ಬ್ರೇಕಿಂಗ್ ನ್ಯೂಸ್
02-08-24 12:24 pm HK News Desk ದೇಶ - ವಿದೇಶ
ಪ್ಯಾರಿಸ್, ಆಗಸ್ಟ್.2 : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಗುರುವಾರ ಭಾರತದ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿತು. ಭಾರತದ ಪಾಲಿಗೆ ಪದಕ ಗೆಲ್ಲುವ ಭರವಸೆಗಳಾಗಿದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಸಾತ್ವಿಕ್ ರೆಡ್ಡಿ -ಚಿರಾಗ್ ಶೆಟ್ಟಿ ಜೋಡಿ, ಬಾಕ್ಸಿಂಗ್ ತಾರೆ ನಿಖತ್ ಜರೀನ್ ಸೋಲು ಕಂಡು ತೀವ್ರ ನಿರಾಸೆ ಅನುಭವಿಸಿದರು.
ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ನ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಪಿ.ವಿ.ಸಿಂಧು, ಚೀನಾದ ಹೇ ಬಿಂಗ್ ಜೋ ವಿರುದ್ಧ ಪಂದ್ಯದಲ್ಲಿ 19-21, 14-21 ನೇರ ಗೇಮ್ಗಳಲ್ಲಿ ಸೋಲು ಅನುಭವಿಸಿದರು. ಟೋಕಿಯೋ ಒಲಿಂಪಿಕ್ಸ್ನ ಕಂಚಿನ ಪದಕಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಬಿಂಗ್ ಜೋ ವಿರುದ್ದ ಸಿಂಧು ಗೆದ್ದು ಪದಕ ಜಯಿಸಿದ್ದರು. ಈ ಸೋಲಿನೊಂದಿಗೆ ಸತತ ಮೂರನೇ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಸಿಂಧು ಕನಸು ಭಗ್ನಗೊಂಡಿತು.
ಪುರುಷರ ಡಬಲ್ಸ್ನಲ್ಲಿ ಪದಕದ ಭರವಸೆಗಳಾಗಿದ್ದ ವಿಶ್ವ ನಂಬರ್ 5ನೇ ಶ್ರೇಯಾಂಕದ ಜೋಡಿ ಸಾತ್ವಿಕ್ ರೆಡ್ಡಿ-ಚಿರಾಗ್ ಶೆಟ್ಟಿ, ಮಲೇಷ್ಯಾದ ಆರೊನ್ ಚಿಯಾ ಸೊಹ್ -ವೂಲಿ ಯಿಕ್ ವಿರುದ್ಧ 21-13, 14-21, 16-21 ಸೆಟ್ಗಳಲ್ಲಿ ಸೋಲು ಕಂಡು ಆಘಾತಕ್ಕೆ ಒಳಗಾಯಿತು.
ನಿಖತ್ ಜರೀನ್ ಪರಾಭವ
ಭಾರತದ ಪಾಲಿನ ಪದಕದ ಭರವಸೆ ಆಗಿದ್ದ ಬಾಕ್ಸಿಂಗ್ ತಾರೆ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ (50 ಕೆಜಿ), ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವು ಯು ವಿರುದ್ಧ 0-5 ಅಂತರದ ಸೋಲು ಕಂಡು ಒಲಿಂಪಿಕ್ಸ್ನಿಂದ ಹೊರಬಿದ್ದರು. ಇದು ಪದಕದ ಭರವಸೆಯಲ್ಲಿ ಭಾರತದ ಪಾಲಿನ ಅತಿದೊಡ್ಡ ಹಿನ್ನಡೆ ಆಗಿದೆ.
ಹಾಕಿಯಲ್ಲೂ ಸೋಲಿನ ಕಹಿ
ಭಾರತ ಪುರುಷರ ಹಾಕಿ ತಂಡ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಮೊದಲ ಸೋಲು ಅನುಭವಿಸಿತು. ಗುರುವಾರ ನಡೆದ ಹಾಲಿ ಚಾಂಪಿಯನ್ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ಪರಾಭವಗೊಂಡಿತು. ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೂ ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿತ್ತು. 18ನೇ ನಿಮಿಷದಲ್ಲಿ ಗೋಲು ಬಾರಿಸಿದ ಅಭಿಷೇಕ್ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ, 33ನೇ ಹಾಗೂ 44ನೇ ನಿಮಿಷದಲ್ಲಿ ಬೆಲ್ಜಿಯಂ ಗೋಲು ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಪ್ರವೇಶ
ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೇರಿದ್ದಾರೆ. ಗುರುವಾರ ಭಾರತದವರೇ ಆದ ಎಚ್.ಎಸ್.ಪ್ರಣಯ್ ವಿರುದ್ಧ 21-12, 21-6 ಗೇಮ್ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ಲಕ್ಷ್ಯ ಸೇನ್ ಮುಂದಿನ ಪಂದ್ಯದಲ್ಲಿ 12ನೇ ಶ್ರೇಯಾಂಕಿತ, ಚೈನೀಸ್ ತೈಪೆಯ ಚೊಯ್ದು ಟೀನ್ ಚೆನ್ ವಿರುದ್ಧ ಆಡಲಿದ್ದಾರೆ.
The ongoing Paris Olympics 2024 has turned into a challenging journey for Indian athletes, particularly in badminton and boxing, where several medal hopes faced early exits. Notably, prominent athletes such as PV Sindhu, Nikhat Zareen, and the men’s doubles pair of Satwik Rankireddy and Chirag Shetty have been eliminated from their respective events, leaving fans disheartened.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm