ಬ್ರೇಕಿಂಗ್ ನ್ಯೂಸ್
21-07-24 08:40 pm HK News Desk ದೇಶ - ವಿದೇಶ
ಢಾಕಾ, ಜುಲೈ.21: ತೀವ್ರ ಹಿಂಸಾಚಾರದ ಬೆನ್ನಲ್ಲೇ ವಿವಾದಾತ್ಮಕ ಉದ್ಯೋಗ ಮೀಸಲು ನೀತಿಯನ್ನು ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಹಿಂಪಡೆದಿದೆ. ಇದಲ್ಲದೆ, ಶೇಕಡಾ 56ರಷ್ಟಿದ್ದ ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಇಳಿಸಿದೆ. ಆದರೆ ಜನರ ವಿರೋಧಕ್ಕೆ ಕಾರಣವಾಗಿದ್ದ ಸ್ವಾತಂತ್ರ್ಯ ಯೋಧರ ಕುಟುಂಬದ ಮೀಸಲಾತಿಯನ್ನು ಕೋರ್ಟ್ ಕೈಬಿಟ್ಟಿಲ್ಲ. ಬದಲಿಗೆ ಶೇ. 30ರಷ್ಟಿದ್ದ ಇವರ ಮೀಸಲಾತಿಯನ್ನು ಶೇ.5ಕ್ಕೆ ಸೀಮಿತಗೊಳಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನಾಗರಿಕ ಸೇವಾ ಉದ್ಯೋಗಗಳಲ್ಲಿ ಶೇಕಡ 5ರಷ್ಟು ಸ್ವಾತಂತ್ರ್ಯ ಹೋರಾಟದ ಯೋಧರ ಮಕ್ಕಳಿಗೆ ಮತ್ತು ಶೇಕಡ 2ರಷ್ಟು ಇತರ ವರ್ಗಗಳಿಗೆ ಮೀಸಲಿಡಲಾಗುವುದು ಎಂದು ಕೋರ್ಟ್ ಹೇಳಿದೆ. ಈ ಹಿಂದೆ, 30 ಪ್ರತಿಶತದಷ್ಟು ಉದ್ಯೋಗಗಳನ್ನು ಯುದ್ಧದಲ್ಲಿ ಪಾಲ್ಗೊಂಡ ಯೋಧರ ಸಂಬಂಧಿಕರಿಗೆ ಮೀಸಲಿಡಲಾಗಿತ್ತು. ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಸರ್ಕಾರವು 2018 ರಲ್ಲಿ ಮೀಸಲು ಕೋಟಾ ವ್ಯವಸ್ಥೆಯನ್ನು ರದ್ದುಗೊಳಿಸಿತ್ತು. ಆದರೆ ಕೆಳಗಿನ ನ್ಯಾಯಾಲಯವು ಕಳೆದ ತಿಂಗಳು ಅದನ್ನು ಮರು ಸ್ಥಾಪಿಸಿತ್ತು. ಇದನ್ನು ವಿರೋಧಿಸಿ ದೇಶದಲ್ಲಿ ಹಿಂಸಾಚಾರ ನಡೆದಿತ್ತು.

![]()
![]()
ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಶೇ 30ರಷ್ಟು ಮೀಸಲಾತಿ ನೀಡುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂಸಾಚಾರದಲ್ಲಿ ಇಲ್ಲಿಯವರೆಗೆ 150 ಜನರು ಸಾವನ್ನಪ್ಪಿದ್ದಾರೆ. 2500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು, ಸರ್ಕಾರವು ದೇಶಾದ್ಯಂತ ಕರ್ಫ್ಯೂವನ್ನು ಹೇರಿದ್ದು ಹಿಂಸಾನಿರತರ ಮೇಲೆ ಗುಂಡಿಕ್ಕಲು ಆದೇಶ ನೀಡಿದೆ. ಕೆಲವು ನಗರಗಳಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಲಾಗಿದೆ.
Bangladesh's top court has scrapped most of the quotas on government jobs that had sparked violent clashes across the country that have killed more than 150 people. A third of public sector jobs had been reserved for the relatives of veterans from the country’s war for independence from Pakistan in 1971. But now the court has ruled just 5% of the roles can be reserved for veterans' relatives.
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
01-03-26 09:52 am
HK News Staffer
ದುಬೈ, ಅಬುಧಾಬಿ ಮೇಲೆ ಇರಾನ್ ಮಿಸೈಲ್ ದಾಳಿ ; ಜಗತ್ತಿ...
28-02-26 10:54 pm
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm