ಬ್ರೇಕಿಂಗ್ ನ್ಯೂಸ್
30-07-24 02:25 pm HK News Desk ದೇಶ - ವಿದೇಶ
ನವದೆಹಲಿ, ಜುಲೈ.30: ಮುಂಬೈ ಮೂಲದ 16 ವರ್ಷದ ಈಜುಪಟು ಜಿಯಾ ರೈ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯೆ ಇರುವ 34 ಕಿಮೀ ಉದ್ದದ ಕಡಲ್ಗಾಲುವೆಯನ್ನು ಅತಿ ವೇಗದಲ್ಲಿ ಈಜಿ ದಡ ಸೇರುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಜುಲೈ 28-29ರಂದು 17 ಗಂಟೆ 25 ನಿಮಿಷಗಳಲ್ಲಿ ಜಿಯಾ ಈ ಸಾಧನೆ ಮಾಡಿದ್ದು, ಕಡಲ್ಗಾಲುವೆ ದಾಟಿದ ಅತಿ ವೇಗದ ಮತ್ತು ಅತಿ ಕಿರಿಯ ಪ್ಯಾರಾ ಸ್ವಿಮ್ಮರ್ ಎಂಬ ದಾಖಲೆ ಸೇರಿದ್ದಾರೆ.
ಆಟಿಸಮ್ ಎನ್ನುವ ನರಸಂಬಂಧೀ ಕಾಯಿಲೆ ಎದುರಿಸುತ್ತಿರುವ ಜಿಯಾ ರೈ ಮುಂಬೈನಲ್ಲಿ ನೌಕಾಪಡೆ ಉದ್ಯೋಗಿಯಾಗಿರುವ ಮದನ್ ರೈ ಅವರ ಪುತ್ರಿ. ಅತಿ ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಮಾಡಿರುವ ಜಿಯಾ ಅವರನ್ನು ಪಶ್ಚಿಮ ನೌಕಾಪಡೆಯ ಕಮಾಂಡ್ ವತಿಯಿಂದ ಅಭಿನಂದಿಸಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಹಿಂದೆ ಭಾರತ ಮತ್ತು ಶ್ರೀಲಂಕಾ ಮಧ್ಯೆ ಇರುವ ಪಾಕ್ ಸ್ಟ್ರೈಟ್ (ರಾಮಸೇತು ಇರುವ ಪ್ರದೇಶ) ಕಡಲ್ಗಾಲುವೆಯನ್ನು 13 ಗಂಟೆ 10 ನಿಮಿಷಗಳಲ್ಲಿ ಈಜುವ ಮೂಲಕ ಜಿಯಾ ರೈ ವಿಶ್ವ ದಾಖಲೆ ಮಾಡಿದ್ದರು. 2022ರ ಮಾರ್ಚ್ 20ರಂದು ಶ್ರೀಲಂಕಾದ ತಲೈಮನ್ನಾರ್ ದ್ವೀಪದಿಂದ ರಾಮೇಶ್ವರ ಬಳಿಯಿರುವ ಧನುಷ್ಕೋಡಿಗೆ 29 ಕಿಮೀ ಉದ್ದದ ಜಲಸಂಧಿಯನ್ನು ಕೇವಲ 13 ಗಂಟೆಗಳಲ್ಲಿ ಈಜಿದ್ದು, ಈ ಸಾಧನೆ ಮಾಡಿದ ಅತಿ ಕಿರಿಯ ಕ್ರೀಡಾಪಟು ಎಂಬ ಸಾಧನೆ ಮಾಡಿದ್ದಾರೆ.
2022ರ ಡಿಸೆಂಬರ್ ನಲ್ಲಿ ಮುಂಬೈನಿಂದ ಗೋವಾದ ವಸಾಯಿ ಬಂದರಿನ ವರೆಗೆ 1100 ಕಿಮೀ ದೂರವನ್ನು ಆರು ತಂಡದ ಸದಸ್ಯರ ಜೊತೆ ಸೇರಿ ಈಜಿದ ಸಾಧನೆಯನ್ನೂ ಜಿಯಾ ರೈ ಹೊಂದಿದ್ದಾರೆ. ಆರು ಮಂದಿಯ ತಂಡದ ಸದಸ್ಯರು ರಿಲೇ ಮೂಲಕ 11 ದಿನ, 22 ಗಂಟೆ, 13 ನಿಮಿಷಗಳಲ್ಲಿ 1100 ಕಿಮೀ ದೂರವನ್ನು ಕ್ರಮಿಸಿದ್ದಾರೆ. ಆರು ಮಂದಿಯಲ್ಲಿ ಜಿಯಾ ರೈ ಮಾತ್ರ ಅತಿ ಕಿರಿಯ ಮತ್ತು ಏಕೈಕ ಹುಡುಗಿಯಾಗಿದ್ದರು.
ಜಿಯಾ ರೈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಒಮ್ಮೆ ಮನ್ ಕಿ ಬಾತ್ ಸರಣಿಯಲ್ಲಿ ಉಲ್ಲೇಖಿಸಿದ್ದರು. 2021ರಲ್ಲಿ ಮನ್ ಕಿ ಭಾಷಣದ ಸಂದರ್ಭದಲ್ಲಿ ಜಿಯಾ ರೈ ಮಾಡಿರುವ ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಗ್ಗೆ ಹೇಳಿದ್ದರು. ರಾಜ್ಯ, ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗಳಲ್ಲಿಯೂ ಜಿಯಾ ರೈ ಸಾಧನೆ ಮಾಡಿದ್ದಾರೆ.
Jiya Rai, a 16-year-old Mumbai resident diagnosed with Autism Spectrum Disorder, has achieved a remarkable milestone by becoming the youngest and fastest para swimmer to cross the English Channel. She completed this incredible feat between July 28 and 29.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm