ಬ್ರೇಕಿಂಗ್ ನ್ಯೂಸ್
09-06-26 07:04 pm HK News Staffer ಕರ್ನಾಟಕ
ಬೆಂಗಳೂರು, ಜೂನ್ 09: ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡಲು ಆಗಿಲ್ಲ, ನಿಮ್ಮಿಂದ ಆಗುತ್ತಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಆರ್ಎಸ್ಎಸ್ ಅವರು ನೋಂದಣಿ ಮಾಡಿಸಲು ರೆಡಿಯಾಗಿ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನೆಹರು ಪ್ರಧಾನಿ ಆಗಿದ್ದರು, ಅವರು ಆರ್ಎಸ್ಎಸ್ ವಿರೋಧ ಮಾಡಿದ್ರು. ಆರ್ಎಸ್ಎಸ್ ಇನ್ನು ಇದೆ. ನೆಹರು ಇಲ್ಲ. ಇಂದಿರಾಗಾಂಧಿ ತುರ್ತುಸ್ಥಿತಿ ಹೇರಿದ್ರು. ಆರ್ಎಸ್ಎಸ್ ಬ್ಯಾನ್ ಮಾಡಿದ್ರು. ಇಂದಿರಾಗಾಂಧಿ ಇಲ್ಲ. ಆರ್ಎಸ್ಎಸ್ ಇನ್ನು ಇದೆ. ಪ್ರಿಯಾಂಕ್ ಅವರೇ ನೀವು ನಿನ್ನೆ ಮೊನ್ನೆ ಹೋಂ ಮಿನಿಸ್ಟರ್ ಆಗಿರೋದು. ನಿಮ್ಮ ಅಪ್ಪ ನಿಮಗಿಂತ ಮುಂಚೆ ಗೃಹ ಸಚಿವರು ಆಗಿದ್ರು. ನಿಮ್ಮಪ್ಪನಿಂದ ಏನು ಮಾಡಲು ಆಗಿಲ್ಲ ಇನ್ನು ನಿಮ್ಮಿಂದ ಆಗುತ್ತಾ ಎಂದು ಕಿಡಿಕಾರಿದರು.
ನೀವು ಸರ್ವಾಧಿಕಾರಿ ಅಲ್ಲ. ಇದು ನಿಮ್ಮ ಪಕ್ಷದ ಕೊನೆ ದಿನಗಳು. ನಿಮ್ಮ ಅಪ್ಪನ ಆಣೆ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರಲ್ಲ.ಆರ್ಎಸ್ಎಸ್ ರಾಷ್ಟ್ರದ ಕೆಲಸ, ವ್ಯಕ್ತಿಗೆ ಸಂಸ್ಕಾರ ಕೊಡುವ ಕೆಲಸ ಮಾಡುತ್ತಿದೆ. ನೋಂದಣಿ ಮಾಡೋಕೆ ಅದು ಸಂಘ ಅಲ್ಲ. ಸಮಾಜವನ್ನ ಸಂಘಟಿಸುವ ಸಂಘಟನೆ ಅದು. ನಿಮಗೆ ಗೃಹ ಸಚಿವರಾಗಿ ಬೇರೆ ಕೆಲಸ ಇದೆ. ಅದನ್ನ ನೋಡಿ. ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ. ದರೋಡೆ, ಡ್ರಗ್ಸ್, ಹೆಣ್ಣು ಮಕ್ಕಳು ನಾಪತ್ತೆ ಈ ಬಗ್ಗೆ ಗಮನಹರಿಸಿ. ಆರ್ಎಸ್ಎಸ್ನಿಂದ ಅಪಾಯ ಇಲ್ಲ. ಇಲ್ಲೇ ಇದ್ದು ಬಾಂಬ್ ತಯಾರು ಮಾಡೋರ ಕಡೆ ಗಮನ ಕೊಡಿ ಎಂದು ಹರಿಹಾಯ್ದರು.
ನೀವು ಹೋಂ ಮಿನಿಸ್ಟರ್, ಹೋಂ ಮಿನಿಸ್ಟರ್ ರೀತಿ ವರ್ತನೆ ಮಾಡಿ, ಗೂಂಡಾ ರೀತಿ ವರ್ತನೆ ಮಾಡಬೇಡಿ. ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿ ಮೆರೆದವರಿಗೆ ಇಂದು ಪಶ್ಚಿಮ ಬಂಗಾಳ ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಆ ಭಯದಿಂದ ಎಚ್ಚರಿಕೆ ವಹಿಸಿ. ನೀವು ಮಾಡಬೇಕಾದ ಕೆಲಸ ಬೇರೆ ಇದೆ ಅದನ್ನ ಮಾಡಿ. ಡ್ರಗ್ಸ್, ಅಕ್ರಮ ವಲಸಿಗರ ಬಗ್ಗೆ ಗಮನ ಕೊಡಿ. ಬೆಂಕಿ ಹಚ್ಚೋ ಕೆಲಸ ಮಾಡಬೇಡಿ. ಬೆಂಕಿ ಆರಿಸೋ ಕೆಲಸ ಮಾಡಿ. ಬೆಂಕಿ ಹಚ್ಚೋಕೆ ಹೋದ್ರೆ ಆ ಬೆಂಕಿ ನಿಮ್ಮನ್ನು ಸುಡುತ್ತದೆ ಎಂದು ಕೆಂಡ ಕಾರಿದರು.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm