ಬ್ರೇಕಿಂಗ್ ನ್ಯೂಸ್
08-01-22 08:42 pm HK Desk news ಕರ್ನಾಟಕ
ರಾಮನಗರ, ಜ.8 : ಸರಕಾರ ನಮ್ಮನ್ನು ಜೈಲಿಗೆ ಹಾಕಿದರೂ ಮೇಕೆದಾಟು ವಿಚಾರದಲ್ಲಿ ಹಮ್ಮಿಕೊಂಡ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗಿದ್ದಾರೆ.
ಕನಕಪುರದ ಡಿಕೆ ಶಿವಕುಮಾರ್ ಮನೆಯಲ್ಲಿ ಶಾಸಕಾಂಗ ಸಭೆ ನಡೆಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮುಂಚೂಣಿ ನಾಯಕರು ಪಾಲ್ಗೊಂಡಿದ್ದಾರೆ. ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಯಾವುದೇ ಕಾರಣಕ್ಕೂ ಪಾದಯಾತ್ರೆ ಹಿಂಪಡೆಯುವುದಿಲ್ಲ. ಸರಕಾರ ಈಗಾಗಲೇ ನಮಗೆ ನೋಟೀಸ್ ನೀಡಿದೆ. ಜಿಲ್ಲೆಯ ಅಧಿಕಾರಿಗಳು ಸರಕಾರದ ಅಣತಿಯಂತೆ ನಡೆಯುತ್ತಿದ್ದಾರೆ. ನನ್ನನ್ನು ಬಂಧಿಸಿ, ಶರ್ಟ್ ಪ್ಯಾಂಟ್ ಬಿಚ್ಚಿಸಿ ಜೈಲಿಗೆ ಹಾಕಿದರೂ ಪರವಾಗಿಲ್ಲ. ನಾವು ಪಾದಯಾತ್ರೆ ಮಾಡೇ ಮಾಡುತ್ತೀವಿ ಎಂದು ಹೇಳಿದ್ದಾರೆ. ಕೋವಿಡ್ ಇದೆಯೆಂದು ಕರ್ಫ್ಯೂ ಹಾಕಿದ್ದಾರೆ. ಕೊರೊನಾದಿಂದಾಗಿ ರಾಜ್ಯದ ಎಲ್ಲೇ ಆಗಲಿ, ಯಾರಾದ್ರೂ ಐಸಿಯುನಲ್ಲಿ ಮಲಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದರು.
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸರಕಾರದವರು ರಾಮನಗರ ವ್ಯಾಪ್ತಿಗೆ ನಿಷೇಧಾಜ್ಞೆ ಹಾಕಿದ್ದಾರೆ. ನಮ್ಮ ಪಾದಯಾತ್ರೆಯನ್ನು ಹತ್ತಿಕ್ಕಬೇಕು ಎನ್ನುವ ಉದ್ದೇಶದಿಂದಲೇ ಈ ರೀತಿ ವರ್ತಿಸಿದ್ದಾರೆ. ಗುಂಪಾಗಿ ಪಾದಯಾತ್ರೆ ಮಾಡಬಾರದು ಅಂದರೆ ನಾವು ನಾಲ್ಕು ನಾಲ್ಕು ಜನರಷ್ಟೇ ಹೋಗುತ್ತೇವೆ. ನಾವು ನಡೆದುಕೊಂಡು ಹೋಗಬಾರದು ಅಂದ್ರೆ ಅದನ್ನು ಒಪ್ಪುವುದು ಹೇಗೆ.. ಕಾವೇರಿ ನೀರು ನಮ್ಮ ಹಕ್ಕು. ಅದನ್ನು ಈಡೇರಿಸಿಕೊಳ್ಳಲು ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ರಾಮನಗರ ಎಸ್ಪಿ ಗಿರೀಶ್, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜೊತೆಗೆ ರಹಸ್ಯವಾಗಿ ಮಾತುಕತೆ ನಡೆಸಿದರು. ಇದರ ಬಳಿಕ ಮಾತನಾಡಿದ ಎಸ್ಪಿ ಗಿರೀಶ್, ತಾಲೂಕು ಆಡಳಿತ ಈಗಾಗಲೇ ನೋಟೀಸನ್ನು ನೀಡಿದೆ. ಪಾದಯಾತ್ರೆ ಮಾಡಬಾರದು ಎಂದು ಮನವಿ ಮಾಡಿದ್ದೇವೆ. ಸರಕಾರದ ಸೂಚನೆ ಪಾಲಿಸದೇ ಇದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮೇಕೆದಾಟು ಅಣೆಕಟ್ಟು ಯೋಜನೆ ಆರಂಭಿಸಬೇಕೆಂದು ಜನವರಿ 9ರಿಂದ ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ಡಿಸೆಂಬರ್ ಕೊನೆಯಲ್ಲಿ ಘೋಷಣೆ ಮಾಡಿತ್ತು. ಆದರೆ ರಾಜ್ಯ ಸರಕಾರ ಕೋವಿಡ್ ನೆಪದಲ್ಲಿ ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿ ಪಾದಯಾತ್ರೆ ನಡೆಸದಂತೆ ನಿಯಂತ್ರಣ ಹೇರುವ ಯತ್ನ ಮಾಡಿದೆ.
The Congress will hold a rally (Congress Mekedatu Padayatra) from tomorrow (Jan 9) demanding implementation of the Mekedatu Yojana (Mekedatu Project) and has already made all preparations. However, Ramanagara Superintendent of Police Girish has issued a khadak warning to KPC president DK Sivakumar.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am