ಬ್ರೇಕಿಂಗ್ ನ್ಯೂಸ್
04-08-24 06:12 pm HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್.4: ಹತ್ತೇ ಮಂದಿ ಆಡಿದರೂ, ಅದ್ಭುತ ಪ್ರದರ್ಶನ ನೀಡಿದ ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 4-2ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈ ಮಧ್ಯೆ ಬಾಕ್ಸಿಂಗ್ ನಲ್ಲಿ ಭಾರತದ ಭರವಸೆಯ ಬಾಕ್ಸರ್ ಲವ್ಲೀನಾ ಬೊರ್ಗೊಹಾವ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲನುಭವಿಸಿ ಆಘಾತಕಾರಿ ಫಲಿತಾಂಶ ದಾಖಲಾಯಿತು.
ಹಾಕಿ ಟೂರ್ನಿಯ ಅಂತಿಮ ಎಂಟರ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ಪೂರ್ಣಾವಧಿ ಮುಗಿದಾಗ ಗ್ರೇಟ್ ಬ್ರಿಟನ್ ಜೊತೆ 1-1ರಿಂದ ಸಮಬಲದಲ್ಲಿತ್ತು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾಗಿತ್ತು. ಈ ಮಧ್ಯೆ ಎರಡನೇ ಅವಧಿಯಲ್ಲಿ ಭಾರತ ತಂಡದ ಅಮಿತ್ ರೋಹಿದಾಸ್ ರೆಡ್ ಕಾರ್ಡ್ ಪಡೆದು ಪಂದ್ಯದಿಂದಲೇ ಹೊರಗುಳಿಯಬೇಕಾಯಿತು. ಇದರ ಬಳಿಕ 10 ಆಟಗಾರರಿಂದಲೇ ಆಟ ಮುಂದುವರಿಸಿದ ಭಾರತವನ್ನು ಆಧರಿಸಿದ್ದು ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್. ಉಳಿದ ಮೂರೂ ಅವಧಿಯಲ್ಲಿ ಹಲವು ಗೋಲುಗಳನ್ನು ತಡೆಯುವಲ್ಲಿ ಯಶಸ್ವಿಯಾದರು.
ಈ ನಡುವೆ ಭಾರತದ ನಾಯಕ ಹರ್ಮನ್ ಪ್ರೀತ್ ಸಿಂಗ್ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಇದು ಹರ್ಮನ್ ಪ್ರೀತ್ ಈ ಟೂರ್ನಿಯಲ್ಲಿ ಬಾರಿಸಿದ 7ನೇ ಗೋಲಾಗಿತ್ತು. ಐದೇ ನಿಮಿಷಗಳಲ್ಲಿ ಗ್ರೇಟ್ ಬ್ರಿಟನ್ ಗೋಲು ಸರಿಗಟ್ಟಿತು. ಮುಂದೆ ಪೂರ್ಣಾವಧಿ ತನಕ ಉಭಯ ತಂಡಗಳು ಗೋಲು ಬಾರಿಸದ ಕಾರಣ ಫಲಿತಾಂಶ ನಿರ್ಣಯಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಶೂಟೌಟ್ ನಲ್ಲಿ ಹರ್ಮನ್ ಪ್ರೀತ್, ಸುಖಜೀತ್ ಸಿಂಗ್, ಲಲಿತ್ ಮತ್ತು ರಾಜ್ ಕುಮಾರ್ ಪಾಲ್ ಗೋಲು ಬಾರಿಸಿದರು. ಗ್ರೇಟ್ ಬ್ರಿಟನ್ ಬಾರಿಸಿದ ಎರಡು ಗೋಲುಗಳನ್ನು ಶ್ರೀಜೇಶ್ ತಡೆದ ಕಾರಣ ಭಾರತ ಗೆಲುವಿನ ನಗು ಬೀರಿತು.
ಮಹಿಳೆಯರ ಬಾಕ್ಸಿಂಗ್ ನಲ್ಲಿ ಭಾರತದ ಲವ್ಲೀನಾ ಬೊರ್ಗೊಹಾವ್ 1-4ರಿಂದ ಚೀನಾದ ಕ್ವಿಯಾನ್ ವಿರುದ್ಧ ಸೋಲು ಕಂಡರು.
Paris Olympic Games 2024! Today, the India Men's Hockey team faces Great Britain in a crucial quarterfinal match. Boxer Lovlina Borgohain will also be in the spotlight as she takes on Li Qian in her quarterfinal bout. In Badminton, Lakshya Sen is set to compete against defending Olympic champion Viktor Axelsen in the semifinals.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm