ಕಾಮೋತ್ತೇಜಕ ಮಾತ್ರೆ ಇಫೆಕ್ಟ್ ; ಗಂಡನ ರಾಕ್ಷಸೀ ಕೃತ್ಯ, ಮದುವೆಯಾದ ಏಳೇ ದಿನಕ್ಕೆ ಯುವತಿ ಮರ್ಮಾಂಗದಲ್ಲಿ ಸೋಂಕು, ಆರೋಗ್ಯ ಹದಗೆಟ್ಟು ಸಾವು ! 

13-02-24 11:23 pm       HK News Desk   ದೇಶ - ವಿದೇಶ

ಗಂಡನ ಕಾಮೋತ್ತೇಜಕದ ಮದ್ದಿನ ಉತ್ಪಾತಕ್ಕೆ ತುತ್ತಾದ ಯುವತಿಯೊಬ್ಬಳು ಮದುವೆಯಾದ ಏಳೇ ದಿನಕ್ಕೆ ದುರಂತ ಅಂತ್ಯ ಕಂಡ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. 

ಲಕ್ನೋ, ಫೆ.13: ಗಂಡನ ಕಾಮೋತ್ತೇಜಕದ ಮದ್ದಿನ ಉತ್ಪಾತಕ್ಕೆ ತುತ್ತಾದ ಯುವತಿಯೊಬ್ಬಳು ಮದುವೆಯಾದ ಏಳೇ ದಿನಕ್ಕೆ ದುರಂತ ಅಂತ್ಯ ಕಂಡ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. 

ಯುವತಿಯ ಪೋಷಕರು ಮೃತಪಟ್ಟಿದ್ದು, ಸಹೋದರನೇ ಮುಂದೆ ನಿಂತು ವಿವಾಹ ಮಾಡಿಸಿಕೊಟ್ಟಿದ್ದ. ಮದುವೆ ಬಳಿಕ ಫೆ.4 ರಂದು ಯುವತಿ ಗಂಡನ ಮನೆಗೆ ಬಂದಿದ್ದಳು. ಮೊದಲ ರಾತ್ರಿ ಪತಿ ಕಾಮೋತ್ತೇಜಕ ಮಾತ್ರೆಗಳನ್ನು ಸೇವಿಸಿ ಪತ್ನಿ ಜೊತೆ ರಾಕ್ಷಸನಂತೆ ಸಂಭೋಗ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಪತ್ನಿಯ ಖಾಸಗಿ ಅಂಗಕ್ಕೆ ತೀವ್ರ ತರದ ಗಾಯಗಳಾಗಿದ್ದವು.‌ ಆನಂತರ ಕಾನ್ಪುರದಲ್ಲಿ ಬೇರೊಂದು ಮದುವೆ ಸಮಾರಂಭವೊಂದಕ್ಕೆ ತೆರಳಿದ್ದ ವೇಳೆ ಯುವತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಸೋಂಕಿಗೆ ಒಳಗಾಗಿದ್ದ ಯುವತಿ ಫೆ.10 ರಂದು ಸಾವನ್ನಪ್ಪಿದ್ದಾಳೆ. 

ಯುವತಿಯ ಅನಾರೋಗ್ಯದ ಬಗ್ಗೆ ಸ್ತ್ರೀರೋಗತಜ್ಞರ ಬಳಿ ಪರೀಕ್ಷೆ ಮಾಡಿಸಲಾಗಿತ್ತು. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಷ್ಟು ದೌರ್ಜನ್ಯದಿಂದಾಗಿ ಘಾಸಿಗೊಳಗಾಗಿದ್ದಳು ಎಂದು ವೈದ್ಯರು ಹೇಳಿದ್ದರು. ಪತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯ ಸಹೋದರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಪತಿ ತಲೆಮರೆಸಿಕೊಂಡಿದ್ದಾನೆ.

A shocking incident has come to light from Uttar Pradesh. A shocking incident has taken place that the new bride died on the seventh day of marriage. The sister-in-law of the deceased woman has alleged that the wife died of suffocation after her husband consumed stamina booster pills and had sexual intercourse.