ಬ್ರೇಕಿಂಗ್ ನ್ಯೂಸ್
08-06-24 10:27 am HK NEWS ದೇಶ - ವಿದೇಶ
ಹೈದರಾಬಾದ್, ಜೂ 8: ಈಟಿವಿ ನೆಟ್ವರ್ಕ್, ರಾಮೋಜಿ ಫಿಲ್ಮ್ ಸಿಟಿ, ಈನಾಡು ಪತ್ರಿಕೆ ಸ್ಥಾಪಕ, ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಇಡೀ ದೇಶದಲ್ಲೇ ವಿಶಿಷ್ಟ ವ್ಯಕ್ತಿಯಾಗೆ ಬೆಳೆದು ದಕ್ಷಿಣ ಭಾರತದ ಮಟ್ಟಿಗೆ ಮಾಧ್ಯಮ ರಂಗದ ಭೀಷ್ಮ ಎಂದೇ ಕರೆಸಿಕೊಂಡ ರಾಮೋಜಿ ರಾವ್ ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಸುಕಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಜೂನ್ 5ರಂದು ಹೈದರಾಬಾದ್ ನಗರದ ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮೋಜಿ ಅವರಿಗೆ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ರಾಮೋಜಿ ರಾವ್ ಇಹಲೋಕ ತ್ಯಜಿಸಿದ್ದಾರೆ. ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬಲ್ಲಿ ಜನಿಸಿದ್ದ ರಾಮೋಜಿ, 1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಈನಾಡು ದಿನಪತ್ರಿಕೆ ಮೂಲಕ ತೆಲುಗು ಪತ್ರಿಕಾ ರಂಗದಲ್ಲಿ ಕ್ರಾಂತಿ ಎಬ್ಬಿಸಿದ್ದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಆರಂಭಿಸಿದ್ದ ಪತ್ರಿಕೆ, ತೆಲುಗು ಪತ್ರಿಕೋದ್ಯಮ ರಂಗದಲ್ಲಿ 'ಈನಾಡು' ಹೆಸರಿನ ಹೊಸ ಯುಗಕ್ಕೆ ಕಾರಣವಾಗಿತ್ತು. ನಾಲ್ಕೇ ವರ್ಷಗಳಲ್ಲಿ ಓದುಗರ ಅಚ್ಚುಮೆಚ್ಚಿನ ದಿನಪತ್ರಿಕೆಯಾಗಿ ಹೊರಹೊಮ್ಮಿತ್ತು. ಜೊತೆಗೆ 'ಸಿತಾರಾ' ಹೆಸರಿನ ಸಿನಿಮಾ ಪತ್ರಿಕೆಯೂ ತೆಲುಗು ಪತ್ರಿಕಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.


ದಕ್ಷಿಣ ಭಾರತದಲ್ಲಿ ಅತ್ಯಾಧುನಿಕ ರೀತಿಯ ಫಿಲಂ ಸಿಟಿ ಆಗಬೇಕೆಂಬ ಕನಸು ಕಂಡ ರಾಮೋಜಿ ರಾವ್ ತನ್ನ ಹೆಸರಿನಲ್ಲೇ ಅದ್ಭುತ ಫಿಲ್ಮ್‌ಸಿಟಿಯೊಂದನ್ನು ನಿರ್ಮಿಸಿದ್ದರು. ರಾಮೋಜಿ ಫಿಲಂ ಸಿಟಿ ಅದೆಷ್ಟೋ ಭಾರತೀಯ ಸಿನಿಮಾಗಳ ನಿರ್ಮಾಣಕ್ಕೆ ಜೀವ ತುಂಬಿದೆ. ಬಾಹುಬಲಿಯಂತಹ ಹೈ ಬಜೆಟ್ ಸಿನಿಮಾಗಳನ್ನು ಇದೇ ಫಿಲಂ ಸಿಟಿಯಲ್ಲಿ ಮಾಡಲಾಗಿತ್ತು. ಪ್ರವಾಸೋದ್ಯಮ ಕೇಂದ್ರವಾಗಿಯೂ ಬೆಳೆದು ನಿಂತ ಫಿಲಂ ಸಿಟಿ, ತೆಲುಗು ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.
ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಬೆಳೆದ ರಾಮೋಜಿ ರಾವ್ ಯಶಸ್ವಿ ಉದ್ಯಮಿಯಾಗಿ, ಚಿತ್ರ ನಿರ್ಮಾಪಕನಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದ್ದೇ ರೋಚಕ ಕತೆ. ಎಲ್ಲ ರಾಜ್ಯ ಭಾಷೆಗಳಲ್ಲಿ ಈಟಿವಿ ಸುದ್ದಿ ವಾಹಿನಿ ಆರಂಭಿಸುವ ಮೂಲಕ ಭಾರತೀಯ ಮಾಧ್ಯಮ ಜಗತ್ತಿನಲ್ಲಿ ಹೊಸ ಕ್ರಾಂತಿ ಮೂಡಿಸಿದ್ದರು. ಬಹುರಾಷ್ಟ್ರೀಯ ಕಂಪನಿಗಳು ಸುದ್ದಿ ಮಾಧ್ಯಮಗಳತ್ತ ಕಣ್ಣು ಬಿಡುವ ಮೊದಲೇ ಸ್ಥಳೀಯ ಭಾಷೆಗಳಲ್ಲಿ ಸುದ್ದಿ ನೆಟ್ವರ್ಕ್ ಸ್ಥಾಪಿಸಿದ್ದರು. ಸಿನಿಮಾ ಮತ್ತು ಮಾಧ್ಯಮ ಅವರ ನೆಚ್ಚಿನ ಕ್ಷೇತ್ರಗಳಾಗಿದ್ದವು. ಕೊನೆ ಕೊನೆಗೆ ಹೊಟೇಲ್ ಉದ್ಯಮಕ್ಕೂ ಕಾಲಿಟ್ಟು ಅಲ್ಲಿಯೂ ಮಿಂಚು ಹರಿಸಿದ್ದರು. ಡಾಲ್ಫಿನ್ ಹೊಟೇಲ್ ಸಮೂಹ ರಾಮೋಜಿ ಗ್ರೂಪಿನಲ್ಲಿ ಸೃಷ್ಟಿಯಾಗಿದ್ದ ಪ್ರತ್ಯೇಕ ಉದ್ಯಮ. ಇದಲ್ಲದೆ, ಹೈದರಾಬಾದಿನಲ್ಲಿ ಮಾರ್ಗದರ್ಶಿ ಚಿಟ್ ಫಂಡ್, ರಮಾದೇವಿ ಪಬ್ಲಿಕ್ ಶಾಲೆ, ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಶನ್ಸ್ ರಾಮೋಜಿ ರಾವ್ ಗ್ರೂಪಿನ ಸಹ ಸಂಸ್ಥೆಗಳಾಗಿವೆ.
Cherukuri Ramoji Rao, the head of Telugu news and entertainment network ETV and founder of Ramoji Film City, passed away at 87 in Hyderabad on Saturday morning. Rao was undergoing treatment for the past few days and breathed his last at 4.50 am, according to ETV Telangana, one of the Ramoji Group channels.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm