ಬ್ರೇಕಿಂಗ್ ನ್ಯೂಸ್
28-12-21 02:32 pm HK Desk news ಕರ್ನಾಟಕ
ಬೆಂಗಳೂರು, ಡಿ.28 : ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ವರ್ಷದ ಜನವರಿ 1ರಿಂದ ಫೆಬ್ರವರಿ 7ರ ವರೆಗೆ ಪ್ರತಿದಿನವೂ ಸೂರ್ಯ ನಮಸ್ಕಾರ ನಡೆಸುವಂತೆ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಬಾರಿ ಪಿಯು ಮಕ್ಕಳಲ್ಲಿ ಯೋಗಾಸನದ ಬಗ್ಗೆ ಆಸಕ್ತಿ ಹುಟ್ಟಿಸುವ ಭಾಗವಾಗಿ ಪಿಯು ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆಯೋಜಿಸಲು ಸೂಚನೆ ನೀಡಲಾಗಿದೆ. ದೇಶದ ಎಲ್ಲ 30 ರಾಜ್ಯಗಳ ಪದವಿ ಪೂರ್ವ ಶಿಕ್ಷಣ ಇಲಾಖೆಗಳಿಗೆ ಈ ಬಗ್ಗೆ ಕೇಂದ್ರ ಸರಕಾರವು ಡಿ.16ರಂದು ಸುತ್ತೋಲೆ ಹೊರಡಿಸಿತ್ತು.
ಜನವರಿ ಒಂದರಿಂದಲೇ ಸೂರ್ಯ ನಮಸ್ಕಾರ ನಡೆಸಬೇಕಾಗಿದ್ದು, ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕೇತರ ಸಿಬಂದಿ, ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡಲು ಸೂಚನೆ ನೀಡಲಾಗಿದೆ. ಜ.1ರಿಂದ ಫೆ.7ರ ನಡುವೆ 38 ದಿನಗಳಿದ್ದು, 21 ಶಾಲಾ ದಿನಗಳಲ್ಲಿ ಬೆಳಗ್ಗೆ ಸೂರ್ಯ ನಮಸ್ಕಾರ ಮಾಡಿದರೆ 21 ದಿನಗಳ ಪರ್ಯಂತ ಯೋಗ ನಡೆಸಿದಂತಾಗುತ್ತದೆ. ಪ್ರತಿ ದಿನ 13 ಸೂರ್ಯ ನಮಸ್ಕಾರ ಮಾಡಬೇಕಿದ್ದು, ಇದರಂತೆ 21 ದಿವಸಗಳಲ್ಲಿ 273 ಬಾರಿ ಸೂರ್ಯ ನಮಸ್ಕಾರ ಮಾಡಲಿದ್ದಾರೆ. ಇದನ್ನು ಪೂರ್ತಿಗೊಳಿಸಿದ್ದಕ್ಕಾಗಿ ರಾಷ್ಟ್ರೀಯ ಯೋಗ ಫೆಡರೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಇ-ಸರ್ಟಿಫಿಕೇಟ್ ನೀಡಲಾಗುತ್ತದೆ.
ಪ್ರತಿ ಕಾಲೇಜುಗಳಲ್ಲಿ ಕೈಗೊಂಡ ಕ್ರಮಗಳು, ಆಯಾ ದಿನದಲ್ಲಿ ಭಾಗವಹಿಸಿದ ಚಟುವಟಿಕೆ ಬಗ್ಗೆ ಆಯಾ ಜಿಲ್ಲೆಯ ಶಿಕ್ಣ ಇಲಾಖೆ ಉಪ ನಿರ್ದೇಶಕರಿಗೆ ಸಲ್ಲಿಸಬೇಕಾಗುತ್ತದೆ. ಸೂರ್ಯ ನಮಸ್ಕಾರವು ವಿದ್ಯಾರ್ಥಿಗಳ ಆರೋಗ್ಯ ಮತ್ತು ಮನೋಬಲ ವೃದ್ಧಿಗೆ ಸಹಾಯಕ. ಅದಕ್ಕಾಗಿ ಸೂಕ್ತ ಗುರುವನ್ನು ನೇಮಿಸಿಕೊಂಡು ಯೋಗಾಭ್ಯಾಸ ನಡೆಸುವಂತೆ ಕೇಂದ್ರ ಶಿಕ್ಷಣ ಇಲಾಖೆಯ ಅದೇಶ ತಿಳಿಸಿದೆ.
Pre-university Education department of the state has asked all PU colleges to hold Surya Namaskar programme from January 1 to February 7. In addition, on January 26, it has asked the school authorities to get the same done with music.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am