ಬ್ರೇಕಿಂಗ್ ನ್ಯೂಸ್
25-12-21 05:25 pm HK Desk news ಕರ್ನಾಟಕ
ಮೈಸೂರು, ಡಿ.25 : ರಾಜ್ಯ ಬಿಜೆಪಿ ಸರಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಮಸೂದೆಯನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ವಿರೋಧಿಸಿದ್ದು ಆರೆಸ್ಸೆಸ್ ನಾಯಕರ ಮಕ್ಕಳು ಮುಸ್ಲಿಮರನ್ನು ಮದುವೆಯಾಗಿದ್ದಾರೆ, ಅವರನ್ನು ಜೈಲಿಗೆ ಹಾಕುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಶಾಸಕಾಂಗ ಸಮಿತಿ ವಿವಿಧ ಸಮುದಾಯಗಳ ಮಠಾಧೀಶರನ್ನು ಭೇಟಿ ಮಾಡಿ ಮಸೂದೆ ಕುರಿತು ಅಭಿಪ್ರಾಯ ಸಂಗ್ರಹಿಸಬೇಕು. ಈ ಮಸೂದೆಯಿಂದ ಬಸವೇಶ್ವರರ ಮೂಲ ತತ್ವಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಇಂಥ ವಿಧೇಯಕ ತರುವುದರಿಂದ ರಾಜ್ಯದ ಅಭಿವೃದ್ಧಿ ಆಗುತ್ತದೆಯೇ? ಮಸೂದೆ ಜಾರಿಗೆ ತರುವ ಮೊದಲು ಅಭಿಪ್ರಾಯ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.
ಆರ್ಎಸ್ಎಸ್ ನಾಯಕರ ಮಕ್ಕಳು ಮುಸ್ಲಿಮರ ಮಕ್ಕಳನ್ನು ಮದುವೆಯಾಗಿದ್ದಾರೆ. ಮಸೂದೆ ತಂದು ಇವರನ್ನೆಲ್ಲ ಜೈಲಿಗೆ ಹಾಕಲು ಸಾಧ್ಯವೇ? ಮುಸ್ಲಿಂ ಸಿನಿಮಾ ನಟರು ಬ್ರಾಹ್ಮಣರನ್ನು ಮದುವೆಯಾಗಿದ್ದಾರೆ. ಇವರನ್ನು ಜೈಲಿಗೆ ಹಾಕಲು ಸಾಧ್ಯವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಭಾರತ ಬಹುತ್ವವುಳ್ಳ ದೇಶ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ ಕೊಟ್ಟು ಸಂವಿಧಾನ ನೀಡಿದ್ದಾರೆ. ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಬಸವೇಶ್ವರರು ಕಟ್ಟಿದ ಮಾನವ ಧರ್ಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಒಡೆಯುವ ಕೆಲಸವಾಗಿರುವುದು ವಿಪರ್ಯಾಸ. ಇದನ್ನು ಯಾರೂ ಮೆಚ್ಚುವುದಿಲ್ಲ ಎಂದು ವಿಶ್ವನಾಥ್ ಹೇಳಿದರು.
ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡಿರುವ ಮಠಾಧೀಶರು ಯಾರು ಕೂಡ ಮಸೂದೆ ಕುರಿತು ಮಾತನಾಡುತ್ತಿಲ್ಲ. ಸರ್ಕಾರ ಕೊಡುತ್ತಿರುವ ಅನುದಾನ ಅವರ ಬಾಯಿ ಮುಚ್ಚಿಸಿದೆ. ಅಹಿಂದ ಮಠಗಳೂ ಮಾತನಾಡುತ್ತಿಲ್ಲ. ನಿಮ್ಮ ಬಾಯಿ ಕಟ್ಟಿರುವುದು ಯಾರು? ಸಾಹಿತಿಗಳು, ಚಿಂತಕರು ಕೂಡ ಬಾಯಿ ಬಿಡುತ್ತಿಲ್ಲ. ಅವರು ರಾಜ್ಯೋತ್ಸವ ಪ್ರಶಸ್ತಿಗಷ್ಟೇ ಸೀಮಿತವಾಗಿದ್ದಾರೆ ಎಂದು ವಿಶ್ವನಾಥ್ ಟೀಕಿಸಿದರು.
ರಂಗಾಯಣದಲ್ಲಿ ತತ್ವ ಸಿದ್ಧಾಂತ ಹೇರಬೇಡಿ !
ರಂಗಾಯಣ ವಿವಾದ ಕುರಿತು ಪ್ರಸ್ತಾಪಿಸಿದ ಎಚ್.ವಿಶ್ವನಾಥ್, ತಾವು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ರಂಗಾಯಣಕ್ಕೆ ರೂಪ ಕೊಟ್ಟಿದ್ದೆ. ರಂಗಾಯಣ ನೋಂದಣಿಯಾಗಿಲ್ಲ ಎಂದು ಬಿ.ವಿ. ಕಾರಂತರು ಹೇಳಿದಾಗ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರೊಂದಿಗೆ ಮಾತನಾಡಿ ಕೆಲಸ ಮಾಡಿಸಿದೆವು. ಈವರೆಗೂ ಹತ್ತು ಮಂದಿ ರಂಗಾಯಣ ನಿರ್ದೇಶಕರಾಗಿದ್ದಾರೆ. ಯಾರು ಕೂಡ ತತ್ವ , ಸಿದ್ಧಾಂತವನ್ನು ಹೇರಿರಲಿಲ್ಲ. ಅಡ್ಡಂಡ ಸಿ. ಕಾರ್ಯಪ್ಪ ಅವರು ಈಗಿನ ನಿರ್ದೇಶಕರು. ಅವರು ಪದ ಪ್ರಯೋಗ ಮಾಡುವಾಗ ಸಾಮರಸ್ಯದ ಕಾಳಜಿ ವಹಿಸಬೇಕು. ಈ ಹಿಂದಿನ ನಿರ್ದೇಶಕರು ರಂಗಾಯಣವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದರು.
Anti conversion bill, will those children of RSS leaders who have married Muslim Woman go to jail questions Vishwanath in Mysuru. The Karnataka Assembly passed the controversial anti-conversion Bill, aimed at penalising 'forced' conversions, through a voice vote on Thursday, December 23. Opposition party Congress opposed the Bill, and when the Bill was passed, many MLAs stormed the well of the Assembly.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm