College student Missing, Mangalore: ಮಂಗಳೂರಿನಲ್ಲಿ ಬಿಸಿಎ ಓದುತ್ತಿದ್ದ ಯುವತಿ ನಾಪತ್ತೆ ; ಉತ್ತರ ಪ್ರದೇಶ ಮೂಲದ ಯುವಕನ ಜೊತೆಗೆ ಪರಾರಿ, ಬೆನ್ನು ಹತ್ತಿದ ಸುರತ್ಕಲ್ ಪೊಲೀಸರು 

03-09-25 11:53 am       HK News Desk   ಕರಾವಳಿ

ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ. ವ್ಯಾಸಂಗ ಮಾಡುತ್ತಿದ್ದ ಕಾಟಿಪಳ್ಳ ಗಣೇಶಕಟ್ಟೆ ನಿವಾಸಿ ಯುವತಿಯೊಬ್ಬಳು ನಾಪತ್ತೆಯಾಗಿದ್ದು ಪೊಲೀಸರು ಆಕೆಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಯುವತಿ ಉತ್ತರ ಪ್ರದೇಶ ಮೂಲದ ಯುವಕನ ಜೊತೆಗೆ ತೆರಳಿರುವುದು ಪತ್ತೆಯಾಗಿದೆ.

ಮಂಗಳೂರು, ಸೆ.3: ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ. ವ್ಯಾಸಂಗ ಮಾಡುತ್ತಿದ್ದ ಕಾಟಿಪಳ್ಳ ಗಣೇಶಕಟ್ಟೆ ನಿವಾಸಿ ಯುವತಿಯೊಬ್ಬಳು ನಾಪತ್ತೆಯಾಗಿದ್ದು ಪೊಲೀಸರು ಆಕೆಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಯುವತಿ ಉತ್ತರ ಪ್ರದೇಶ ಮೂಲದ ಯುವಕನ ಜೊತೆಗೆ ತೆರಳಿರುವುದು ಪತ್ತೆಯಾಗಿದೆ. ‌

ಕಾಟಿಪಳ್ಳ ಗ್ರಾಮದ ಗಣೇಶಕಟ್ಟೆ ನಿವಾಸಿ ಪ್ರಜ್ಞಾ(18) ಎಂಬಾಕೆ ಸೆ.1ರಂದು ಕಾಲೇಜಿಗೆ ಹೋಗುವುದಾಗಿ ತೆರಳಿದ್ದು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ತಾಯಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಕನ್ನಡ, ತುಳು, ಇಂಗ್ಲಿಷ್ ಭಾಷೆ ಮಾತನಾಡುವ ಯುವತಿ,  ಕಾಣೆಯಾದ ದಿನ ನೀಲಿ ಬಣ್ಣದ ಅರ್ಧ ತೋಳಿನ ಕಾಲೇಜು ಸಮವಸ್ತ್ರ ಹಾಗೂ ಕಪ್ಪು ಬಣ್ಣದ ಸಮವಸ್ತ್ರ ಪ್ಯಾಂಟ್ ಧರಿಸಿದ್ದರು. ಪೊಲೀಸರ ತನಿಖೆ ವೇಳೆ ಯುವತಿಗೆ ಕಾಟಿಪಳ್ಳದಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಯುವಕನ ಜೊತೆಗೆ ಪ್ರೀತಿ ಇರುವುದು ಗೊತ್ತಾಗಿದೆ.‌ ಎರಡು ತಿಂಗಳ ಹಿಂದೆ ವಿಷಯ ತಿಳಿದ ಮನೆಯವರು ಆಕೆಯನ್ನು ಮತ್ತು ಯುವಕನಿಗೆ ಬೈದು ಸಂಪರ್ಕ ಇಟ್ಟುಕೊಳ್ಳದಂತೆ ಬುದ್ಧಿವಾದ ಹೇಳಿದ್ದರು. 

ಇದೀಗ ಮಂಗಳೂರಿನಿಂದ ಚೆನ್ನೈಗೆ ಹೋಗುವ ರೈಲಿನಲ್ಲಿ ಇಬ್ಬರು ತೆರಳಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು ಅಲ್ಲಿಂದ ಲಕ್ನೋಗೆ ತೆರಳುವ ರೈಲಿನಲ್ಲಿ ಹೋಗಿದ್ದಾರೆ. ಇದರಂತೆ, ಸುರತ್ಕಲ್ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ. ಯುವಕ ಎಂಆರ್ ಪಿಎಲ್ ನಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದು ಕಾಟಿಪಳ್ಳದಲ್ಲಿ ಯುವತಿ ಮನೆ ಬಳಿಯೇ ಬಾಡಿಗೆ ಮನೆ ಮಾಡಿಕೊಂಡಿದ್ದ. ಈ ವೇಳೆ, ಇವರ ಪರಿಚಯ ಆಗಿತ್ತು. ‌

An 18-year-old girl studying first-year BCA at a reputed private college in Mangaluru has gone missing, and investigations have revealed that she has eloped with a youth originally from Uttar Pradesh. Surathkal Police have launched a manhunt to trace the couple. The missing girl, identified as Prajna, a resident of Ganeshakatte in Katipalla village, left home on September 1 saying she was heading to college but did not return.