ಬ್ರೇಕಿಂಗ್ ನ್ಯೂಸ್
04-06-24 10:15 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 4: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಅದರೆ ಹಿಂದಿನ ಎರಡು ಗೆಲುವಿಗೆ ಹೋಲಿಸಿದರೆ, ಈ ಬಾರಿ ಗೆಲುವಿನ ಅಂತರ ಕಡಿಮೆಯಾಗಿದೆ. 1,52,513 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ವಿರುದ್ಧ ಪ್ರಯಾಸದ ಗೆಲುವು ಕಂಡಿದ್ದಾರೆ. ಮತ ಎಣಿಕೆಯ ಒಂದು ಹಂತದಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಜಯ್ ರಾಯ್ ಇಡೀ ದೇಶದಲ್ಲಿ ಸಂಚಲನ ಎಬ್ಬಿಸಿದ್ದರು.
2019ರಲ್ಲಿ ಮೋದಿ ನಿಕಟ ಎದುರಾಳಿ ಎಸ್ಪಿ ಪಕ್ಷದ ಶಾಲಿನಿ ಯಾದವ್ ವಿರುದ್ಧ 4,79,505 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಅಂದು ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಮೂರನೇ ಸ್ಥಾನಕ್ಕೆ ಹೋಗಿದ್ದರು. 2014ರಲ್ಲಿ ಮೋದಿಯವರು 3,71,784 ಮತಗಳ ಅಂತರದಿಂದ ಎದುರಾಳಿ ಆಪ್ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧ ಗೆದ್ದಿದ್ದರು. ಈ ಬಾರಿ ಮೋದಿ ಗೆಲುವಿನ ಅಂತರದಲ್ಲಿ ದಾಖಲೆ ಸ್ಥಾಪಿಸಲಿದ್ದಾರೆ ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದರು. ಆದರೆ ಎಸ್ಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಬಿಜೆಪಿಯನ್ನು ಎದುರಿಸಿದ್ದರಿಂದ ಮೋದಿ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ.
ಇಷ್ಟಕ್ಕೂ ಈ ಅಜಯ್ ರಾಯ್ ಯಾರು ?
ಪ್ರಧಾನಿ ಮೋದಿ ಸ್ಪರ್ಧಿಸುತ್ತಿರುವುದರಿಂದ ಇಡೀ ದೇಶದಲ್ಲಿ ಹೈಪ್ರೊಫೈಲ್ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದ್ದ ವಾರಣಾಸಿಯಲ್ಲಿ ಕಾಂಗ್ರೆಸಿನಿಂದ ಸ್ಪರ್ಧಿಸಿದ್ದ ಅಜಯ್ ರಾಯ್ ಮತ ಎಣಿಕೆಯ ದಿನದ ಬೆಳಗ್ಗಿನ ಒಂದು ಹಂತದಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ಕಾರ್ಯಕರ್ತರ ಹಣೆಯಲ್ಲಿ ಬೆವರು ಹರಿಸಿದ್ದರು. ಇಷ್ಟಕ್ಕೂ ಈ ಅಜಯ್ ರಾಯ್, ಕೇಸರಿ ಪಕ್ಷದಲ್ಲೇ ಶಾಸಕರಾಗಿ ಬೆಳೆದು ಬಂದವರು. 1997, 2002, 2007ರಲ್ಲಿ ಮೂರು ಬಾರಿ ವಾರಣಾಸಿ ಜಿಲ್ಲೆಯ ಕೊಲಸಾಲ್ ಅಸೆಂಬ್ಲಿ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿದ್ದರು. 2009ರಲ್ಲಿ ಸಂಸತ್ ಕ್ಷೇತ್ರದ ಟಿಕೆಟ್ ನಿರಾಕರಿಸಿದ್ದಕ್ಕೆ ಬಿಜೆಪಿ ಬಿಟ್ಟು ಸಮಾಜವಾದಿ ಪಾರ್ಟಿಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.
2012ರಲ್ಲಿ ಕಾಂಗ್ರೆಸ್ ಸೇರಿದ್ದ ಅಜಯ್ ರಾಯ್ ವಾರಣಾಸಿ ಜಿಲ್ಲೆಯಲ್ಲಿ ಹೊಸತಾಗಿ ಸೃಷ್ಟಿಯಾಗಿದ್ದ ಪಿಂಡ್ರಾ ಶಾಸಕ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. 2014ರಲ್ಲಿ ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ, ಮತ್ತೆ ಸಂಸತ್ ಚುನಾವಣೆಗೆ ಕಣಕ್ಕಿಳಿದು ಮೂರನೇ ಸ್ಥಾನಕ್ಕೆ ಹೋಗಿದ್ದರು. ಅರವಿಂದ ಕೇಜ್ರಿವಾಲ್ ಎರಡನೇ ಸ್ಥಾನದಲ್ಲಿದ್ದರು. 2014ರಲ್ಲಿ 75614 ಮತಗಳನ್ನು ಪಡೆದಿದ್ದ ಅಜಯ್, 2019ರ ಚುನಾವಣೆಯಲ್ಲಿ ಮತ ಗಳಿಕೆಯನ್ನು ಹೆಚ್ಚಿಸಿ 152548 ಮತ ಗಳಿಸಿದ್ದರು. ಈ ಬಾರಿ ಮೋದಿ ವಿರುದ್ಧ ಛಲ ಬಿಡದ ಛಲದಂಕ ಮಲ್ಲನಂತೆ ಹೋರಾಡಿ ಮತ್ತೊಮ್ಮೆ ಸೋಲುಂಡಿದ್ದಾರೆ.
ಮೋದಿ ವಲಸಿಗ ಎಂದು ಜರೆದಿದ್ದ ಅಜಯ್
ಈ ಬಾರಿ ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಸ್ಪರ್ಧಿಸಿದ್ದರಿಂದ ಸೀಮಿತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಅಜಯ್ ರಾಯ್ ಮಾತ್ರ ನೇರವಾಗಿ ಮೋದಿಯನ್ನು ಟಾರ್ಗೆಟ್ ಮಾಡಿ, ಪ್ರಚಾರ ಆರಂಭಿಸಿದ್ದರು. ಮೋದಿ ಹೊರಗಿನಿಂದ ಬಂದವರು, ವಲಸಿಗರು. ಮೋದಿ ಈ ದೇಶಕ್ಕೆ ಅಪಾಯಕಾರಿ, ಸುಳ್ಳುಗಾರ. ಅವರಿಗೆ ಸೋಲಿಸಿ ಪಾಠ ಕಲಿಸಬೇಕೆಂದು ಜನರಿಗೆ ಕರೆ ಕೊಟ್ಟಿದ್ದರು. ಮೋದಿಯವರು ಓಟಿಗಾಗಿ ಈಗ ವಾರಣಾಸಿಯ ಎರಡು ಸಾವಿರ ಜನರಿಗೆ ಪತ್ರ ಬರೆದಿದ್ದಾರೆ. ಆದರೆ, ಕೊರೊನಾ ಸೋಂಕಿನಿಂದ ಸಾವಿರಾರು ಮಂದಿ ಸತ್ತಾಗ ಯಾಕೆ ಮೋದಿ ಅವರ ಕುಟುಂಬಸ್ಥರಿಗೆ ಕಂಬನಿಗರೆದು ಪತ್ರ ಬರೆದಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಈ ರೀತಿಯ ಸೆಂಟಿಮೆಂಟಲ್ ಮಾತುಗಳು ವಾರಣಾಸಿಯಲ್ಲಿ ಮೋದಿ ವಿರುದ್ಧ ಜನರನ್ನು ಎತ್ತಿಕಟ್ಟಿದ್ದವು.
Prime Minister Modi on June 4 expressed confidence that NDA will form the government for a third consecutive term, as he addressed BJP workers at the party headquarters. Mr. Modi thanked the BJP workers for their sweat and hard work and said that this inspires Modi to work for the country. He also praised the Election Commission (EC) for successfully conducting the elections, 100 crore voters, 11 lakh polling stations, 1.5 crore poll officials, 50 lakh EVMs, everyone performed their duty in such heat, security personnel performed exemplary well.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm