ಬ್ರೇಕಿಂಗ್ ನ್ಯೂಸ್
05-12-23 03:40 pm HK News Desk ದೇಶ - ವಿದೇಶ
ಮುಂಬಯಿ, ಡಿ 05: ಆರ್ಥಿಕ ಸಂಕಷ್ಟದಿಂದಾಗಿ ಉದ್ಯೋಗಿಗಳಿಗೆ ಸಂಬಳ ನೀಡಲಾಗದ ಸ್ಥಿತಿಗೆ ಬೈಜೂಸ್ ತಲುಪಿತ್ತು. ಈಗ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್, ತಮ್ಮ ಮನೆಯನ್ನು ಅಡವಿಟ್ಟು ಹಣ ಸಂಗ್ರಹಿಸಿ ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ನೀಡಿದ್ದಾರೆ. ಅವರು ನೌಕರರ ವೇತನ ಪಾವತಿಗೆ ಕುಟುಂಬ ಸದಸ್ಯರಿಂದಲೂ ಹಣ ಪಡೆದಿದ್ದಾರೆ ಎಂದು 'ಎಕನಾಮಿಕ್ ಟೈಮ್ಸ್' ವರದಿ ಮಾಡಿದೆ.
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಕುಟುಂಬವು ಬೆಂಗಳೂರಿನಲ್ಲಿ ಎರಡು ಮನೆಗಳನ್ನು ಹೊಂದಿದೆ. ಮತ್ತು ಬೆಲೆಬಾಳುವ ಗೇಟೆಡ್ ಸಮುದಾಯ ಎಪ್ಸಿಲಾನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಇದೆ. ಇವನ್ನು ಅಡವಿಟ್ಟು ಬೈಜು ರವೀಂದ್ರನ್ ಸುಮಾರು 100 ಕೋಟಿ ರೂ. ಸಾಲ ಪಡೆದಿದ್ದಾರೆ.
ಸೋಮವಾರದಂದು ಬೈಜು ಅವರ ಮಾತೃ ಸಂಸ್ಥೆಯಾದ ಥಿಂಕ್ & ಲರ್ನ್ ಪ್ರೈವೇಟ್‌ನ 15,000 ಉದ್ಯೋಗಿಗಳಿಗೆ ಸಂಬಳ ಪಾವತಿಸಲು ಸ್ಟಾರ್ಟಪ್ ತನ್ನಲ್ಲಿರುವ ಹಣವನ್ನು ಬಳಸಿಕೊಂಡಿದ್ದು, ಕಡಿಮೆಯಾದ ಮೊತ್ತಕ್ಕೆ ಈ ಹಣವನ್ನು ಬಳಕೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ
ಶಿಕ್ಷಣ ಕ್ಷೇತ್ರದ ಪ್ರಮುಖ ಸ್ಟಾರ್ಟಪ್ ಬೈಜೂಸ್ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿವಾದ, ಸಂಕಷ್ಟಕ್ಕೆ ಸಿಲುಕಿರುವ ಕಂಪನಿ ಹಲವು ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ಪಾವತಿ ಮಾಡಿರಲಿಲ್ಲ. ಸೋಮವಾರ ಒಂದು ಸಾವಿರ ಉದ್ಯೋಗಿಗಳಿಗೆ ಬಾಕಿ ವೇತನ ಪಾವತಿ ಮಾಡಿದೆ.
ಹಠಾತ್ ತಾಂತ್ರಿಕ ದೋಷವೇ ಸಂಬಳ ವಿಳಂಬಕ್ಕೆ ಕಾರಣ ಎಂದು ಬೈಜೂಸ್ ಕಾರಣ ನೀಡಿತ್ತು. ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿತ್ತು. ಡಿಸೆಂಬರ್ 4ರ ಸೋಮವಾರದೊಳಗೆ ಸಂತ್ರಸ್ತ ಉದ್ಯೋಗಿಗಳ ವೇತನವನ್ನು ಅವರ ಖಾತೆಗಳಿಗೆ ಜಮೆ ಮಾಡುವ ಭರವಸೆಯನ್ನು ನೀಡಿತ್ತು. ಇದೀಗ ಮನೆಯನ್ನು ಅಡವಿಟ್ಟು ಹಣ ತಂದು ಬೈಜು ರವೀಂದ್ರನ್ ಉದ್ಯೋಗಿಗಳ ವೇತನ ಪಾವತಿ ಮಾಡಿದ್ದಾರೆ.
ಕಂಪನಿ ಸಂಸ್ಥಾಪಕ ಬೈಜು ರವೀಂದ್ರನ್ ಕಂಪನಿಯ ಕಾರ್ಯಾಚರಣೆಯನ್ನು ಮುಂದುವರಿಸಲು, ಅದರ ಆರ್ಥಿಕ ಒತ್ತಡವನ್ನು ತಗ್ಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತದ ಅತ್ಯಮೂಲ್ಯವಾದ ಟೆಕ್ ಸ್ಟಾರ್ಟ್ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಂಸ್ಥೆಯು ಅಮೆರಿಕದಲ್ಲಿನ ಮಕ್ಕಳ ಡಿಜಿಟಲ್ ಓದುವ ವೇದಿಕೆಯನ್ನು ಸುಮಾರು 400 ಮಿಲಿಯನ್ ಡಾಲರ್‌ಗೆ (ಸುಮಾರು 3,350 ಕೋಟಿ ರೂ.) ಗೆ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿದೆ. 1.2 ಬಿಲಿಯನ್ ಡಾಲರ್ ಅವಧಿ ಸಾಲದ ಬಡ್ಡಿ ಪಾವತಿಸಲು ವಿಫಲವಾದ ಹಿನ್ನಲೆಯಲ್ಲಿ ಕಂಪನಿಯು ಸಾಲಗಾರರೊಂದಿಗೆ ಕಾನೂನು ಹೋರಾಟದಲ್ಲಿ ತೊಡಗಿಸಿಕೊಂಡಿದ್ದು, ಇದು ಈ ಮಾರಾಟಕ್ಕೆ ಅಡ್ಡಿಯಾಗಿದೆ.
ಒಂದು ಕಾಲದಲ್ಲಿ ಸುಮಾರು 5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದ ಬೈಜು ರವೀಂದ್ರನ್ ಮಾತೃಸಂಸ್ಥೆಯಲ್ಲಿ ತನ್ನ ಎಲ್ಲಾ ಷೇರುಗಳನ್ನು ಅಡವಿಟ್ಟು ವೈಯಕ್ತಿಕ ಮಟ್ಟದಲ್ಲಿ ಸುಮಾರು 400 ಮಿಲಿಯನ್ ಡಾಲರ್ (3,350 ಕೋಟಿ ರೂ.) ಸಾಲವನ್ನು ಪಡೆದಿದ್ದಾರೆ. ಅಲ್ಲದೆ ಅವರು ಕಳೆದೆರಡು ವರ್ಷಗಳಲ್ಲಿ ಷೇರು ಮಾರಾಟದ ಮೂಲಕ ಸಂಗ್ರಹಿಸಿದ 800 ಮಿಲಿಯನ್ ಡಾಲರ್ (6,650 ಕೋಟಿ ರೂ.) ಹಣವನ್ನೂ ಕಂಪನಿಗೆ ಹೂಡಿಕೆ ಮಾಡಿದ್ದಾರೆ. ಇದರಿಂದ ಅವರು ಭಾರೀ ನಗದು ಕೊರತೆ ಎದುರಿಸುತ್ತಿದ್ದಾರೆ.
Byju Raveendran, the founder of edtech major Byju’s, pledged homes owned by him and his family, to raise money for paying the salaries of the employees as the company battles a cash crunch. According to a report in Bloomberg, two homes owned by Raveendran’s family in Bengaluru and his under-construction villa in Epsilon in the city were offered as collateral to borrow $12 million, and the funds were used to pay salaries to around 15,000 employees of Byju’s parent firm, Think & Learn Private Limited.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm