಿ ಬೃಹತ್ ಹಡಗು ಸಂಚರಿಸುವಂತಾಗಲು 17 ಮೀಟರ್ ಎತ್ತರ ಮಾಡಲಾಗಿದೆ. ಗೂಡ್ಸ್ ಮತ್ತು ಪ್ಯಾಸೆಂಜರ್ ಸಹಿತ 80 ಕಿಮೀ ವೇಗದಲ್ಲಿ ರೈಲು ಸಂಚರಿಸಲು ಸಾಧ್ಯವಾಗುವಂತೆ ಬಲಿಷ್ಠ ಸೇತುವೆಯನ್ನು ರಚಿಸಲಾಗಿದೆ. ಸದ್ಯಕ್ಕೆ ಸಮುದ್ರ ಮೇಲಿನಿಂದ ನಿರ್ಮಾಣಗೊಂಡ ಭಾರತದ ಮೊದಲ ರೈಲ್ವೇ ಸೇತುವೆ ಇದಾಗಿದೆ. ಟೆಂಪಲ್ ಟೂರಿಸಂ ಕಾರಣಕ್ಕೆ ರಾಮೇಶ್ವರ ರಾಮನಾಥ ದೇವಸ್ಥಾನಕ್ಕೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಅಲ್ಲಿಂದಲೇ ಇರುವ ಸಮುದ್ರ ಮೇಲಿನ ಸೇತುವೆಯಿಂದಾಗಿ ಭಾರತದ ಕಟ್ಟಕಡೆಯ ಪಾಯಿಂಟ್ ಧನುಷ್ಕೋಡಿ ಜನಾಕರ್ಷಣೆ ಪಡೆಯಲಿದೆ.
ಧನುಷ್ಕೋಡಿಯಿಂದ ಶ್ರೀಲಂಕಾ ನಡುವೆ ಸಮುದ್ರದಲ್ಲಿ ಮುಳುಗಡೆಯಾಗಿರುವ ರಾಮಾಯಣ ಕಾಲದ ರಾಮ ಸೇತು ಈಗಲೂ ಇದೆ. ಭಾರತ ಸರಕಾರ ಮನಸ್ಸು ಮಾಡಿದರೆ ಲಂಕಾಕ್ಕೆ ನೇರವಾಗಿ ಇದೇ ಹಾದಿಯಲ್ಲಿ ನೇರ ರೈಲು ಸಂಪರ್ಕವನ್ನೂ ಮಾಡಬಹುದು. ಬ್ರಿಟಿಷರ ಆಡಳಿತ ಇದ್ದಾಗ 1830ರಲ್ಲಿಯೇ ಭಾರತ- ಲಂಕಾ ನಡುವೆ ರೈಲ್ವೇ ಹಳಿ ಮಾಡಬೇಕೆಂಬ ಕನಸುಗಳಿದ್ದವಂತೆ. ರೈಲ್ವೇ ಮೂಲಕ ಕಾರ್ಮಿಕರು ಮತ್ತು ಸರಕುಗಳನ್ನು ಸಾಗಿಸಲು ಸುಲಭವಾಗಬಹುದೆಂಬ ಆಶಯ ಆಗಿನ ಅಧಿಕಾರಿಗಳಲ್ಲಿತ್ತು. ಆನಂತರ, 1914ರಲ್ಲಿ ಕಡೆಗೂ ರಾಮೇಶ್ವರದಿಂದ ಧನುಷ್ಕೋಡಿ ವರೆಗೆ ಪಂಬನ್ ಸೇತುವೆಯನ್ನು ನಿರ್ಮಿಸಲಾಗಿತ್ತು. ಆಗಲೇ ಮದ್ರಾಸ್ – ಕೊಲಂಬೋ ರೈಲು ಮಾಡಬಹುದೆಂಬ ಮಾತುಗಳೂ ಬಂದಿದ್ದವಂತೆ. ಆದರೆ 1964ರಲ್ಲಿ ದೊಡ್ಡ ಸುನಾಮಿ ರೀತಿಯಲ್ಲಿ ಅಪ್ಪಳಿಸಿದ್ದ ಚಂಡಮಾರುತ ಮತ್ತು 150 ಕಿಮೀ ವೇಗದಲ್ಲಿ ಬಂದಿದ್ದ ಬಿರುಗಾಳಿ ಪಂಬನ್ ಸೇತುವೆಯನ್ನೇ ನಾಮಾವಶೇಷ ಮಾಡಿತ್ತು.
ಆನಂತರ, 2002ರಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಭಾರತ - ಶ್ರೀಲಂಕಾ ರೈಲ್ವೇ ಸಂಪರ್ಕದ ಕನಸು ಮತ್ತೆ ಗರಿಗೆದರಿತ್ತು. ಆದರೆ ಆಗ ಲಂಕಾದಲ್ಲಿ ಎಲ್ ಟಿಟಿಇ ಉಗ್ರರ ಉಪಟಳ ಹೆಚ್ಚಿದ್ದರಿಂದ ತಮಿಳುನಾಡು ಸರಕಾರ ಆ ರೀತಿಯ ಉಪಕ್ರಮಕ್ಕೆ ನಿರಾಕರಣೆ ತೋರಿತ್ತು. ಆಬಳಿಕ 2011ರಲ್ಲಿ ಸಾರ್ಕ್ ರಾಷ್ಟ್ರಗಳ ಸಭೆಯಲ್ಲು ಈ ರೈಲ್ವೇ ಸಂಪರ್ಕದ ಬಗ್ಗೆ ಪ್ರಸ್ತಾಪವಾಗಿತ್ತು. ಭಾರತವು ಲಂಕಾ ಬಿಟ್ಟು ಬೇರೆಲ್ಲ ನೆರೆ ರಾಷ್ಟ್ರಗಳ ಜೊತೆಗೆ ರೈಲ್ವೇ ಲಿಂಕ್ ಹೊಂದಿದೆ. ಲಂಕಾಕ್ಕೂ ರೈಲ್ವೇ ಯಾನ ಕೈಗೊಳ್ಳಬಹುದು ಎನ್ನುವ ಅಭಿಪ್ರಾಯಗಳು ಬಂದಿದ್ದವು. 2015ರಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ, ಮತ್ತೆ ಈ ಪ್ರಸ್ತಾಪಕ್ಕೆ ಜೀವ ತುಂಬಿದ್ದಲ್ಲದೆ ಇದಕ್ಕಾಗಿ ಎಡಿಬಿಯಿಂದ ಹಣಕಾಸು ನೆರವು ನೀಡುವುದಕ್ಕೂ ಕೇಳಿಕೊಂಡಿದ್ದರು. ಆದರೆ ಲಂಕಾದ ಸಾರಿಗೆ ಮಂತ್ರಿ ಲಕ್ಷ್ಮಣ್ ಕಿರಿಯೆಲ್ಲಾ ಈ ಪ್ರಸ್ತಾಪಕ್ಕೆ ನಿರಾಕರಣೆ ಮಾಡಿದ್ದರು. 2023ರಲ್ಲಿ ಲಂಕಾ- ಭಾರತ ಮಧ್ಯೆ ಪ್ರಸ್ತಾವಿತ ರೈಲ್ವೇ ಮತ್ತು ರಸ್ತೆ ಸಾರಿಗೆ ವ್ಯವಸ್ಥೆ ಏರ್ಪಟ್ಟರೆ ಸರಕು ಸಾಗಣೆಯ ವೆಚ್ಚ ಅರ್ಧಕ್ಕರ್ಧ ಕಡಿಮೆಯಾಗುತ್ತದೆ ಎಂದು ಲಂಕಾ ಆರ್ಥಿಕ ತಜ್ಞ ಗಯಾಶ್ ಸಮರಕೂನ್ ಅಭಿಪ್ರಾಯಿಸಿದ್ದು ಮತ್ತೆ ಚರ್ಚೆಗೆ ಕಾರಣವಾಗಿತ್ತು.
ಇದಲ್ಲದೆ, 2024ರಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಈ ಬಗ್ಗೆ ಪ್ರಸ್ತಾಪಿಸಿ ಭಾರತ- ಲಂಕಾ ಮಧ್ಯೆ ಭೂಸಾರಿಗೆ ನಿರ್ಮಾಣದ ಕನಸಿದ್ದು, ಈ ಕುರಿತು ಭಾರತ ಸರಕಾರದ ಜೊತೆಗೆ ಮಾತುಕತೆಗಳು ನಡೆದಿವೆ ಎಂಬುದಾಗಿ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಲಂಕಾಕ್ಕೆ ಭೇಟಿ ಕೊಟ್ಟಿದ್ದು ಮತ್ತೆ ರಾಜತಾಂತ್ರಿಕ ನಡೆ ತೋರಿದ್ದಾರೆ. ಚೀನಾ ಕಡೆ ವಾಲದೆ ತನ್ನ ಜೊತೆಗೇ ಇರುವಂತೆ ಲಂಕಾಕ್ಕೆ ಹೇಳಿ ಬಂದಿದ್ದಾರೆ. ಈ ಭೇಟಿ ಬೆನ್ನಲ್ಲೇ ರಾಮೇಶ್ವರದಿಂದ ಧನುಷ್ಕೋಡಿಗೆ ನಿರ್ಮಿಸಲಾಗಿದ್ದ ರೈಲು ಸೇತುವೆಯನ್ನು ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಲಂಕಾ- ಭಾರತ ನಡುವಿನ ರೈಲ್ವೇ- ಹೆದ್ದಾರಿ ಸೇತುವೆ ನಿರ್ಮಾಣದ ಕನಸೂ ಗರಿಗೆದರಿದೆ. ಕೇವಲ 24 ಕಿಮೀ ಮಧ್ಯೆ ಸೇತುವೆಯಾದರೆ ರಾಮಾಯಣ ಕಾಲದ ರಾಮ ಸೇತು ರೂಪದಲ್ಲೇ ಮತ್ತೆ ಲಂಕಾ – ಭಾರತ ಒಂದುಗೂಡಲಿದೆ ಎಂಬ ಚಿಂತನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೀಡಾಗಿದೆ.
Board the Indo-Ceylon Express from Egmore station in Madras (now Chennai), ride through the eastern coastal plains, cross the Pamban Bridge into Rameshwaram, reach Dhanushkodi, the last Indian station, then sail across the Palk Strait to Talaimannar and catch a train straight to Colombo. That's how most people travelled from Madras to Colombo, Sri Lanka's capital, before 1964, the year when the Rameswaram cyclone ravaged coastal Tamil Nadu.
12-04-25 11:09 pm
Bangalore Correspondent
Annapoorneshwari Nagar Police Inspector, A.V....
11-04-25 11:10 pm
Sameer MD, Vidoe Deleted, Dharmasthala: ಸೌಜನ್...
11-04-25 10:27 pm
Bangalore High court, Birthday, suspend: ಬೆಂಗ...
11-04-25 03:45 pm
Yatnal, Muslim, Prophet Muhammad Paigambar: ಪ...
11-04-25 03:28 pm
12-04-25 09:01 pm
HK News Desk
Indian Mujahideen, Yasin Bhatkal: ಹೈದರಾಬಾದ್ ಬ...
10-04-25 09:10 pm
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
12-04-25 10:13 pm
Mangalore Correspondent
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
Dinesh Gundurao, Mangalore: ಸರಕಾರಿ ಆಸ್ಪತ್ರೆಗಳ...
12-04-25 05:30 pm
Mangalore Subrahmanya train, Timings: ಎ.12ರಿಂ...
11-04-25 02:49 pm
Mangalore, Kolya, accident: ತೆಂಗಿನ ಮರದಿಂದ ಕೆಳ...
11-04-25 10:35 am
12-04-25 10:52 pm
Mangalore Correspondent
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am