ಬ್ರೇಕಿಂಗ್ ನ್ಯೂಸ್
15-07-24 07:33 pm HK News Desk ದೇಶ - ವಿದೇಶ
ಲಕ್ನೋ, ಜುಲೈ 15: ಅತಿ ಆತ್ಮವಿಶ್ವಾಸದಿಂದಲೇ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವಲ್ಲಿ ವಿಫಲವಾಯಿತು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋದ ರಾಮ ಮನೋಹರ್ ಲೋಹಿಯಾ ನ್ಯಾಶನಲ್ ಲಾ ಯುನಿವರ್ಸಿಟಿ ಕ್ಯಾಂಪಸಿನ ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಯೋಗಿ ಈ ಮಾತುಗಳನ್ನಾಡಿದ್ದಾರೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ಈ ಬಾರಿ ವಿಪಕ್ಷಗಳ ಪಾಲಿಗೆ ದೊಡ್ಡ ಮಟ್ಟದ ಒತ್ತಡವನ್ನು ಹೇರಿದ್ದೆವು. ಅವರೆಲ್ಲ ಸೇರಿ ಬಿಜೆಪಿಯನ್ನು ಎದುರಿಸಿದರೂ, 2014, 2019ರ ಲೋಕಸಭೆ 2017 ಮತ್ತು 2022ರ ಅಸೆಂಬ್ಲಿ ಚುನಾವಣೆಯಲ್ಲಿ ಪಡೆದಷ್ಟೇ ಮತಗಳನ್ನು ಈ ಬಾರಿಯೂ ಪಡೆದಿದ್ದೇವೆ. 2024ರ ಲೋಕಸಭೆ ಚುನಾವಣೆಯಲ್ಲಿ ಪರ್ಸೆಂಟೇಜ್ ಮತ ಗಳಿಕೆ ಕಡಿಮೆಯಾಗಿಲ್ಲ.
ಒಂದಷ್ಟು ಮತಗಳು ಪಕ್ಷ ಬದಲಿಸಿರುವುದು ಮತ್ತು ಅತಿ ಆತ್ಮವಿಶ್ವಾಸವು ನಮ್ಮ ನಿರೀಕ್ಷೆಯನ್ನು ಬುಡಮೇಲು ಮಾಡಿತ್ತು. ಹಿಂದಿನ ಚುನಾವಣೆಗಳಲ್ಲಿ ಹೀನಾಯ ಫಲಿತಾಂಶ ತೋರಿದ್ದ ವಿಪಕ್ಷಗಳು ಈಗ ಎದೆಯ ಮಟ್ಟಕ್ಕೆ ಬಂದು ಮುಟ್ಟಿವೆ. ಆದರೆ 2027ರ ಅಸೆಂಬ್ಲಿ ಚುನಾವಣೆಯಲ್ಲಿ ನಾವು ಖಚಿತವಾಗಿ ಮತ್ತೊಮ್ಮೆ ಗೆಲ್ಲುವ ಭರವಸೆ ಹೊಂದಿದ್ದೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಜಾತಿ ಮುಂದಿಟ್ಟು ಸಮಾಜವನ್ನು ವಿಭಜಿಸಿದವು. ಪಕ್ಷದ ನಾಯಕರು ಈ ರೀತಿಯ ವಿಭಜನೆಯ ಬಗ್ಗೆ ಎಚ್ಚರ ಇರಬೇಕು. ಇದನ್ನೆಲ್ಲ ಎದುರಿಸಲು ಸೋಶಿಯಲ್ ಮೀಡಿಯಾವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಯೋಗಿ ಪಕ್ಷದ ನಾಯಕರಿಗೆ ಸಲಹೆ ಮಾಡಿದ್ದಾರೆ. ವಿಪಕ್ಷಗಳು ಮತ್ತು ವಿದೇಶಿ ಶಕ್ತಿಗಳು ನಮ್ಮ ವಿರುದ್ಧ ಸೋಶಿಯಲ್ ಮೀಡಿಯಾವನ್ನು ಚೆನ್ನಾಗಿ ಬಳಸಿಕೊಂಡವು. ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾಗಳನ್ನು ಗಮನಿಸುತ್ತಿರಬೇಕು ಮತ್ತು ಸುಳ್ಳು ವದಂತಿಗಳಿಗೆ ಕೌಂಟರ್ ನೀಡುತ್ತಿರಬೇಕು. ಎಸ್ಸಿ- ಎಸ್ಟಿ ಜನಾಂಗದ ಬಗ್ಗೆ ಪಕ್ಷ ಇಟ್ಟಿರುವ ಗೌರವದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. 2019ರಲ್ಲಿ ನಾವು ವಿಪಕ್ಷಗಳ ಮಹಾ ಒಕ್ಕೂಟವನ್ನು ಸೋಲಿಸಿದ್ದೆವು ಎನ್ನುವುದನ್ನು ಮರೆಯಬಾರದು. ಅಲ್ಲದೆ, ಸದ್ಯದಲ್ಲೇ ಎದುರಾಗುವ ಹತ್ತು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಸಂಸದರಿಂದ ಹಿಡಿದು ಕೌನ್ಸಿಲರ್ ವರೆಗೂ ಪಕ್ಷದ ಸದಸ್ಯರು ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ನಡೆದ ಮಹತ್ವದ ಸಭೆ ಇದಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಪ್ರಮುಖ ಸಚಿವರು ಪಾಲ್ಗೊಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಯುಪಿಯಲ್ಲಿ 33 ಸ್ಥಾನಗಳಿಗೆ ಕುಸಿಯುವ ಮೂಲಕ ದೊಡ್ಡ ಹಿನ್ನಡೆ ಅನುಭವಿಸಿತ್ತು. 2019ರಲ್ಲಿ ರಾಜ್ಯದಲ್ಲಿ 62 ಸಂಸದ ಸೀಟು ಗೆದ್ದಿದ್ದರೆ, 2014ರಲ್ಲಿ ಬಿಜೆಪಿ 71 ಸೀಟು ಗೆದ್ದಿತ್ತು.
Uttar Pradesh Chief Minister Yogi Adityanath on Sunday said that overconfidence kept the BJP from achieving the desired success in Uttar Pradesh in the 2024 Lok Sabha election. However, he expressed confidence in the ruling party’s victory in the 2027 Assembly polls.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm