ಬ್ರೇಕಿಂಗ್ ನ್ಯೂಸ್
31-01-22 10:49 am HK Desk news ಕರ್ನಾಟಕ
ಹುಬ್ಬಳ್ಳಿ, ಜ.31 : ಕಾಂಗ್ರೆಸ್ ಪಕ್ಷದಿಂದ ಸಿಡಿದು ನಿಂತಿರುವ ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಜೆಡಿಎಸ್ ಅಥವಾ ಉತ್ತರ ಭಾರತ ಮೂಲದ ಪಕ್ಷವನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರುವ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಆಪ್ತರು, ಹಿರಿಯ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಸಿರುವ ಇಬ್ರಾಹಿಂ, ತನ್ನ ಬಹುಕಾಲದ ಆಪ್ತ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ತೊಡೆ ತಟ್ಟಿದ್ದಾರೆ.
ಭಾನುವಾರ ರಾತ್ರಿ ಉತ್ತರ ಕರ್ನಾಟಕ ಭಾಗದ ಪ್ರಬಲ ಲಿಂಗಾಯತ ಮುಖಂಡ, ಹಿರಿಯ ಕಾಂಗ್ರೆಸಿಗ ಎಸ್.ಆರ್ ಪಾಟೀಲ್ ಸೇರಿ ಹಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಇಬ್ರಾಹಿಂ, ಬಳಿಕ ಮೀಟಿಂಗ್ ಸಕ್ಸಸ್ ಫುಲ್ ಅನ್ನುವ ಸಿಗ್ನಲ್ ನೀಡಿದ್ದಾರೆ. ನನ್ನ ಜೊತೆಗೆ ಬಹಳಷ್ಟು ದೊಡ್ಡವರ ಬೆಂಬಲ ಇದೆ. ಈಗ ಯಾರೆಂದು ಹೆಸರು ಹೇಳಲ್ಲ. ವಿಜಯಪುರದಿಂದಲೇ ಚಳವಳಿ ಆರಂಭಿಸುತ್ತೇನೆ ಎಂದಿದ್ದಾರೆ.
ಅಲ್ಪಸಂಖ್ಯಾತ ಮತ್ತು ಲಿಂಗಾಯತರನ್ನು ಒಟ್ಟು ಸೇರಿಸಿ ಉತ್ತರ ಕರ್ನಾಟಕದಲ್ಲಿ ಅಲಿಂಗ ಚಳವಳಿ ಮಾಡುತ್ತೇನೆ. ಎಸ್.ಆರ್ ಪಾಟೀಲ ಚಳವಳಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಬಿಟ್ಟು ಬರುತ್ತಾರಾ ಕಾದು ನೋಡಿ ಎನ್ನುವ ಮೂಲಕ ಸಿಎಂ ಇಬ್ರಾಹಿಂ ಕುತೂಹಲ ಹುಟ್ಟಿಸಿದ್ದಾರೆ. ಅವರು ಪಕ್ಷದಲ್ಲಿ ಇರಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಒಂದು ಸಲ ಡ್ಯಾಂ ಒಡೆದು ನೀರು ಹರಿದು ಹೋದ್ರೆ ಮುಗೀತು. ಅದು ಮುಗಿದ ಅಧ್ಯಾಯ. ಮತ್ತೆ ಪಕ್ಷದ ಮುಖ ನೋಡಲ್ಲ.. ಐದಾರು ದಿನಗಳಲ್ಲಿ ಕೊಪ್ಪಳ, ಕಲಬುರಗಿ, ಬಳ್ಳಾರಿ, ರಾಯಚೂರು, ಬೆಳಗಾವಿ ಪ್ರವಾಸ ಮಾಡುತ್ತೇನೆ. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಬೆಂಬಲ ಸಿಗುತ್ತಿದೆ. ನನಗೆ ಜೆಡಿಎಸ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವರ ಮೇಲೆ ಒಲವಿದೆ. ಶೀಘ್ರದಲ್ಲೇ ಯಾವ ಪಕ್ಷಕ್ಕೆ ಹೋಗುತ್ತೇನೆಂದು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಸ್ಪರ್ಧಿಸಲಿ, ಯಾರು ಗೆಲ್ತಾರೆ ನೋಡೋಣ !
ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಇಬ್ರಾಹಿಂ, ನನ್ನನ್ನ ನೀವು ಬೆಳೆಸಿದ್ದಿರಿ. ಇನ್ಮೇಲು ನೀವೇ ಕೈ ಹಿಡಿಯಬೇಕು ಎಂದು ಭಾವುಕರಾಗಿ ಕಣ್ಣೀರು ಹಾಕಿದರು. ಪಕ್ಷದಿಂದ ಹೊರ ಬಂದಿದ್ದೇನೆ. ವಾಪಸ್ ಹೋಗೋ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ. ನನ್ನ ಶಾಪ ಭಾರೀ ಕೆಟ್ಟದ್ದು, ಇವಾಗ ತಟ್ತಿದೆ. ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ಆ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎದುರೆದುರು ಸ್ಪರ್ಧೆ ಮಾಡಲಿ. ಯಾರು ಗೆಲ್ತಾರೆ ನೋಡೋಣ ಎಂದು ಸವಾಲು ಹಾಕಿದರು.
ಡಿಕೆಶಿ ಬಹಳ ದೊಡ್ಡವರು. ನಮ್ಮಂತವರನ್ನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡ್ತೀನಿ ಅಂದ್ರು. ಆದ್ರೆ ಏನೂ ಆಗಿಲ್ಲ. ನಮ್ಮ ಜೊತೆ ಯಾರು ಬರ್ತಾರೋ, ಅವರನ್ನೆಲ್ಲ ಕರೆದುಕೊಂಡು ಹೋಗ್ತೇನೆ. ಇಲ್ಲಿ ಅಲಿಂಗ ಮಾಡ್ತೇನೆ(ಅಲ್ಪ ಸಂಖ್ಯಾತ-ಲಿಂಗಾಯತರು). ದಕ್ಷಿಣ ಕರ್ನಾಟಕದಲ್ಲಿ ಅಗೌ (ಗೌಡ-ಅಲ್ಪಸಂಖ್ಯಾತರು) ಮಾಡ್ತೇನೆ. ಸಿದ್ದರಾಮಯ್ಯ ಅಹಿಂದ ಮಾಡಿದ್ದಾರಲ್ಲಾ ಎಂದು ಸಿದ್ದುಗೆ ಠಕ್ಕರ್ ಕೊಡುವ ಸುಳಿವನ್ನು ಸಿಎಂ ಇಬ್ರಾಹಿಂ ನೀಡಿದ್ದರು.
Days after quitting Karnataka Congress, ex-Union Minister C.M Ibrahim said that he may either join JD(S), TMC, or Samajwadi Party. Speaking to ANI on Monday, he said that he had been contacted all three parties and that many people will leave Congress before elections in Karnataka. Ibrahim had quit the Congress after expressing his outrage with the functioning of the party under Rahul Gandhi and its lack of democracy.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am