ಬ್ರೇಕಿಂಗ್ ನ್ಯೂಸ್
31-03-22 09:15 pm HK Desk news ಕರ್ನಾಟಕ
ಕಾರವಾರ, ಮಾ.31 : ಇಸ್ಲಾಂ ಈ ಜಗತ್ತಿಗೆ ಅಂಟಿದ ಅತೀ ದೊಡ್ಡ ಶಾಪ. ಮನುಷ್ಯನ ಊಹೆಗೂ ನಿಲುಕದ ಬರ್ಬರತೆ, ಹಿಂಸೆ, ಕ್ರೌರ್ಯ, ಭಯೋತ್ಪಾದನೆಯೇ ಅವರ ಘನ ಇತಿಹಾಸ ಎಂದು ಉತ್ತರ ಕನ್ನಡ ಲೋಕಸಭಾ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ.
ಇಸ್ಲಾಂನ ಅತ್ಯಂತ ಅಸಹಿಷ್ಣುತೆ, ಮತೀಯತೆ ಖಂಡಿಸಿ ಮುಸ್ಲಿಮರ ನಿಯೋಗವನ್ನು ವಾಪಸ್ ಕಳುಹಿಸಿದ ಪೇಜಾವರ ಶ್ರೀಗಳಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು ಹಾಗೂ ಧನ್ಯವಾದಗಳು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇಂದಿನ ವಿಶ್ವದ ಶಾಂತಿಗೆ ಅಪಾಯ ಶಿಕ್ಷಣದ ಕೊರತೆಯಲ್ಲ, ನಿರುದ್ಯೋಗವೂ ಅಲ್ಲ, ಬಡತನವಂತೂ ಅಲ್ಲವೇ ಅಲ್ಲ. ಇಡೀ ಜಗತ್ತಿನ ಅಪಾಯ, ಇಸ್ಲಾಂನ ಪೈಶಾಚಿಕತೆ! ಆದರೆ ಎಡಬಿಡಂಗಿಗಳಿಗೆ ಮಾತ್ರ ಹಾಗೆನಿಸುವುದೇ ಇಲ್ಲ. ಅದನ್ನು ಅವರ ನಿರ್ವೀರ್ಯತೆ ಅಂತ ಕರೆಯಬೇಕೊ? ಹೇಡಿತನ ಅಂತ ಕರೆಯಬೇಕೊ? ಅಥವಾ ಅವರಿಗೆ ಬಡಿದ ಮಹಾ ಮೂರ್ಖತನದ ರೋಗ ಅಂತ ಹೇಳಬೇಕೊ? ಗೊತ್ತಿಲ್ಲ ಎಂದಿದ್ದಾರೆ.
ಸಂಸ್ಕೃತಿಯ ಅರಿವೇ ಇಲ್ಲದ ಸೋಗಲಾಡಿ ಶಿಕ್ಷಣದ ಪರಿಣಾಮವೋ ಏನೋ ಗೊತ್ತಿಲ್ಲ. ಅವರು ಯಾರೂ ಸಹ ಇಸ್ಲಾಂನ ಹೇಯ ಕೃತ್ಯಗಳನ್ನ ಖಂಡಿಸುವುದು ಹಾಗಿರಲಿ, ಅದರ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಅಂಥವರೂ ಯಾರೇ ಇರಲಿ ಅವರಿಗೆ ನನ್ನ ಧಿಕ್ಕಾರವಿರಲಿ. ಇವುಗಳ ಮಧ್ಯದಲ್ಲಿ ಅದೇನೋ ಒಂದು ಆತ್ಮಾಭಿಮಾನದ ಕೋಲ್ಮಿಂಚು ಪೇಜಾವರ ಶ್ರೀಗಳ ನುಡಿ ಹಾಗೂ ನಡೆ. ಅದಕ್ಕಾಗಿಯೇ ಪರಮಪೂಜ್ಯರು ನಮಗೆ ಆದರ್ಶರಾಗಿ ನಿಲ್ಲುತ್ತಾರೆ. ಹಿಂದೂ ಸಮಾಜದ ಧ್ವನಿಯಾಗಿ ನಿಂತು, ಇಸ್ಲಾಂನ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಯಾವ ಮುಲಾಜೂ ಇಲ್ಲದೆ ಸತ್ಯವನ್ನು ಚಾಟಿಯಿಂದ ಹೊಡೆದ ಹಾಗೆ ಹೇಳಿದ್ದಾರೆ ಎಂದಿದ್ದಾರೆ.
ಇತ್ತೀಚೆಗೆ ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಹೋಗಿದ್ದ ಮುಸ್ಲಿಂ ನಿಯೋಗದ ಸದಸ್ಯರು ಹಿಂದೂ- ಮುಸ್ಲಿಂ ಸಮುದಾಯದ ನಡುವೆ ಉಂಟಾಗಿರುವ ಕಂದಕದ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದು ಶ್ರೀಗಳು ಮುಸ್ಲಿಂ ನಿಯೋಗದ ಸದಸ್ಯರಲ್ಲಿ ಆ ಬಗ್ಗೆ ಮನವರಿಕೆ ಮಾಡಿದ್ದಾರೆ. ಮುಸ್ಲಿಂ ಸಮುದಾಯ, ಹಿಂದೆ ಅವರಿಂದಾದ ಆ ಎಲ್ಲಾ ಹಿಂಸಾಚಾರ, ದೇವಾಲಯಗಳ ಲೂಟಿ, ಹಿಂದೂ ಹೆಂಗಸರ, ಮಕ್ಕಳ ಮೇಲೆ ಎಸಗಿದ ದೌರ್ಜನ್ಯಗಳ ಆತ್ಮಾವಲೋಕನ, ಪರಾಮರ್ಶೆ ಆಗಬೇಕು ಎಂದು ಹೇಳಿದ್ದಾರೆ.
ಈಗ ಉಂಟಾದ ಸಮಸ್ಯೆ ನೂರಾರು ವರ್ಷಗಳ ದೌರ್ಜನ್ಯದ ಪ್ರತಿಫಲ, ಇದಕ್ಕೆ ಮೂಲ ಕಾರಣ ಯಾರು? ಎಂದು ಶ್ರೀಗಳು ಮುಸ್ಲಿಮರಿಗೆ ಪ್ರಶ್ನೆ ಮಾಡಿದ್ದಾರೆ. ಇಂದಿಗೂ ಸಹ ಗೋಹತ್ಯೆ, ಗೋ ಸಾಗಾಣಿಕೆ ನಿಂತಿಲ್ಲ, ಮೇಲಿಂದ ಮೇಲೆ ಹಿಂದೂಗಳ ಭಾವನೆಗಳನ್ನು ಘಾಸಿ ಮಾಡಲಾಗುತ್ತಿದೆ, ಇದರಿಂದ ಇಡೀ ಹಿಂದೂ ಸಮಾಜ ನೊಂದಿದೆ. ಈಗ ಬಂದು ಸಮಸ್ಯೆ ಬಗೆಹರಿಸಿ ಎಂದರೆ ಅದು ಕೇವಲ ನನ್ನಿಂದ ಮಾತ್ರ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮೊದಲು ಇಸ್ಲಾಂ ಸಮಾಜ ಅದು ಮಾಡಿದ ತಪ್ಪನ್ನು ಒಪ್ಪಿ, ಆತ್ಮವಿಮರ್ಶೆ ಮಾಡಿಕೊಳ್ಳಲಿ, ನಂತರ ನೀವು ಮಾತುಕತೆಗೆ ಬನ್ನಿ ಎಂದು ಖಚಿತವಾಗಿ ತಿಳಿಸಿ ಮುಸ್ಲಿಂ ನಿಯೋಗವನ್ನು ವಾಪಸ್ ಕಳಿಸಿದ್ದಾರೆ ಎಂದಿದ್ದಾರೆ.
ಶ್ರೀಗಳ ಈ ದಿಟ್ಟ ನಡೆಯೇ ಹಿಂದೂ ಹೃದಯಗಳಿಗೆ ಮತ್ತಷ್ಟು ಮನೋಬಲವನ್ನು ನೀಡಿದೆ, ಶ್ರೀಗಳ ಬಗ್ಗೆ ಇರುವ ಗೌರವ ನೂರ್ಮಡಿಯಾಗಿದೆ. ಹಿರಿಯ ಶ್ರೀಗಳು ಕೊಟ್ಟ 'ಮಮದೀಕ್ಷಾ ಹಿಂದುರಕ್ಷಾ' ಕರೆ ಮತ್ತೊಮ್ಮೆ ಮಾರ್ದನಿಗೊಂಡಿದೆ. ಸಂನ್ಯಾಸದ ನಿಜವಾದ ಅಂತರ್ಧ್ವನಿಗೆ ಮತ್ತೊಮ್ಮೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಕೃಷ್ಣಭೂಮಿಯಲ್ಲಿ ಮೊಳಗಿದ ಪಾಂಚಚನ್ಯ ನಾಡಿನೆಲ್ಲಡೆ ಪ್ರತಿಧ್ವನಿಗೊಳ್ಳಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಶಿರಸಿಯಲ್ಲಿ 2016ರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅನಂತಕುಮಾರ ಹೆಗಡೆಯವರು, ಇದೇ ರೀತಿಯ ಹೇಳಿಕೆ ನೀಡಿದ್ದರು. ಎಲ್ಲಿಯವರೆಗೆ ಜಗತ್ತಿನಲ್ಲಿ ಇಸ್ಲಾಂ ಇರುತ್ತದೆಯೋ, ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿ, 2020ರಲ್ಲಿ ಈ ಆರೋಪಗಳಿಂದ ಖುಲಾಸೆಗೊಂಡಿದ್ದರು. ಇದೀಗ ಅದೇ ಮಾದರಿಯಲ್ಲಿ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
Islam is the biggest curse to this world. Ananthakumara Hegde of the Lok Sabha MP has reiterated that man's unrelenting history of violence, violence, cruelty and terrorism is their solid history.On my Facebook account wallpaper, my headmaster greeted and thanked the Muslim delegation who had returned to the delegation of Muslims condemning Islam's intolerance.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 10:54 pm
Mangalore Correspondent
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
Mangalore Police, Drugs, Sudheer Kumar Reddy:...
03-07-25 10:50 pm
04-07-25 08:56 pm
Bangalore Correspondent
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm