ಬ್ರೇಕಿಂಗ್ ನ್ಯೂಸ್
19-10-21 04:28 pm Headline Karnataka News Network ಕರ್ನಾಟಕ
ಹುಬ್ಬಳ್ಳಿ, ಅ.19: ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್. ಡ್ರಗ್ ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ವಿಧಾನಸಭೆ ಚುನಾವಣೆ ಪೂರ್ವ ಸಿದ್ಧತೆ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್, ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್ , ಡ್ರಗ್ ಪೆಡ್ಲರ್ ಅಂತ ವರದಿಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಜೈಲಿಗೆ ಹೋಗಿ ಬಂದಿದ್ದಾರೆ. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರಾ.. ಇಲ್ಲಾ ಸ್ವಾತಂತ್ರ್ಯ ಸಂಗ್ರಾಮದ ಕಥೆ ಬರೆಯಲು ಜೈಲಿಗೆ ಹೋಗಿ ಕುಳಿತಿದ್ದರಾ.. ಇಂಥವರೆಲ್ಲ ಪ್ರಧಾನಿ ಮೋದಿಯನ್ನು ಟೀಕಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ದೇಶದ ಸಂವಿಧಾನದ ಮೇಲೆ ನಂಬಿಕೆ ಕಳಕೊಂಡಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು ಎಂದು ಕೇಳಿ.. ಕಾಂಗ್ರೆಸ್ ಅಧ್ಯಕ್ಷರಾಗಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯೇ ಪೈಪೋಟಿ ನಡೆಸುತ್ತಿದ್ದಾರೆ. ಇವರಿಗೆ ಪಕ್ಷ ನಡೆಸೋಕೆ ಆಗುತ್ತಿಲ್ಲ. ಇನ್ನು ದೇಶ ಮುನ್ನಡೆಸಲು ಸಾಧ್ಯವೇ ಎಂದು ನಳಿನ್ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡೆತ್ತು ಎನ್ನುತ್ತಾರೆ. ಆದರೆ, ಇವರ ಸ್ಥಿತಿ ಹೇಗಿದೆ ಅಂದ್ರೆ ಒಳಗೊಳಗೇ ಕುಸ್ತಿ ಆಡುತ್ತಾರೆ. ಕಾಂಗ್ರೆಸ್ ನಾಯಕರ ಪಿಸುಮಾತಿನಲ್ಲಿಯೇ ಇವರ ಜಗಳ ರಟ್ಟಾಗಿತ್ತು. ಉಗ್ರಪ್ಪ ಎಂದೂ ಪಿಸುಮಾತು ಆಡಿದವರಲ್ಲ. ಆದರೆ, ಸಿದ್ದರಾಮಯ್ಯ ಕುತಂತ್ರದಿಂದಾಗಿ ಉಗ್ರಪ್ಪ ಪಿಸುಮಾತು ಆಡುವಂತಾಗಿದೆ. ಒಳಗಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ಇವರು ಮುಂದಿನ ಚುನಾವಣೆ ಹೊತ್ತಲ್ಲಿ ಪಕ್ಷವನ್ನು ಗೆಲ್ಲಿಸುವುದಲ್ಲ. ಪಕ್ಷವನ್ನೇ ಎರಡು ಹೋಳಾಗಿ ವಿಭಜಿಸಲಿದ್ದಾರೆ ಎಂದು ಹೇಳಿದರು.
I have always believed that civil and parliamentary language is a non-negotiable pre-requisite for political discourse. An uncivil tweet made by a novice social media manager through the Karnataka Congress official Twitter handle is regretted and stands withdrawn.
— DK Shivakumar (@DKShivakumar) October 18, 2021
ಡಿಕೆಶಿ ವಿಷಾದ- ಟ್ವೀಟ್ ತೆಗೆಸಿದ್ದ ಕಾಂಗ್ರೆಸ್
ಸೋಮವಾರವಷ್ಟೇ ರಾಜ್ಯ ಕಾಂಗ್ರೆಸ್ ಜಾಲತಾಣದಲ್ಲಿ ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಹೆಬ್ಬೆಟ್ಟು ಗಿರಾಕಿ ಎಂದು ಟೀಕಿಸಿ ಬರೆಯಲಾಗಿತ್ತು. ಕಾಂಗ್ರೆಸ್ ಟ್ವೀಟ್ ವಾರ್ ಗೆ ಬಿಜೆಪಿ ನಾಯಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ಬರುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅಸಾಂವಿಧಾನಿಕ ಪದ ಬಳಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಟ್ವೀಟ್ ಆಗಿರಲಿ, ನಮ್ಮ ಟೀಕೆ ಆಗಿರಲಿ. ನೈತಿಕ ಗೆರೆ ಬಿಟ್ಟು ಹೋಗಬಾರದು. ಈ ರೀತಿಯ ಪದ ಬಳಕೆ ಬಗ್ಗೆ ಕಾಂಗ್ರೆಸ್ ಪರವಾಗಿ ವಿಷಾದಿಸುತ್ತೇನೆ ಎಂದಿದ್ದಲ್ಲದೆ, ಮೋದಿ ಬಗ್ಗೆ ಮಾಡಿದ್ದ ಟ್ವೀಟನ್ನು ತೆಗೆದು ಹಾಕುವಂತೆ ಸೂಚನೆ ನೀಡಿದ್ದರು. ಡಿಕೆಶಿ ಸೂಚನೆಯ ಬೆನ್ನಲ್ಲೇ ವಿವಾದಿತ ಟ್ವೀಟನ್ನು ತೆಗೆದು ಹಾಕಲಾಗಿತ್ತು.
Referring to Congress leader Rahul Gandhi as a drug peddler and an addict, Karnataka BJP state president Nalin Kumar Kateel on Tuesday stoked a controversy."Who is Rahul Gandhi? I am not saying it. Rahul Gandhi is a drug addict and drug peddler. It had come in media. You can't even run the party," he said. His remarks come after a tweet in Kannada, terming Prime Minister Narendra Modi as an illiterate, from Karnataka Congress President DK Shivakumar flared a political row. DK Shivakumar later announced that the controversial tweet on PM Modi from his Twitter handle has been removed by the party's social media team.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm