ಬ್ರೇಕಿಂಗ್ ನ್ಯೂಸ್
21-02-22 03:36 pm HK News Desk ಕರ್ನಾಟಕ
ಬೆಂಗಳೂರು, ಫೆ.21: ನಮ್ಮದೇ ಸರಕಾರ ಇದ್ದಾಗಲೇ ಈ ರೀತಿ ಕೊಲೆಯಾಗ್ತಿದೆ ಅಂದ್ರೆ ನಮಗೆ ಅದನ್ನು ಹೇಳಿಕೊಳ್ಳಲು ನಾಚಿಕೆಯಾಗ್ತಿದೆ. ಕಳೆದ ಬಾರಿ 15ಕ್ಕೂ ಹೆಚ್ಚು ಕೊಲೆಗಳು ನಡೆದಿದ್ದವು. ಪಿಎಫ್ಐ, ಎಸ್ಡಿಪಿಐಗಳೇ ಇದರ ಹಿಂದಿವೆ ಎಂದು ಹೇಳಿದ್ದರೂ, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನಾದ್ರೂ ಎಚ್ಚತ್ತುಕೊಳ್ಳಿ, ಈ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಸಂಸದ ಪ್ರತಾಪಸಿಂಹ ಹರಿಹಾಯ್ದಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ ಬಂಟ್ವಾಳದಲ್ಲಿ ಶರತ್ ಮಡಿವಾಳ, ಸುರತ್ಕಲ್ ನಲ್ಲಿ ದೀಪಕ್ ರಾವ್ ನಿಂದ ತೊಡಗಿ ಬೆಂಗಳೂರು, ಮಡಿಕೇರಿ, ಉತ್ತರ ಕನ್ನಡದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ಹತ್ಯೆ ನಡೆದಿತ್ತು. ಇದರಿಂದಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿ, ಜನರು ನಮಗೆ ಓಟು ಕೊಡುವಂತೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ನಮ್ಮ ನಾಯಕರು, ಕಾರ್ಯಕರ್ತರು ಎಸ್ಡಿಪಿಐ, ಪಿಎಫ್ಐ ಬ್ಯಾನ್ ಮಾಡಿ ಎಂದು ಘೋಷಣೆ ಕೂಗುತ್ತಾ ಸಾಗಿದ್ದರು. ಆದರೆ ಆ ಕೆಲಸವನ್ನು ನಮ್ಮ ಸರಕಾರ ಬಂದು ಮೂರು ವರ್ಷ ಆದ್ರೂ ಮಾಡಿಲ್ಲ. ಈಗ ಮತ್ತೆ ನಮ್ಮ ನಾಯಕರು ಕಠಿಣ ಕ್ರಮದ ಮಾತನಾಡುತ್ತಿದ್ದಾರೆ. ನಾಚಿಕೆಯಾಗಬೇಕು, ನನಗೂ ಹೇಳುವುದಕ್ಕೆ ನಾಚಿಕೆ ಆಗುತ್ತಿದೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಾಟೆ ಸಂದರ್ಭದಲ್ಲಿ ಸಾಮಾನ್ಯ ಜನರು, ಪೊಲೀಸರ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದರು. ಆಗಲೂ ಪಿಎಫ್ಐ ಕೈವಾಡ ಕೇಳಿಬಂದಿತ್ತು. ಪೂರಕ ಸಾಕ್ಷ್ಯಗಳು ಸಿಕ್ಕಿದ್ದವು. ಆನಂತರ ಮಂಗಳೂರಿನಲ್ಲಿ ಸಿಎಎ ನೆಪದಲ್ಲಿ ಗಲಾಟೆ ನಡೆದು ಹಿಂಸಾಚಾರ ಆಗಿತ್ತು. ಷಡ್ಯಂತ್ರ ನಡೆಸಿದ್ದು, ಹಿಂಸಾಚಾರ ನಡೆಸಿದ್ದು, ಪೊಲೀಸರ ಮೇಲೆ ಕಲ್ಲು ತೂರಿದ್ದು ಆಗಲೂ ಸಾಬೀತಾಗಿತ್ತು. ಬಸವರಾಜ ಬೊಮ್ಮಾಯಿ ಅವರೇ ಆಗ ಗೃಹ ಸಚಿವರಾಗಿದ್ದರು. ಈಗ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ಈ ಬಗ್ಗೆ ಆಗ್ರಹ ಮತ್ತು ಮನವಿಯನ್ನು ಮಾಡುತ್ತೇನೆ. ನಮ್ಮದೇ ಕಾರ್ಯಕರ್ತರನ್ನು ಕಳಕೊಳ್ಳುತ್ತಿದ್ದೇವೆ. ಇಂಥ ಗೂಂಡಾ ಪ್ರವೃತ್ತಿಯ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಕೂಡಲೇ ನಿಷೇಧಿಸಿ ಎಂದು ಆಗ್ರಹ ಮಾಡಿದ್ದಾರೆ.
Mysuru MP Pratap Simha slams government over murder of bajrang dal member in Shivamogga. Vehicles were set on fire and isolated incidents of stone-pelting were reported as tension spread in Karnataka's Shivamogga town over the murder of a member of right-wing outfit Bajrang Dal.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am