ಬ್ರೇಕಿಂಗ್ ನ್ಯೂಸ್
12-01-22 12:54 pm HK Desk news ಕರ್ನಾಟಕ
ರಾಮನಗರ, ಜ.12 : ಮೇಕೆದಾಟು ಯೋಜನೆ ಆಗ್ರಹಿಸಿ ಮೂರನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 64 ಮಂದಿ ಕಾಂಗ್ರೆಸ್ ನಾಯಕರ ವಿರುದ್ಧ ಕನಕಪುರ ತಹಸೀಲ್ದಾರ್ ದೂರಿನಂತೆ ಕೇಸು ದಾಖಲಾಗಿದೆ.
ಮೊದಲ ಎರಡು ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ 30ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಮೂರನೇ ದಿನ ಮಂಗಳವಾರ ಬೆಳಗ್ಗೆ 11ರಿಂದ ಕನಕಪುರ ನಗರದ ಚನ್ನಬಸಪ್ಪ ವೃತ್ತದಿಂದ ಕನಕಪುರ ಕಸಬಾ ಹೋಬಳಿ, ಚಕ್ಕೇನಹಳ್ಳಿ ಗ್ರಾಮದ ವರೆಗೆ ರಾತ್ರಿ 9ರ ವರೆಗೆ ಜನರು ಗುಂಪುಕೂಡಿ ಕೋವಿಡ್ ಮಾರ್ಗಸೂಚಿ ಪಾಲಿಸದೇ ಸರಕಾರದ ನಿಮಯ ಉಲ್ಲಂಘಿಸಿದ್ದಾರೆ. ಸಾಮಾಜಿಕ ಅಂತರ ಪಾಲಿಸದೇ ಸಾರ್ವಜನಿಕರ ಆರೋಗ್ಯ, ಜೀವಕ್ಕೆ ಅಪಾಯವಾಗುವ ರೀತಿ ನಡೆದುಕೊಂಡಿದ್ದಾರೆ ಎಂದು ಕನಕಪುರ ತಹಸೀಲ್ದಾರ್ ವಿಶ್ವನಾಥ್, ಕನಕಪುರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅದರಂತೆ, ಐಪಿಸಿ ಕಲಂ 141, 143, 290, 336, 149 ಅಡಿ ಪ್ರಕರಣ ದಾಖಲಾಗಿದೆ. ಡಿಕೆ ಶಿವಕುಮಾರ್, ಡಿಕೆ ಸುರೇಶ್, ಸಿದ್ದರಾಮಯ್ಯ, ರವಿ ಎಸ್., ಧ್ರುವನಾರಾಯಣ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾಧು, ಮಂಜುನಾಥ ಹುಣಸೂರು, ಸಲೀಂ ಅಹ್ಮದ್, ಡಾ.ಎಚ್.ಸಿ.ಮಹದೇವಪ್ಪ, ಲಕ್ಷ್ಮೀನಾರಾಯಣ, ಯತೀಂದ್ರ ಸಿದ್ದರಾಮಯ್ಯ, ನಲಪಾಡ್ ಹ್ಯಾರಿಸ್, ಕೋನಪ್ಪ ರೆಡ್ಡಿ, ಎಚ್.ಡಿ.ರಂಗನಾಥ್, ಬಿ.ಕೆ.ಸೋಮಶೇಖರ್, ಮುಖ್ಯಮಂತ್ರಿ ಚಂದ್ರು, ಅಂಜನ್ ಮೂರ್ತಿ, ಕೆ.ಬಿ.ಕೋಳಿವಾಡ, ಐವಾನ್ ಡಿಸೋಜ, ವಿನಯ ಕುಲಕರ್ಣಿ ಸೇರಿದಂತೆ 64 ಮಂದಿ ಕಾಂಗ್ರೆಸ್ ನಾಯಕರ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ವಿರುದ್ಧ ಪ್ರಕರಣ ದಾಖಲಾಗಿದೆ.
Bengaluru, As the Karnataka Congress continued its ‘padayatra’ (march) demanding implementation of the Mekedatu project across the Cauvery river, for the third consecutive day on Tuesday, police registered second FIR against state party chief DK Shivakumar and several other leaders for violating Covid-19 curbs.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am