ಬ್ರೇಕಿಂಗ್ ನ್ಯೂಸ್
29-10-21 10:01 pm Bengaluru, HK Desk ಕರ್ನಾಟಕ
ಬೆಂಗಳೂರು, ಅ.29: ಕನ್ನಡ ಚಿತ್ರರಂಗದ ಅಪ್ಪು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ, ತಮ್ಮ ಆರು ತಿಂಗಳ ಹಸುಗೂಸಿನಿಂದ ತೊಡಗಿ ಕನ್ನಡದ ಕೋಟ್ಯಧಿಪತಿಯಾಗಿ ಆರು ಕೋಟಿ ಕನ್ನಡಿಗರನ್ನು ಗೆದ್ದ ರಾಜಕುಮಾರನ ತನಕದ 46 ವರ್ಷಗಳ ತುಂಬು ಹರೆಯದ ಜರ್ನಿ ಕನ್ನಡ ಜನಮಾನಸದಲ್ಲಿ ರೆಕಾರ್ಡ್ ಆಗಿದೆ. ಆರು ತಿಂಗಳ ಹಸುಗೂಸು ಆಗಿದ್ದ ಪುನೀತ್, ತಂದೆ ರಾಜಕುಮಾರ್ ಅಭಿನಯಿಸಿದ್ದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಮೊದಲು ಆನಂತರದ ಸಿನಿ ಜರ್ನಿಯಲ್ಲಿ ಅವರು ಹಿಂತಿರುಗಿದ್ದೇ ಇಲ್ಲ. ಹಾಡುಗಾರನಾಗಿ, ನಟನಾಗಿ, ಚಿತ್ರ ನಿರ್ಮಾಪಕನಾಗಿ, ಅನಾಥರು, ವೃದ್ಧರಿಗೆ ಮಿಡಿಯುವ ಹೃದಯವಂತನಾಗಿ, ಗೋವುಗಳ ಆರಾಧಕನಾಗಿ ಹೀಗೆ ಅವರು ತಮ್ಮ 46 ವರ್ಷದ ಜೀವನ ಪಯಣದಲ್ಲಿ ಮಾಡಿದ ಪಾತ್ರಗಳು ಹಲವಾರು.
ಇಂಥ ಪುನೀತ್, ಟಿವಿಯಲ್ಲೂ ಕಾಣಿಸಿಕೊಂಡು ಸೈ ಎನಿಸಿದ್ದರು. ಹಿಂದಿ ಭಾಷೆಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಪಡಿಯಚ್ಚನ್ನು ಕನ್ನಡದಲ್ಲೂ ಮಾಡಿ, ಆಕರ್ಷಣೆ ಮೂಡಿಸಿದ್ದು ಪುನೀತ್. 2017ರಲ್ಲಿ ಕಲರ್ಸ್ ವಾಹಿನಿಯಲ್ಲಿ ಕನ್ನಡದ ಕೋಟ್ಯಧಿಪತಿ ಮೊದಲ ಸೀಸನ್ ಬಂದಿತ್ತು. ಅದನ್ನು ನಡೆಸಿಕೊಟ್ಟು ಕನ್ನಡ ಜನಮಾನಸದಲ್ಲಿ ಪುನೀತ್ ಹೊಸ ಛಾಪು ಮೂಡಿಸಿದ್ದರು.
ಕೋಟ್ಯಧಿಪತಿ ಕ್ವಿಜ್ ಕಾರ್ಯಕ್ರಮದ ಎರಡನೇ ಸೀಸನಲ್ಲಿಯೂ ಪುನೀತ್ ಆತಿಥ್ಯ ವಹಿಸಿಕೊಂಡಿದ್ದರು. ಕನ್ನಡದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದ ಕಾರ್ಯಕ್ರಮ ಅದಾಗಿತ್ತು. ಮೂರನೇ ಸೀಸನಲ್ಲಿ ರಮೇಶ್ ಅರವಿಂದ್ ಇದೇ ಕಾರ್ಯಕ್ರಮ ನಡೆಸಿದ್ದರು. ಆನಂತರ, 2019ರಲ್ಲಿ ಮತ್ತೆ ಪುನೀತ್ ರಾಜ್ ಕುಮಾರ್ ಅವರೇ ಕನ್ನಡದ ಕೋಟ್ಯಧಿಪತಿ ನಡೆಸಿಕೊಟ್ಟಿದ್ದರು.
ಕನ್ನಡದ ಕೋಟ್ಯಧಿಪತಿ ಸೂಪರ್ ಹಿಟ್ ಆದಬಳಿಕ ಕಲರ್ಸ್ ವಾಹಿನಿಯವರೇ ಪುನೀತ್ ಅವರನ್ನು ಕರೆತಂದು ಫ್ಯಾಮಿಲಿ ಪವರ್ ಎನ್ನುವ ವಿಶಿಷ್ಟ ರಿಯಾಲಿಟಿ ಶೋ ನಡೆಸಿದ್ದರು. 2017ರ ನವೆಂಬರ್ ನಿಂದ 2018ರ ಎಪ್ರಿಲ್ ವರೆಗೆ ನಿರಂತರವಾಗಿ ನಡೆದುಬಂದಿದ್ದ ಕಾರ್ಯಕ್ರಮವೂ ಹಿಟ್ ಆಗಿತ್ತು. ಪವರ್ ಸ್ಟಾರ್ ಆನಂತರ, ಟೀವಿ ಕಾರ್ಯಕ್ರಮಗಳ ನಿರ್ಮಾಣದಲ್ಲಿಯೂ ತೊಡಗಿಸಿದ್ದರು. ಪುನೀತ್ ಟಿವಿ ಶೋ ನೇತ್ರಾವತಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು.
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಯಾಗಿದ್ದ ಪುನೀತ್ ರಾಜಕುಮಾರ್ ತಂದೆಯ ರೀತಿಯಲ್ಲೇ ಅಭಿಮಾನಿಗಳನ್ನು ಪ್ರೀತಿಸುತ್ತಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಣ್ಣಾವ್ರ ರೀತಿಯಲ್ಲೇ ಅತ್ಯಂತ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳ ಆದರಕ್ಕೆ ಪಾತ್ರರಾಗಿದ್ದರು. ಪುನೀತ್ ಇನ್ ಸ್ಟಾ ಗ್ರಾಮ್ ಒಂದರಲ್ಲೇ 1.5 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
Kannada actor Puneeth Rajkumar passed away at the age of 46 today, October 29, after suffering a heart attack. The actor, who is known for his films Appu and Bettada Hoovu. The 46-year-old actor, who made his acting debut when he was six months old in the thriller film Premada Kanike, was first seen on TV as a host in 2017.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm