ಬ್ರೇಕಿಂಗ್ ನ್ಯೂಸ್
26-05-24 09:00 pm HK News Desk ದೇಶ - ವಿದೇಶ
ನವದೆಹಲಿ, ಮೇ.26: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ದೊಡ್ಡ ಮಟ್ಟದ ಗೆಲುವು ಸಾಧಿಸಲಿದೆ ಎಂದು ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಜೂನ್ 4 ರಂದು ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಬಿಜೆಪಿ 303 ಅಥವಾ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂದು ಪ್ರಶಾಂತ್ ಕಿಶೋರ್ ತಮ್ಮ ಸಮೀಕ್ಷೆಯನ್ನು ಪ್ರಶ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ.
ನಮ್ಮ ಸಮೀಕ್ಷೆಗಳನ್ನು ಪ್ರಶ್ನಿಸುತ್ತಿರುವವರು ಜೂನ್ 4ರಂದು ಪಕ್ಕದಲ್ಲಿ ನೀರು ಇಟ್ಟುಕೊಂಡಿರಿ. ಯಾಕಂದ್ರೆ, ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರಶಾಂತ್ ಕಿಶೋರ್ ಪೋಸ್ಟ್ ಮಾಡಿದ್ದಾರೆ.
ಮೇ 21ರಂದು ಎನ್ ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್, ಬಿಜೆಪಿ ಗೆಲುವಿನ ಭವಿಷ್ಯ ನುಡಿದಿದ್ದರು. ಪ್ರಸ್ತುತ ಪ್ರತಿಪಕ್ಷಗಳು ಮತ್ತು ಸಾಮಾನ್ಯ ಜನರ ಮೌಲ್ಯಮಾಪನವು ಬಿಜೆಪಿ 370 ಸ್ಥಾನಗಳನ್ನು ಪಡೆಯುತ್ತದೆಯೋ ಇಲ್ಲವೋ ಎಂಬುದರ ಸುತ್ತ ಸುತ್ತುತ್ತಿದೆ. 272 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಹೇಳಿದ್ದರು. ಕಿಶೋರ್ ಪ್ರಕಾರ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ತಮಿಳುನಾಡು, ಕೇರಳದಂತಹ ಪೂರ್ವ ಮತ್ತು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆ 15-20 ಸ್ಥಾನಗಳಷ್ಟು ಹೆಚ್ಚಾಗುತ್ತದೆ. ಈ ರಾಜ್ಯಗಳಲ್ಲಿ ಬಿಜೆಪಿಯ ಮತ ಪ್ರಮಾಣವೂ ಹೆಚ್ಚಲಿದೆ. ಅಂದರೆ ಎನ್‌ಡಿಎ ಪರಿಸ್ಥಿತಿ ಇವತ್ತಿಗಿಂತ ಚೆನ್ನಾಗಿರಬಹುದು. ಸೀಟು ಕಡಿಮೆಯಾಗುವ ಸಾಧ್ಯತೆ ತೀರಾ ಕಡಿಮೆ ಎನಿಸುತ್ತಿದೆ ಎಂದು ಹೇಳಿದ್ದರು.
400 ಮತ್ತು 370 ದಾಟುವ ಮೋದಿಯವರ ಘೋಷಣೆ ಬಿಜೆಪಿಯ ಚುನಾವಣಾ ಆಟವಾಗಿದೆ. ಪ್ರತಿಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳಲು ಸೋತಿವೆ. ಅಲ್ಲದೆ, ಗೊಂದಲಕ್ಕೀಡಾಗಿದ್ದನ್ನು ಕಂಡಿದ್ದೇವೆ. 2019ರಂತೆಯೇ ಎನ್‌ಡಿಎ 303 ಸ್ಥಾನಗಳೊಂದಿಗೆ ಅಥವಾ ಇನ್ನೂ ಹೆಚ್ಚು ಸ್ಥಾನಗಳೊಂದಿಗೆ ತೇರ್ಗಡೆಯಾಗಲಿದೆ ಎಂದವರು ಹೇಳಿದ್ದರು.
ಉತ್ತರ ಮತ್ತು ಪಶ್ಚಿಮದಲ್ಲಿ ಸುಮಾರು 325 ಲೋಕಸಭೆ ಸ್ಥಾನಗಳಿವೆ. 2014ರಿಂದ ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಈ ಕ್ಷೇತ್ರಳಲ್ಲಿ ಬಿಜೆಪಿಗೆ ಯಾವುದೇ ದೊಡ್ಡ ಮಟ್ಟದ ನಷ್ಟ ಕಂಡುಬರುತ್ತಿಲ್ಲ. ಪೂರ್ವ ಮತ್ತು ದಕ್ಷಿಣದಲ್ಲಿ ಸುಮಾರು 225 ಸ್ಥಾನಗಳಿವೆ. ಪ್ರಸ್ತುತ ಈ ರಾಜ್ಯಗಳಲ್ಲಿ ಬಿಜೆಪಿ 50ಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿದೆ. ಈ ಸ್ಥಳಗಳಲ್ಲಿ ಬಿಜೆಪಿಯ ಸಾಧನೆ ಚೆನ್ನಾಗಿರದಿದ್ದರೂ ಈ ಸಲದ ಚುನಾವಣೆಯಲ್ಲಿ ಫಲಿತಾಂಶ ಉತ್ತಮವಾಗಲಿದೆ. ಒಡಿಶಾ, ತೆಲಂಗಾಣ, ಬಿಹಾರ, ಆಂಧ್ರ, ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ರಾಜ್ಯಗಳಲ್ಲೂ ಬಿಜೆಪಿ ಸ್ಥಾನಗಳು ಹೆಚ್ಚಲಿವೆ. ಇಲ್ಲಿ ಪಕ್ಷವು ಒಟ್ಟು ಸ್ಥಾನಗಳಲ್ಲಿ 15-20 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿರುವುದು ದೇಶಾದ್ಯಂತ ಚರ್ಚೆಗೀಡು ಮಾಡಿದೆ.
Political analyst Prashant Kishor, who predicted that the BJP will repeat its 2019 Lok Sabha performance but not exceed 370 seats, cited psephologist Yogendra Yadav to back his forecast. Despite both having different predictions on the number of seats that the BJP will win, Yadav's prediction suggested that the saffron side with the help of its allies will manage to form a government for a third term.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm