ಬ್ರೇಕಿಂಗ್ ನ್ಯೂಸ್
04-12-21 12:28 pm HK Desk news ಕರ್ನಾಟಕ
ಬೆಂಗಳೂರು, ಡಿ.4: ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳೆಯೊಬ್ಬರನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ, ಬಹಿರಂಗವಾಗಿ ಹಸ್ತಮೈಥುನ ಮಾಡಿ ಮುಜುಗರ ಸೃಷ್ಟಿಸಿರುವ ಬಗ್ಗೆ ಮಹಿಳೆ ತನ್ನ ಜಾಲತಾಣದಲ್ಲಿ ಬರೆದುಕೊಂಡಿದ್ದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಘಟನೆ ಬಗ್ಗೆ ಕ್ಷಮೆ ಯಾಚಿಸಿದ ಪ್ರಸಂಗ ನಡೆದಿದೆ.
ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತೆಯೊಬ್ಬರು ಶುಕ್ರವಾರ ರಾತ್ರಿ ಕೆಲಸ ಮುಗಿಸಿ, ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಅದರಂತೆ, ಕಾರಿನಲ್ಲಿ ತೆರಳುತ್ತಿದ್ದಾಗ ಲುಂಗಿ ಉಟ್ಟಿದ್ದ ಚಾಲಕ ಹತ್ತಿರ ಮಹಿಳೆ ಕುಳಿತಿರುವಾಗಲೇ ತನ್ನ ಗುಪ್ತಾಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಆತ ಏನೂ ವಿಶೇಷ ಅನ್ನಿಸದ ರೀತಿ ಈ ವರ್ತನೆ ತೋರಿದ್ದು, ವಿಷಯ ತಿಳಿಯುತ್ತಲೇ ಮಹಿಳೆ ಬೊಬ್ಬೆ ಹಾಕಿದ್ದಾರೆ. ಕತ್ತಲಾಗಿದ್ದರಿಂದ ರಸ್ತೆಯ ನಡುವೆಯೇ ಚಾಲಕ ಕಾರನ್ನು ನಿಲ್ಲಿಸಿದ್ದು, ಮಹಿಳೆ ಹೊರಗೆ ಇಳಿದಿದ್ದಾರೆ.


ಮನಸ್ಸಿಗೆ ಆಘಾತ, ಭಯ ಆವರಿಸಿದರೂ, ಸುಧಾರಿಸಿಕೊಂಡು ಬೀದಿ ದೀಪ ಇದ್ದುದರಿಂದ ಅಲ್ಲಿಯೇ ನಿಂತು ಬಿಟ್ಟೆ. ಬಳಿಕ ಆಟೋದಲ್ಲಿ ಹತ್ತಿ ಮನೆ ಸೇರಿದ್ದೇನೆ. ನನಗೇನು ಮಾಡಬೇಕೆಂದು ತೋಚಲಿಲ್ಲ. ಎಮರ್ಜೆನ್ಸಿ ನಂಬರ್ ಕೂಡ ಬಾಯಿಗೆ ಬರಲಿಲ್ಲ ಎಂದು ತನಗಾದ ನೋವನ್ನು ಮಹಿಳೆ ಬರೆದುಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಓಲಾ ಕಂಪನಿಗೆ ದೂರು ಹೇಳಿಕೊಂಡಿದ್ದು, ಚಾಲಕನನ್ನು ಸಸ್ಪೆಂಡ್ ಮಾಡುವುದಾಗಿ ಕಂಪನಿ ಹೇಳಿದೆ. ಆದರೆ, ಹಗಲಿನಲ್ಲಿ ಕೆಲಸ ಮಾಡಿ ರಾತ್ರಿ ಮನೆ ಸೇರುವ ಸಂದರ್ಭದಲ್ಲಿ ಅನಿವಾರ್ಯವಾಗಿ ಈ ರೀತಿಯ ಟ್ಯಾಕ್ಸಿಗಳನ್ನು ಬಳಸಬೇಕಾಗುತ್ತೆ. ಆದರೆ ಈ ಪುರುಷರು ತಮ್ಮ ಪ್ಯಾಂಟ್ ಹಾಕಿದ್ದಾರೆಯೇ, ಇಲ್ಲವೋ ಎಂಬುದನ್ನು ಹೇಗೆ ಗಮನಿಸುವುದು ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ರಾತ್ರಿಯಲ್ಲಿ ಮತ್ತೊಮ್ಮೆ ಮಹಿಳೆಯೊಬ್ಬಳ ಘನತೆ ರಕ್ಷಣೆಗೆ ಈ ನಗರದ ಆಡಳಿತ ವಿಫಲವಾಯ್ತು. ಸಾರ್ವಜನಿಕ ಜೀವನದಲ್ಲಿ ಕಿರುಕುಳಕ್ಕೆ ಈಡಾಗಿದ್ದೇನೆ. ಮಹಿಳೆಯ ಸಾಮಾಜಿಕ ಜೀವನದಲ್ಲಿ ಮತ್ತೊಂದು ಕಪ್ಪು ಚುಕ್ಕೆ ಎದುರಾಯ್ತು ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಜಾಲತಾಣದಲ್ಲಿ ಪೋಸ್ಟ್ ನೋಡುತ್ತಲೇ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಎಲರ್ಟ್ ಆಗಿದ್ದಾರೆ. ಈ ರೀತಿಯ ಸುದ್ದಿ ಕೇಳಿ ಆಘಾತವಾಗಿದ್ದು, ಮಹಿಳೆಯ ಬಳಿ ಕ್ಷಮೆ ಕೇಳುತ್ತೇನೆ. ನಿಮ್ಮ ದೂರನ್ನು ಪರಿಗಣಿಸಿ, ತುರ್ತಾಗಿ ತಂಡ ರಚನೆ ಮಾಡಿದ್ದೇವೆ. ಡಿಸಿಪಿ ಸೆಂಟ್ರಲ್ ನೇತೃತ್ವದಲ್ಲಿ ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಓಲಾ ಕ್ಯಾಬ್ ವಿರುದ್ಧವೂ ಈ ಬಗ್ಗೆ ಕ್ರಮ ಜರುಗಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
Over the past few years, popular cab services like Ola and Uber have faced scrutiny for the continued risk to women's safety as several cases of harassment, sexual advances and rape, have been reported. In another shocking case, an Ola cab driver allegedly masturbated in front of a young woman passenger while on a ride in Bengaluru in the wee hours of Friday. The incident took place place when the young journalist working for a reputed English daily, booked an Ola cab to reach her residence.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm