ಬ್ರೇಕಿಂಗ್ ನ್ಯೂಸ್
30-06-24 11:48 pm Headline Karnataka News ದೇಶ - ವಿದೇಶ
ಮಂಗಳೂರು, ಜೂ 30: ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಿಗೆ 2024ರ ಜೂನ್ 30 ಕೊನೆ ದಿನವಾಗಲಿದೆ. ಜುಲೈ 1ರಿಂದಲೇ ಅಪರಾಧಗಳಿಗೆ ಸಂಬಂಧಿಸಿ ರೂಪಿಸಲಾಗಿರುವ ಹೊಸ ಕಾನೂನು ಪದ್ಧತಿ ದೇಶಾದ್ಯಂತ ಜಾರಿಗೆ ಬರಲಿದೆ.
ಹಾಲಿ ಇರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಇನ್ನು ಭಾರತೀಯ ನ್ಯಾಯ ಸಂಹಿತೆಯಾಗಿ ಕೆಲವೊಂದು ಮಾರ್ಪಾಡುಗಳೊಂದಿಗೆ ಜಾರಿಗೆ ಬರಲಿದೆ. ಅಪರಾಧ ಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಬದಲಾಗಲಿದೆ. ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿ ಹೊಸ ಕಾನೂನು ಜಾರಿಯಾಗುವುದರೊಂದಿಗೆ ಬ್ರಿಟಿಷರ ಕಾಲದ ಕಾನೂನು ಪದ್ಧತಿಗೆ ಕೊನೆಯಾಗಲಿದೆ. ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಯಾಗಿದ್ದು ಝೀರೋ ಎಫ್ಐಆರ್, ಪೊಲೀಸ್ ದೂರುಗಳ ಆನ್ಲೈನ್ ದಾಖಲು, ಎಸ್ಎಂಎಸ್ ಮೂಲಕ ಇಲೆಕ್ಟ್ರಾನಿಕ್ ಸಮನ್ಸ್ ಜಾರಿ ಮುಂತಾದ ಹೊಸ ಪ್ರಕ್ರಿಯೆ ಇರಲಿದೆ. ಇದರೊಂದಿಗೆ ಭಾರತೀಯ ದಂಡ ಸಂಹಿತೆ 1860, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ 1872 ಅನ್ನು ರದ್ದಾಗಲಿದೆ.
ಯಾವುದೇ ಠಾಣೆಯಲ್ಲಿ ಎಫ್ಐಆರ್ ಸಾಧ್ಯ
ಯಾವುದೇ ವ್ಯಕ್ತಿಯು ದೈಹಿಕವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವ ಅಗತ್ಯವಿಲ್ಲ. ಇಲೆಕ್ಟ್ರಾನಿಕ್ ಸಂವಹನದ ಮೂಲಕ ವಿಷಯದ ಮಾಹಿತಿ ನೀಡಬಹುದು. ಇದು ಸುಲಭ ಮತ್ತು ತ್ವರಿತವಾಗಿ ವರದಿ ಮಾಡಲು ಸಹಾಯ ಮಾಡಲಿದೆ ಎನ್ನಲಾಗಿದೆ. ಅಲ್ಲದೆ, ಅಪರಾಧ ಎಲ್ಲಿ ನಡೆದರೂ, ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಹೊಸ ಕಾನೂನು ಅವಕಾಶ ನೀಡಲಿದೆ. ಒಂದು ರಾಜ್ಯವು ವಿಧಿವಿಜ್ಞಾನ ಪರೀಕ್ಷೆ ಸೌಲಭ್ಯ ಹೊಂದಿಲ್ಲದಿದ್ದರೆ, ಅದು ಇನ್ನೊಂದು ರಾಜ್ಯದಲ್ಲಿ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶ ನೀಡಲಿದೆ. ಪ್ರಮುಖ ಬದಲಾವಣೆಯಂದ್ರೆ, ಜೀವಾವಧಿ ಅಥವಾ ಹಲವು ಪ್ರಕರಣಗಳನ್ನು ಹೊಂದಿಲ್ಲದ, ಮೊದಲ ಬಾರಿಗೆ ಅಪರಾಧ ಪ್ರಕರಣಗಳಲ್ಲಿ ಜೈಲು ಪಾಲಾದವರು ಶಿಕ್ಷೆಯ ಪ್ರಮಾಣದ ಮೂರನೇ ಒಂದು ಭಾಗದಷ್ಟು ಶಿಕ್ಷೆ ಅನುಭವಿಸುತ್ತಿದ್ದರೆ, ಜಾಮೀನು ಪಡೆಯಲು ಅವಕಾಶ ಮಾಡಿಕೊಡುತ್ತದೆ.
ಭಾರತೀಯ ನ್ಯಾಯ ಸಂಹಿತೆಯು ಹಿಂದಿನ 511 ಸೆಕ್ಷನ್ ಬದಲಾಗಿ ಈಗ 358 ಸೆಕ್ಷನ್ ಮಿತಿಗೆ ಇಳಿದಿದೆ. 20 ಹೊಸ ಅಪರಾಧ ಸೆಕ್ಷನ್ ಸೇರಿಸಲ್ಪಟ್ಟಿದ್ದು, 33 ಅಪರಾಧಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಲಾಗಿದೆ. 83 ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. 23 ಅಪರಾಧಗಳಿಗೆ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ಪರಿಚಯಿಸಲಾಗಿದೆ. 19 ಸೆಕ್ಷನ್ ಗಳನ್ನು ರದ್ದುಪಡಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಿಂದಿನ 484 ಸೆಕ್ಷನ್ ಬದಲಿಗೆ ಹೊಸತಾಗಿ 47 ಸೆಕ್ಷನ್ ಸೇರ್ಪಡೆಗೊಂಡು 531 ಆಗಲಿದೆ. 177 ಕಲಂಗಳನ್ನು ಬದಲಿಸಿದ್ದು, 9 ಸೆಕ್ಷನ್ ಸೇರಿಸಲಾಗಿದೆ. 44 ಹೊಸ ಕಲಂಗಳು ಸೇರಿಕೊಂಡಿವೆ. ಭಾರತೀಯ ಸಾಕ್ಷ್ಯ ಅಧಿನಿಯಮದಲ್ಲಿ ಹಿಂದೆ 166 ಸೆಕ್ಷನ್ ಗಳಿದ್ದರೆ, ಹೊಸತರಲ್ಲಿ ಕೆಲವೊಂದು ಮಾರ್ಪಾಡುಗಳೊಂದಿಗೆ 170 ಸೆಕ್ಷನ್ ಗಳಾಗಿ ಬದಲಾಗಿದೆ.
As the new criminal laws are set to be implemented from July 1, all 17,500 police stations across the country will hold special events to inform women, youth, students, senior citizens, and eminent personalities about the key features of these laws. The laws -- the Bharatiya Nyaya Sanhita 2023, Bharatiya Nagarik Suraksha Sanhita 2023, and Bharatiya Sakshya Adhiniyam 2023 -- will replace the British-era Indian Penal Code, Code of Criminal Procedure, and Indian Evidence Act, respectively.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm