ಬ್ರೇಕಿಂಗ್ ನ್ಯೂಸ್
31-12-21 01:06 pm HK Desk news ಕರ್ನಾಟಕ
ಬೆಂಗಳೂರು, ಡಿ.31 : ಆತ್ಮಗಳು, ಅತೀಂದ್ರಿಯ ಶಕ್ತಿಗಳು ಮತ್ತು ಅಧ್ಯಾತ್ಮ ವಿಚಾರಗಳ ಬಗ್ಗೆ ಆಕರ್ಷಿತಳಾಗಿದ್ದ 17 ವರ್ಷದ ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದ್ದು, ಹೆತ್ತವರು ಆತಂಕಕ್ಕೆ ಒಳಗಾಗಿದ್ದಾರೆ.
ಸುಬ್ರಹ್ಮಣ್ಯ ನಗರದ ಅಭಿಷೇಕ್ ಮತ್ತು ಅರ್ಚನಾ ದಂಪತಿಯ ಏಕೈಕ ಪುತ್ರಿ ಅನುಷ್ಕಾ ಕಳೆದ ಅಕ್ಟೋಬರ್ 31ರಂದು ಮನೆ ಬಿಟ್ಟು ಹೋಗಿದ್ದು, ಎಲ್ಲಿ ಹೋಗಿದ್ದಾಳೆ ಅನ್ನುವುದು ತಿಳಿಯದೇ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಿಯುಸಿ ಕಲಿತ ಬಳಿಕ ಮನೆಯಲ್ಲೇ ಇದ್ದ ಅನುಷ್ಕಾ ಆನ್ಲೈನಲ್ಲಿಯೇ ಹೆಚ್ಚು ಕಾಲ ಇರುತ್ತಿದ್ದಳು. ಈ ವೇಳೆ, Shamanism ಎಂಬ ಅಧ್ಯಾತ್ಮ ವಿಭಾಗದ ಬಗ್ಗೆ ಆಕರ್ಷಿತಳಾಗಿದ್ದು, ಅದನ್ನೇ ಹೆಚ್ಚುವರಿಯಾಗಿ ಕಲಿಯುತ್ತೇನೆ ಎಂದು ಹೇಳುತ್ತಿದ್ದಳು. ಆದರೆ ಹೆತ್ತವರು ಮನೆಯಲ್ಲಿದ್ದೇ ಕಲಿಯುವಂತೆ ಹೇಳಿದ್ದರು.
ಸದಾ ತನ್ನ ಕೊಠಡಿಯಲ್ಲಿ ಶಾಮನಿಸಂ ಬಗ್ಗೆ ವಿಡಿಯೋ, ವೆಬ್ ಗಳನ್ನು ತೆರೆದು ಅಧ್ಯಯನ ನಡೆಸುತ್ತಿದ್ದ ಅನುಷ್ಕಾ ಅ.31ರಂದು ಮನೆ ಬಿಟ್ಟು ಹೋಗಿದ್ದಾಳೆ. ಹೆತ್ತವರು ಮರುದಿನವೇ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಟ್ವಿಟರ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿಯೂ ತನ್ನ ಮಗಳು ಎಲ್ಲಿಯಾದರೂ ಕಂಡುಬಂದರೆ ತಿಳಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಪೊಲೀಸರು ಆಸುಪಾಸಿನ ಸಿಸಿಟಿವಿಗಳನ್ನು ಪರಿಶೀಲಿಸಿದ್ದು, ಆಕೆ ಸುಬ್ರಹ್ಮಣ್ಯ ನಗರದಿಂದ ಹುಳಿಮಾವಿಗೆ ಆಟೋ ಹತ್ತಿ ಹೋಗಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಅಲ್ಲಿಂದ ನಂತರ ಎಲ್ಲಿ ಹೋಗಿದ್ದಾಳೆ ಅನ್ನುವುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಯಾವತ್ತೂ ಮನೆ ಬಿಟ್ಟು ಹೋದವಳಲ್ಲ. ಮನೆಯಿಂದ ಹೋಗುವಾಗ ಎರಡು ಜೊತೆ ಬಟ್ಟೆ ಮತ್ತು 2500 ರೂ. ಹಣದ ಜೊತೆಗೆ ತೆರಳಿದ್ದಳು. ಯಾರೋ ಆಕೆಯ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುವ ಶಂಕೆಯಿದೆ. ಎರಡು ತಿಂಗಳಾದರೂ ಪತ್ತೆಯಾಗದಿರುವುದು ಆತಂಕ ಮೂಡಿಸಿದೆ ಎಂದು ಅನುಷ್ಕಾ ತಂದೆ ಅಭಿಷೇಕ್ ಪ್ರತಿಕ್ರಿಯಿಸಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿಯೇ ಅನುಷ್ಕಾ ಮನೆಯಲ್ಲಿ ಯಾರೊಂದಿಗೂ ಬೆರೆಯದೆ ಒಬ್ಬಂಟಿಯಾಗಿರುತ್ತಿದ್ದಳು. ಇದನ್ನು ಗಮನಿಸಿದ್ದ ಹೆತ್ತವರು ಆಕೆಗೆ ಕೌನ್ಸಿಲಿಂಗ್ ಕೂಡ ಮಾಡಿದ್ದರು.
ಶಾಮನಿಸಂ ಎನ್ನುವುದು ಒಂದು ಮೆಡಿಟೇಶನ್ ಪ್ರಕ್ರಿಯೆ ಆಗಿದ್ದು, ಪ್ರಕೃತಿ, ಅತೀಂದ್ರಿಯ ಶಕ್ತಿಗಳ ಜೊತೆ ಸಂಪರ್ಕ ಮಾಡುವುದಾಗಿ ಹೇಳಿಕೊಳ್ಳಲಾಗುತ್ತದೆ. ಇದರ ಬಗ್ಗೆ ಆಕರ್ಷಿತಳಾಗಿದ್ದ ಅನುಷ್ಕಾಗೆ ಯಾರ ಸಂಪರ್ಕ ಸಿಕ್ಕಿದೆ ಎನ್ನುವುದು ಹೆತ್ತವರಿಗೆ ತಿಳಿದಿಲ್ಲ.
Seventeen-year-old Anushka is missing from her Bengaluru home. Her parents suspect a shamanism connection. Shamanism is a religious practice based on the belief that its practitioner interacts with spirits in an altered state of consciousness.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am