ಬ್ರೇಕಿಂಗ್ ನ್ಯೂಸ್
04-10-21 11:08 am Headline Karnataka News Network ಕರ್ನಾಟಕ
ಬೆಂಗಳೂರು, ಅ.4 : ಇತ್ತೀಚೆಗೆ ಬೆಂಗಳೂರು ಪೊಲೀಸರ ಅಪರಾಧ ತನಿಖೆಯ ದೃಶ್ಯಗಳನ್ನು ಒಳಗೊಂಡ ನೈಜ ಕತೆಗಳನ್ನು ಆಧರಿಸಿದ 'ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್' ನೆಟ್ ಫ್ಲಿಕ್ಸ್ ನಲ್ಲಿ ಸದ್ದು ಮಾಡಿತ್ತು. ಆದರೆ, ಭಾರೀ ಕುತೂಹಲ ಸೃಷ್ಟಿಸಿದ್ದ ವೆಬ್ ಸರಣಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ಈ ಸರಣಿಯ ಮೊದಲ ಕಂತು ಪ್ರಸಾರ ಮಾಡದಂತೆ ಜನಪ್ರಿಯ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ಗೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ.
ಪೊಲೀಸ್ ತನಿಖೆ, ಅಪರಾಧಿಗಳ ಹೇಳಿಕೆ, ಘಟನಾ ಸ್ಥಳದ ವಿವರಗಳುಳ್ಳ ಮೊದಲ ಕಂತಿನಲ್ಲಿ ಪ್ರಸಾರವಾಗಿರುವ ಟೆಕ್ಕಿ ಅಮೃತಾ ಪ್ರಕರಣ ವಿವಾದಕ್ಕೆ ಒಳಗಾಗಿದೆ. ಅರ್ಜಿದಾರರಿಗೆ ಕಿರುಕುಳ ನೀಡುವುದಲ್ಲದೆ ಪೂರ್ವಾಗ್ರಹ ಉಂಟು ಮಾಡುವುದರಿಂದ ವೆಬ್ ಸರಣಿಯ ಮುಂಚೂಣಿ ಕಂತು 'ಎ ಮರ್ಡರ್ಡ್ ಮದರ್ ' ಪ್ರಸಾರ ಮಾಡಬಾರದು ಎಂದು ನ್ಯಾ. ಬಿ.ಎಂ ಶ್ಯಾಮಪ್ರಸಾದ್ ಆದೇಶಿಸಿದ್ದಾರೆ.
ನಿರ್ಮಲಾ ಚಂದ್ರಶೇಖರ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಬೆಂಗಳೂರಿನ 28 ವರ್ಷದ ಶ್ರೀಧರ್ ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ಆದೇಶ ಮಾಡಿದೆ. ಮೃತ ಮಹಿಳೆಯ ಪುತ್ರಿ ಅಮೃತಾ ಚಂದ್ರಶೇಖರ್ ಪ್ರಕರಣದ ಇನ್ನೊಬ್ಬ ಆರೋಪಿ. ತನ್ನ ತಾಯಿಯನ್ನು ಕೊಂದು ಮತ್ತು ಸಹೋದರನನ್ನು ಕೊಲ್ಲಲು ಯತ್ನಿಸಿದ ಅಮೃತ ಅವರು ಶ್ರೀಧರ್ ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್ಗೆ ಓಡಿಹೋಗಿದ್ದಳು. ಇದನ್ನು ಹಾಗೆಯೇ ವೆಬ್ ಸಿರೀಸ್ ನಲ್ಲಿ ತೋರಿಸಲಾಗಿತ್ತು.
ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವಾಗ ಅರ್ಜಿದಾರರ ವಿವರಗಳನ್ನು ಬಹಿರಂಗ ಪಡಿಸುವುದು, ವೈಯಕ್ತಿಕ ವಿವರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಪ್ರಕರಣದ ಕುರಿತ ಮೊದಲ ಕಂತು ಒಟಿಟಿ ವೇದಿಕೆಯಲ್ಲಿ ಇರಬಾರದು ಎಂದು ನೆಟ್ ಫ್ಲಿಕ್ಸ್ ಸಂಸ್ಥೆಗೆ ಸೂಚಿಸಿದೆ. ಕೋರ್ಟ್ ಆದೇಶದಂತೆ ಸದರಿ ವೆಬ್ ಸರಣಿಯ ಮೊದಲ ಕಂತು ಪ್ರಸಾರ, ಟೆಲಿ ಕಾಸ್ಟ್, ಸ್ಟ್ರೀಮಿಂಗ್ ವಿರುದ್ಧ ತಡೆ ಬಿದ್ದಿದೆ.
ಏನಿದು ಟೆಕ್ಕಿ ಅಮೃತಾ ಪ್ರಕರಣ
ಮಾರತ್ತಹಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಅಮೃತಾ ಚಂದ್ರಶೇಖರ್, 2020ರ ಫೆಬ್ರವರಿ 2ರಂದು ತಾಯಿ ನಿರ್ಮಲಾರನ್ನು ಹತ್ಯೆ ಮಾಡಿ, ಸಹೋದರ ಹರೀಶ್ ಹತ್ಯೆಗೆ ಯತ್ನಿಸಿದ್ದಳು. ಅಮೃತಾ ಪರಾರಿಯಾಗಲು ಆಕೆಯ ಪ್ರಿಯಕರ ಸಹಾಯ ಮಾಡಿದ್ದ. ಆತನೇ ಬಂದು ಅಮೃತಾಳನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿತ್ತು. ಬೆಂಗಳೂರಿನ ಕೆ. ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆ ತೀವ್ರ ಕುತೂಹಲ ಕೆರಳಿಸಿತ್ತು. ಕೆಲ ದಿನಗಳ ಬಳಿಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿದ್ದ ಅಮೃತಾ ಹಾಗೂ ಶ್ರೀಧರ್ ರಾವ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಸುಮಾರು 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದೆ. ಸಾಲಗಾರರು ಭಾನುವಾರ ಮನೆಗೆ ಬರುತ್ತಾರೆ. ಆದ್ದರಿಂದ, ಅವಮಾನವಾಗಿತ್ತು. ನಾನು ಆತ್ಮಹತ್ಯೆ ಮಾಡಿಕೊಂಡರೆ, ತಾಯಿ ಹಾಗೂ ಸೋದರನಿಗೆ ನೋವು, ಸಾಲಗಾರರ ಕಾಟ ತಪ್ಪುವುದಿಲ್ಲ. ನನಗೆ ಬೇರೆ ದಾರಿ ಕಾಣದೆ ಇಬ್ಬರನ್ನು ಹತ್ಯೆ ಮಾಡಲು ಯತ್ನಿಸಿದೆ, ತಾಯಿ ಮೃತಪಟ್ಟರು ಎಂದು ಅಮೃತಾ ಪೊಲೀಸರ ಮುಂದೆ ಹೇಳಿರುವ ದೃಶ್ಯ ವೆಬ್ ಸರಣಿಯಲ್ಲಿ ಬಂದಿದೆ. ಶ್ರೀಧರ್ ರಾವ್ ಎಂಬಾತನಿಗೆ ದುಡ್ಡು ನೀಡಿರುವುದು ಏಕೆ? ಎಂಬುದು ಪ್ರಶ್ನೆಯಾಗಿ ಉಳಿದಿದ್ದು, ಇಬ್ಬರ ನಡುವೆ ಉತ್ತಮ ಗೆಳೆತನವಿತ್ತು. ಕೊಲೆ ಬಗ್ಗೆ ನನಗೆ ಏನು ತಿಳಿದಿರಲಿಲ್ಲ, ಅಂಡಮಾನ್ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗಲೇ ನನಗೆ ತಿಳಿದಿದ್ದು ಎಂದು ಶ್ರೀಧರ್ ತನ್ನ ಹೇಳಿಕೆಯನ್ನು ದಾಖಲಿಸುವ ದೃಶ್ಯ ಕೂಡ ವೆಬ್ ಸರಣಿಯಲ್ಲಿತ್ತು.
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಹಿಂದೆ ಬೆಂಗಳೂರು ಡಿಸಿಪಿ ಆಗಿದ್ದಾಗ ವೆಬ್ ಸರಣಿ ಚಿತ್ರೀಕರಣ ನಡೆದಿತ್ತು. ಮೊದಲ ಬಾರಿಗೆ ಈ ರೀತಿ ಪೊಲೀಸ್ ಕಾರ್ಯಾಚರಣೆಯ ನೈಜ ಚಿತ್ರಣದ ವೆಬ್ ಸಿರೀಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂದಿತ್ತು.
In a setback to OTT platform Netflix, the Karnataka high court ordered the blocking of the first episode of a new web series, Crime Stories: India Detectives. On Friday, Justice B.M. Shyam Prasad, while hearing a petition moved by Sridhar Rao, a 28-year-old co-accused in the murder case of 54-year-old Nirmala Chandrasekhar, said that the pilot episode of the series, ‘A Murdered Mother’, should not be streamed as it could cause “harassment and prejudice to the petitioner”, reported Bar and Bench.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm