ಬ್ರೇಕಿಂಗ್ ನ್ಯೂಸ್
21-04-22 05:24 pm HK Desk news ಕರ್ನಾಟಕ
ಬಾಗಲಕೋಟ, ಎ.21: ಸಚಿವ ಸಿಸಿ ಪಾಟೀಲರು ನನ್ನ ಬಗ್ಗೆ ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ. ಪೂರ್ವಾಶ್ರಮದ ಬಗ್ಗೆ ತನಗೆ ಗೊತ್ತಿದೆ ಅಂದಿದ್ದಾರೆ. 5ನೇ ವರ್ಷದಲ್ಲೇ ಸನ್ಯಾಸ ಸ್ವೀಕಾರ ಮಾಡಿದ್ದೇನೆ. ಪೂರ್ವಾಶ್ರಮದ ಬಗ್ಗೆ ನನಗೇ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಸಚಿವ ಸಿ.ಸಿ ಪಾಟೀಲ್ ಮಾಲೀಕರಾಗಿದ್ದರೋ, ಜೀತದಾಳು ಆಗಿದ್ದರೋ ಸಮಾಜಕ್ಕೆ ಸ್ಪಷ್ಟ ಪಡಿಸಬೇಕು ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಸ್ವಾಮೀಜಿ ಗರಂ ಆಗಿದ್ದಾರೆ.
ಮೂರು ಸಾವಿರ ಮಠದ ವಿಷಯ ಪ್ರಸ್ತಾಪ ಮಾಡಿದ್ದೀರಿ. ಮೂರು ಸಾವಿರ ಮಠದ ಪೀಠಕ್ಕಾಗಿ ರೌಡಿಸಂ ಮಾಡಿದ್ದೇನೆ ಎಂದಿದ್ದಾರೆ. ರೌಡಿಸಂ ಏನ್ ಮಾಡಿದ್ದೇನೆ, ಸಚಿವ ಸಿ ಸಿ ಪಾಟೀಲ್ ತೋರಿಸಬೇಕು. ಸಚಿವ ಸಿಸಿ ಪಾಟೀಲ್ ನನ್ನ ಮೇಲೆ ಮಾಡಿರೋ ಆರೋಪ ಸಾಬೀತು ಮಾಡಿದ್ರೆ ತಕ್ಷಣ ಎಲ್ಲ ಮಠಗಳ ಪೀಠ ತ್ಯಾಗ ಮಾಡ್ತೀನಿ. ಈ ಬಗ್ಗೆ ರಾಜ್ಯದ ಜನ್ರಿಗೆ ಸಚಿವ ಸಿ ಸಿ ಪಾಟೀಲ್ ಏಪ್ರಿಲ್ 27ರೊಳಗೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಏ.27 ರಂದು ಸಚಿವ ಸಿ ಸಿ ಪಾಟೀಲ್ ಮನೆ ಎದುರು ಸತ್ಯಾಗ್ರಹ ನಡೆಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ಇಲ್ಲದಿದ್ದರೆ ಸಚಿವರ ನರಗುಂದ ಪಟ್ಟಣದ ಮನೆ ಎದುರು ಸತ್ಯಾಗ್ರಹ ನಡೆಸುತ್ತೇವೆ. ನಮ್ಮನ್ನು ಪೂಜ್ಯರು ಅಂತ ಕರೆಯುವರು ಭಕ್ತರು. ಇವರೆಲ್ಲ ಅನಾಗರಿಕತೆ ಉಳ್ಳವರು ಅಲ್ಲ ಎಂದು ಸಿ ಸಿ ಪಾಟೀಲ್ ಗೆ ತಿರುಗೇಟು ನೀಡಿದರು. ನಿಮ್ಮ ಮಕ್ಕಳ ಮದುವೆಗೆ ಕರೆದು ಆಶೀರ್ವಾದ ಮಾಡಿಸಿದಾಗ, ನಮ್ಮ ಪೂರ್ವಾಶ್ರಮದ ಮಾಹಿತಿ, ರೌಡಿಸಂ ನಿಮಗೆ ಗೊತ್ತಿರಲಿಲ್ಲವೇ ಸಿ ಸಿ ಪಾಟೀಲರೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಠದ ಪರಂಪರೆಗೆ ಧಕ್ಕೆ ತರುವ ಕೆಲಸ ಮಾಡಿದ್ರೆ ಸಹಿಸಿಕೊಂಡು ಸುಮ್ಮನಿರಲ್ಲ. ಸ್ವಾಮಿಗಳು ಜಾಮೀನು ಮೇಲೆ ಇದ್ದಾರೆ ಎಂದಿದ್ದೀರಿ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದಾಗ ಈ ರೀತಿ ಮಾಡೋದು ಸರೀನಾ. ನನ್ನ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ದೀರಿ. ನಿಮ್ಮ ನೈತಿಕತೆಯ ಬಗ್ಗೆ ನನಗೆ ಬಹಳಷ್ಟು ಆಶ್ಚರ್ಯ ಆಗ್ತಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆದಾಗ ನೀವು ಮೊಬೈಲ್ ನಲ್ಲಿ ಏನ್ ನೋಡಿದ್ರಿ ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಯಾವ ನೈತಿಕೆಯ ಹಿನ್ನೆಲೆಯಲ್ಲಿ ನೀವು ರಾಜೀನಾಮೆ ಕೊಟ್ರಿ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಸಿಸಿ ಪಾಟೀಲ್ ಅಧಿವೇಶನದಲ್ಲಿ ಬ್ಲ್ಯೂ ಫಿಲ್ಮ್ ನೋಡಿದ್ದನ್ನು ಪ್ರಸ್ತಾಪಿಸದೆ ಸ್ವಾಮೀಜಿ ಕುಟುಕಿದರು.
ಕಮಿಷನ್ ಬಗ್ಗೆ ಮಾತಾಡಿದ್ದಕ್ಕೆ ಪೊಲೀಸರನ್ನು ಛೂಬಿಟ್ಟಿದ್ದೀರಿ..!
ಸರ್ಕಾರದ ಕಮಿಷನ್ ಬಗ್ಗೆ ಮಾತನಾಡಿದಕ್ಕೆ ಸರಕಾರ ನನ್ನ ಮೇಲೆ ಪೊಲೀಸರನ್ನ ಛೂಬಿಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ಶ್ರೀಗಳು, ಪೊಲೀಸರ ಮೂಲಕ ನನ್ನ ಮೇಲೆ ಇರೋ ಕೇಸ್ ಬಗ್ಗೆ ಮಾಹಿತಿ ಕಲೆ ಹಾಕ್ತಾಯಿದ್ದಾರೆ. ಪದೇ ಪದೇ ಬಾಲೆಹೊಸೂರ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಭಕ್ತರಿಗೆ ಕಾಟ ಕೊಡುತ್ತಿದ್ದಾರೆ. ಪೊಲೀಸ್ ಇಲಾಖೆ ಯಾವುದಕ್ಕೆ ಬಳಸಿಕೊಳ್ಳುತ್ತಿದ್ದೀರಿ. ನನ್ನ ಹೆದರಿಸುವ ತಂತ್ರ ಮಾಡ್ತಾಯಿದ್ದೀರಿ. ಹೆದರುವ ಸ್ವಾಮಿ ನಾನಲ್ಲ. ನಾನು ಯಾವ ಕೇಸ್ ಮೇಲೆ ಜಾಮೀನಿನ ಮೇಲಿದ್ದೇನೆಂಬುದು ಜನಕ್ಕೆ ಗೊತ್ತು. ನಿಮ್ಮಂತ ಜನಪ್ರತಿನಿಧಿಗಳು ಕುತಂತ್ರದಿಂದ ನನ್ನನ್ನ ಕೇಸ್ ನಲ್ಲಿ ಸಿಲುಕಿಸುವ ಕೆಲಸ ಮಾಡಿದ್ದೀರಿ. ಭ್ರಷ್ಟಾಚಾರ ನಿಲ್ಲಬೇಕು ಅಂತ ಮಾತನಾಡಿದ್ದಕ್ಕೆ ನನ್ನ ವೈಯಕ್ತಿಕ ವಿಚಾರಗಳಿಗೆ ನೀವು ಕೈಹಾಕಿದ್ದೀರಿ. ನಿಮ್ಮ ಅಧಿಕಾರ ಬಳಸಿಕೊಂಡು ಹುಚ್ಚು ಸಾಹಸ ಮಾಡಿ ನನ್ನ ಎದುರಿಸುತ್ತೀರೆಂದರೆ, ಅದನ್ನ ನಾನು ಸ್ವಾಗತಿಸುತ್ತೇನೆಂದು ಸವಾಲು ಹಾಕಿದರು.
Speaking at a press conference at the Balehosura Math, Dingaleswara Sreesanth said , "The award we have given to Tondadarya Lingayak Siddhalinga Sri Sri has not been opposed. Audrey said in her name, there should be no celebration of Vedic day. That should be understood by Minister Sisi Patil. CC Patil's claim that Dingaleswara is not tolerated is not correct.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm