ಬ್ರೇಕಿಂಗ್ ನ್ಯೂಸ್
02-12-21 10:40 pm HK Desk news ಕರ್ನಾಟಕ
ಬೆಂಗಳೂರು, ಡಿ.2: ಬೆಂಗಳೂರಿನಲ್ಲಿ ಇಬ್ಬರಿಗೆ ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಇರುವುದು ಪತ್ತೆಯಾಗಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದ್ದ ಓಮಿಕ್ರಾನ್ ವೈರಸ್ ಭಾರತದ ಮೊದಲ ಪ್ರಕರಣದಲ್ಲೇ ಠುಸ್ಸಾಯ್ತೇ ಅನ್ನುವ ಪ್ರಶ್ನೆ ಎದುರಾಗಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ 66 ವರ್ಷದ ವೃದ್ಧ ವ್ಯಕ್ತಿ ಮತ್ತು ಇನ್ನೊಬ್ಬ 46 ವರ್ಷದ ವೈದ್ಯರಲ್ಲಿ ಈ ವೈರಸ್ ಕಂಡುಬಂದಿದ್ದು, ಇಬ್ಬರು ಕೂಡ ವಾರದ ಹಿಂದೆಯೇ ಹುಷಾರಾಗಿ ಆಸ್ಪತ್ರೆಯಿಂದ ಮರಳಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ನ.20ಕ್ಕೆ ಬೆಂಗಳೂರಿಗೆ ಬಂದಿದ್ದ 66 ವರ್ಷದ ವ್ಯಕ್ತಿಯಲ್ಲಿ ಯಾವುದೇ ಕೊರೊನಾ ಲಕ್ಷಣಗಳಿರಲಿಲ್ಲ. ಆದರೆ, ಏರ್ಪೋರ್ಟ್ ನಲ್ಲಿ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಆಗಿದ್ದರು. ಆನಂತರ ನ.22ರಂದು ಅವರ ಗಂಟಲ ದ್ರವವನ್ನು ಓಮಿಕ್ರಾನ್ ಇದೆಯೇ ಎಂದು ಪತ್ತೆಹಚ್ಚಲು ಜಿನೋಮ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೇ ವೇಳೆ, ಮತ್ತೊಬ್ಬ ವೈದ್ಯರು ಸೇರಿದಂತೆ ವಿದೇಶಗಳಿಂದ ಬಂದಿದ್ದ ಹಲವರನ್ನು ಈ ರೀತಿಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ದಕ್ಷಿಣ ಆಫ್ರಿಕಾದಿಂದ ಬಂದಿರುವ ವ್ಯಕ್ತಿ ಮತ್ತು 46 ವರ್ಷದ ಬೆಂಗಳೂರಿನ ವೈದ್ಯರಿಗೆ ಓಮಿಕ್ರಾನ್ ಇರುವ ಬಗ್ಗೆ ವರದಿ ಡಿ.2ರಂದು ಬಂದಿದೆ.
ವಿಶೇಷ ಅಂದ್ರೆ, ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಒಂದು ವಾರ ಬೆಂಗಳೂರಿನಲ್ಲಿ ಕ್ವಾರಂಟೈನಲ್ಲಿದ್ದರು. ಈ ನಡುವೆ, ನ.23ರಂದು ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿಕೊಂಡಿದ್ದ ಅದೇ ವ್ಯಕ್ತಿಗೆ ಕೊರೊನಾ ನೆಗೆಟಿವ್ ಬಂದಿತ್ತು. ಇದರಂತೆ, ಆ ವ್ಯಕ್ತಿ ನ.27ರಂದು ಮರಳಿ ದುಬೈಗೆ ತೆರಳಿದ್ದಾರೆ. ಇದಕ್ಕೂ ಮುನ್ನ ನ.22ರಂದು ಬಿಬಿಎಂಪಿ ಅಧಿಕಾರಿಗಳು ಅದೇ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಜೀನೋಮ್ ಸೀಕ್ವೆನ್ಸ್ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದರು.
ಅದೇ ದಿನ ವೈದ್ಯರೊಬ್ಬರಿಗೆ ಜ್ವರ ಮತ್ತು ತಲೆನೋವು ಇದ್ದುದರಿಂದ ಓಮಿಕ್ರಾನ್ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರು ಕೂಡ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಆನಂತರ ಸೆಲ್ಫ್ ಕ್ವಾರಂಟೈನಲ್ಲಿದ್ದರು. ಇದೀಗ ಇವರಿಬ್ಬರ ವರದಿ ಬಂದಿದ್ದು, ಇಬ್ಬರಿಗೂ ಓಮಿಕ್ರಾನ್ ವೈರಸ್ ದಾಳಿ ಎಸಗಿದ್ದು ಕಂಡುಬಂದಿದೆ. ವಿಶೇಷ ಅಂದ್ರೆ, ಭಾರೀ ಆತಂಕಕ್ಕೆ ಕಾರಣವಾಗಿದ್ದ ಓಮಿಕ್ರಾನ್ ಮೊದಲ ವರದಿಯಲ್ಲೇ ಠುಸ್ ಪಟಾಕಿ ಅನ್ನುವಂತಾಗಿದೆ.
ಆದರೆ ದಕ್ಷಿಣ ಆಫ್ರಿಕಾ ಮೂಲದಿಂದ ಬಂದಿರುವ ವ್ಯಕ್ತಿಗೆ 24 ಮಂದಿ ನೇರ ಸಂಪರ್ಕಿತರು ಮತ್ತು 240 ಮಂದಿ ದ್ವಿತೀಯ ಸಂಪರ್ಕಿತರಿದ್ದುದನ್ನು ಆರೋಗ್ಯ ಅಧಿಕಾರಿಗಳು ಪತ್ತೆ ಮಾಡಿದ್ದು ಅವರನ್ನೂ ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರಿಗೆ ಯಾರಿಗೂ ಪಾಸಿಟಿವ್ ಕಂಡುಬಂದಿಲ್ಲ. ಇದೇ ವೇಳೆ, ವೈದ್ಯರ ನೇರ ಸಂಪರ್ಕಕ್ಕೊಳಗಾಗಿರುವ 13 ಮಂದಿ ಮತ್ತು 205 ಮಂದಿ ದ್ವಿತೀಯ ಸಂಪರ್ಕಿಕರನ್ನು ಪತ್ತೆ ಮಾಡಲಾಗಿದೆ. ಅವರಿಬ್ಬರಲ್ಲಿ ಕೊರೊನಾ ಲಕ್ಷಣ ಕಂಡುಬಂದಿದ್ದು, ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಮಾಹಿತಿ ನೀಡಿದ್ದು, ಹೊಸ ವೈರಸ್ ಓಮಿಕ್ರಾನ್ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಇವೆರಡು ಪ್ರಕರಣದಲ್ಲಿಯೂ ವಿಶೇಷ ಅನ್ನಿಸಿದ್ದು ವೈದ್ಯರಿಗೆ ಸೋಂಕು ಕಂಡುಬಂದಿರುವುದು. ಯಾವುದೇ ವಿದೇಶಿ ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗೆ ವಿದೇಶದಲ್ಲಿ ಕಂಡುಬಂದ ವೈರಸ್ ಪತ್ತೆಯಾಗಿದ್ದು ಹೇಗೆ ಎನ್ನುವ ಬಗ್ಗೆ ಸಂಶಯ ಹುಟ್ಟಿಸಿದೆ. ವಿದೇಶದಲ್ಲಿ ಮಾತ್ರ ಇದೆ ಎಂದು ಈವರೆಗೂ ಹೇಳಿಕೊಂಡು ಬಂದಿದ್ದ ವೈರಸ್ ಇದಕ್ಕೂ ಮೊದಲೇ ಇಲ್ಲಿತ್ತೇ ಅನ್ನುವ ಸಂಶಯವೂ ಎದುರಾಗಿದೆ. ಅಥವಾ ನಮ್ಮ ನಡುವೆ ಇರುವ ಲಕ್ಷಾಂತರ ವೈರಸ್ ಗಳ ಪೈಕಿ ಇದೂ ಒಂದೇ ಅನ್ನುವ ಕುತೂಹಲವೂ ಉಂಟಾಗಿದೆ.
Bengaluru Media creates hype Omicron Virus creates panic among public. . “All Omicron related cases are found to have mild symptoms so far…In all such cases in the country and across the world so far, no severe symptom has been noted. WHO has said that its emerging evidence is being studied,”
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm