ಬ್ರೇಕಿಂಗ್ ನ್ಯೂಸ್
21-11-23 12:28 pm HK News Desk ದೇಶ - ವಿದೇಶ
ಅಹಮದಾಬಾದ್, ನ 21: ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಸೋಲು ಕೋಟ್ಯಂತರ ಅಭಿಮಾನಿಗಳ ಹೃದಯ ಚೂರಾಗುವಂತೆ ಮಾಡಿತ್ತು. ಆಟಗಾರರ ಹೃದಯವನ್ನು ಹಿಂಡಿತ್ತು. ತಮ್ಮ ನೋವನ್ನು ಹೇಳಿಕೊಳ್ಳಲಾಗದೆ, ಸಹಿಸಲೂ ಆಗದೆ ಆಟಗಾರರು ಡ್ರೆಸ್ಸಿಂಗ್ ಕೋಣೆಯೊಳಗೆ ತಳಮಳಿಸಿದ್ದರು.
ಸೋತ ಭಾರತ ತಂಡದ ಪರಿಸ್ಥಿತಿ ಹೇಗಿರಬಹುದು ಎಂಬ ಅರಿವಿದ್ದೇ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ಕೊಠಡಿಯನ್ನು ಪ್ರವೇಶಿಸಿ ಉದ್ವೇಗಕ್ಕೊಳಗಾಗಿದ್ದ ವೇಗಿ ಮೊಹಮ್ಮದ್ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದ್ದರು. ಅಲ್ಲದೆ ಎಲ್ಲ ಆಟಗಾರರನ್ನು ತಬ್ಬಿಕೊಂಡು ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದರ ಫೋಟೊಗಳು ಸೋಮವಾರ ವೈರಲ್ ಆಗಿತ್ತು. ಇದೀಗ ಮೋದಿ ಅವರು ಡ್ರಸ್ಸಿಂಗ್ ರೂಮ್ನಲ್ಲಿ ಆಟಗಾರರನ್ನು ಸಂತೈಸುವ ವಿಡಿಯೊವನ್ನು ಮೋದಿ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.



ವಿಶೇಷ ಆಹ್ವಾನ ;
ಪ್ರಧಾನಿ ಮೋದಿ ಅವರು ಡ್ರೆಸ್ಸಿಂಗ್ ರೋಮ್ನಲ್ಲಿ ಎಲ್ಲ ಆಟಗಾರರಿಗೂ, ಕೋಚ್ ದ್ರಾವಿಡ್ ಅವರಿಗೂ ಸಮಾಧಾನ ಮಾಡುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಗೃಹ ಸಚಿವ ಅಮಿತ್ ಶಾ ಕೂಡ ಜತೆಗಿದ್ದರು. ಎಲ್ಲ ಆಟಗಾರರನ್ನು ಕೂಡ ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂತೆ ವಿಶೇಷ ಆಹ್ವಾನ ನೀಡಿದ್ದಾರೆ.

ಮೋದಿ ಅವರು ಧೈರ್ಯ ತುಂಬಿದ ಬಳಿಕ ಟ್ವೀಟ್ ಮಾಡಿದ್ದ ಶಮಿ, ‘ತಂಡದ ಬೆಂಬಲಕ್ಕೆ ನಿಂತಿರುವ ಎಲ್ಲ ಭಾರತೀಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿ ನಮಗೆ ಸಮಾಧಾನ ಹೇಳಿದ ಪ್ರಧಾನಿ ಮೋದಿ ಎಲ್ಲರ ಉತ್ಸಾಹವನ್ನು ಬಡಿದೆಬ್ಬಿಸಿದರು. ನಾವು ಮತ್ತೆ ತಿರುಗಿ ಬೀಳುತ್ತೇವೆ” ಎಂದು ಹೇಳಿದ್ದರು.
ರವೀಂದ್ರ ಜಡೇಜಾ ಕೂಡ ಕೃತಜ್ಞತೆ ಅರ್ಪಿಸಿ, ನಮ್ಮೆಲ್ಲರ ಹೃದಯಗಳು ಒಡೆದುಹೋಗಿವೆ. ಆದರೆ ಜನರ ಬೆಂಬಲ ಮತ್ತು ಪ್ರಧಾನಿ ಮೋದಿ ಡ್ರೆಸ್ಸಿಂಗ್ ರೂಮ್ಗೆ ಆಗಮಿಸಿ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದ್ದು ಸ್ಫೂರ್ತಿದಾಯಕವಾಗಿತ್ತು ಎಂದು ಹೇಳಿಕೊಂಡಿದ್ದರು.
A great leader will find you in pieces and and lead you to peace
— Mini (@perfectminz) November 21, 2023
That’s my @narendramodi ji
#WorldcupFinal #INDvAUS #NarendraModi #ViratKohli #MohammadShami https://t.co/BpiNt8rZ91
An emotional Mohammad Shami hugged Prime Minister Modi when he met him in the dressing room. The star bowler was the highest wicket-ticket in the tournament.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm