Valachil, Rape, College, Mangalore Crime: ಇನ್ ಸ್ಟಾ ಗ್ರಾಮ್ ಪ್ರೀತಿ ; ಅಡ್ಯಾರ್ ಫಾಲ್ಸ್ ನಲ್ಲಿ ಕಾಲೇಜು ಯುವತಿಯ ಅತ್ಯಾಚಾರ, ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೆ, ಏಳು ಮಂದಿಯ ಬಂಧನ 

02-09-25 04:31 pm       Mangalore Correspondent   ಕ್ರೈಂ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕನೊಂದಿಗೆ ಅಡ್ಯಾರ್ ಫಾಲ್ಸ್ ತೆರಳಿದ್ದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಅದರ ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಮಂಗಳೂರು, ಸೆ.2 : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕನೊಂದಿಗೆ ಅಡ್ಯಾರ್ ಫಾಲ್ಸ್ ತೆರಳಿದ್ದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಅದರ ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿದ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಕಾರ್ತಿಕ್, ರಾಕೇಶ್ ಸಲ್ದಾನ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್ ಬಂಧಿತರೆಂದು ತಿಳಿದುಬಂದಿದೆ. ಬಜ್ಪೆ ಠಾಣೆ ವ್ಯಾಪ್ತಿಯ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಎರಡು ತಿಂಗಳ ಹಿಂದೆ ಕಾರ್ತಿಕ್ ಎಂಬಾತ ಇನ್‌ಸ್ಟಾ ಗ್ರಾಂನಲ್ಲಿ ಪರಿಚಯವಾಗಿದ್ದ. ಪರಿಚಯ ಪ್ರೀತಿಗೆ ತಿರುಗಿದ್ದು ಕಳೆದ ಜೂನ್‌ ತಿಂಗಳಲ್ಲಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಕಾರ್ತಿಕ್, ಆಕೆಯನ್ನು ಅಡ್ಯಾರ್ ಫಾಲ್ಸ್ ಬಳಿ ಇರುವ ಕಾಡಿಗೆ ಕರೆದೊಯ್ದಿದ್ದು ಅಲ್ಲಿಯೇ ಅತ್ಯಾಚಾರ ಎಸಗಿದ್ದ. 

ಘಟನಾ ಸ್ಥಳದಲ್ಲಿ ಕಾರ್ತಿಕ್ ಸ್ನೇಹಿತ ರಾಕೇಶ್‌ ಸಲ್ದಾನ ಎಂಬಾತನೂ ಇದ್ದು, ಬಳಿಕ ಆತನೂ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ. ಇದರ ದೃಶ್ಯವನ್ನು ಕಾರ್ತಿಕ್‌ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು ಕೆಲವು ದಿನಗಳ ಬಳಿಕ ಸ್ನೇಹಿತರಿಗೆ ಕಳುಹಿಸಿದ್ದ. 30 ಸೆಕಂಡಿನ ವಿಡಿಯೋ ಬಳಿಕ ವೈರಲ್ ಆಗಿತ್ತು. ಈ ವಿಚಾರ ತಿಳಿಯುತ್ತಲೇ ಆ.16ರಂದು ಸಂತ್ರಸ್ತ ಯುವತಿ ಬಜ್ಪೆ ಠಾಣೆಗೆ ದೂರು ನೀಡಿದ್ದಳು.‌ ಬಜೈ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಅಪ್ರಾಪ್ತ ಬಾಲಕನಾಗಿದ್ದು ಎಲ್ಲರೂ ಬೇರೆ ಬೇರೆ ಕಡೆಯವರು ಮತ್ತು ಬೇರೆ ಬೇರೆ ಉದ್ಯೋಗದಲ್ಲಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.

In a shocking incident, a minor college girl was allegedly raped by multiple men near Adyar Falls after being lured there by a man she met on Instagram. The assault was filmed and later circulated on social media. Bajpe police have arrested seven accused in connection with the case. The arrested individuals have been identified as Karthik, Rakesh Saldanha, Jeevan, Sandeep, Rakshith, Shravan, and Suresh. Police said the victim is a first-year PUC student at a college within Bajpe police limits.