ಬ್ರೇಕಿಂಗ್ ನ್ಯೂಸ್
20-01-26 02:15 pm Bangalore Correspondent ಕರ್ನಾಟಕ
ಬೆಂಗಳೂರು, ಜ.20 : ಬಾರ್ ಲೈಸೆನ್ಸ್ ವಿತರಣೆ ವಿಚಾರದಲ್ಲಿ 25 ಲಕ್ಷ ರೂ. ಲಂಚ ಪಡೆದು ಮೂವರು ಅಬಕಾರಿ ಅಧಿಕಾರಿಗಳು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ದವೂ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಅಧಿಕಾರಿಗಳ ವಿರುದ್ಧ ದೂರು ನೀಡಿದ್ದ ಲಕ್ಷ್ಮೀನಾರಾಯಣ ಅವರು ಸೋಮವಾರ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ಅವರನ್ನು ಭೇಟಿಯಾಗಿ, ಸಚಿವರ ವಿರುದ್ಧವೂ ತನಿಖೆ ನಡೆಸುವಂತೆ ದೂರು ಸಲ್ಲಿಸಿದರು. ಅಬಕಾರಿ ಉಪ ಆಯುಕ್ತ ಜಗದೀಶ್ ನಾಯಕ್, ಅಧೀಕ್ಷಕ ತಮ್ಮಣ್ಣ ಅವರು ಸಿಎಲ್ 7 ಬಾರ್ ಲೈಸೆನ್ಸ್ ನೀಡುವ ಸಂಬಂಧ 1.50 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಲಂಚದ ಮೊತ್ತದಲ್ಲಿ ಅಬಕಾರಿ ಸಚಿವರಿಗೂ ನೀಡಲಿಕ್ಕಿದೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಲಂಚ ಬೇಡಿಕೆ ಹಾಗೂ ಸ್ವೀಕಾರದಲ್ಲಿ ಸಚಿವರ ವಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಲಕ್ಷ್ಮಿನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಅರ್ಜಿಯನ್ನು ಸ್ವೀಕರಿಸಲಾಗಿದೆ. ಈಗಾಗಲೇ ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈಗ ಮತ್ತೊಂದು ದೂರು ನೀಡಿದ್ದು, ಮೂಲ ಪ್ರಕರಣದಲ್ಲಿಯೇ ಸೇರ್ಪಡೆಗೊಳಿಸಿ ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.
ಆಡಿಯೋದಲ್ಲಿ ಸಚಿವರ ಹೆಸರು
ಅಬಕಾರಿ ಉಪ ಆಯುಕ್ತ ಜಗದೀಶ ನಾಯಕ್, ಅಧೀಕ್ಷಕ ತಮ್ಮಣ್ಣ ಅವರು ಲಂಚದ ಬೇಡಿಕೆ ಇಟ್ಟಿರುವ ಆಡಿಯೋವನ್ನು ಲಕ್ಷ್ಮೀನಾರಾಯಣ್ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಇದೇ ಆಡಿಯೊ ಕ್ಲಿಪ್ಗಳನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿದ್ದಾರೆ. ಆಡಿಯೋದಲ್ಲಿ ಸಚಿವರಿಗೆ ಹಣ ಕೊಡಬೇಕು ಎಂದಿರುವುದು ರೆಕಾರ್ಡ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಏನಿದು ಪ್ರಕರಣ:
ಬೆಂಗಳೂರಿನ ಹುಳಿಮಾವು ನಿವಾಸಿ ಲಕ್ಷ್ಮೀನಾರಾಯಣ್ ತಮ್ಮ ಪುತ್ರ ನಿಶ್ಚಲ್ ಹೆಸರಿನಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ಉನಾಲಿ ಬ್ರಿವ್ಯೂ ಪಾರ್ಕ್ ಆರಂಭಿಸಲು ಅಗತ್ಯವಿರುವ ಸಿಎಲ್- 7 ಲೈಸೆನ್ಸ್ಗೆ ಬೆಂಗಳೂರು ನಗರ ಅಬಕಾರಿ ಜಿಲ್ಲೆ- ಅಬಕಾರಿ ಆಯುಕ್ತರ ಬಳಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿ ಲೈಸೆನ್ಸ್ ನೀಡುವ ಸಂಬಂಧ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ 80 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಬಕಾರಿ ಅಧೀಕ್ಷಕ ತಮ್ಮಣ್ಣ ಕೂಡ ಲೈಸೆನ್ಸ್ ನೀಡಲು 1.50 ಕೋಟಿ ರೂ. ನೀಡಬೇಕು. ಈ ಮೊತ್ತದಲ್ಲಿ ಸಚಿವರು, ಡಿಸಿ ಆಫೀಸ್, ಡಿಸಿ, ಇಬ್ಬರು ಉಪ ಆಯುಕ್ತರಿಗೂ ಪಾಲು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಲಂಚ ಬೇಡಿಕೆಯಿಂದ ಬೇಸತ್ತ ಲಕ್ಷ್ಮೀನಾರಾಯಣ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬ್ಯಾಟರಾಯನಪುರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಶನಿವಾರ ದೂರುದಾರ ಲಕ್ಷ್ಮೀನಾರಾಯಣ್ ಅವರಿಂದ 25 ಲಕ್ಷ ರೂ. ಮುಂಗಡ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು, ಜಗದೀಶ್ ನಾಯಕ್ ಹಾಗೂ ಕೆ.ಎಂ.ತಮ್ಮಣ್ಣ ಅವರನ್ನು ಬಂಧಿಸಿದ್ದರು. ಅಲ್ಲದೆ, ಹಣ ಪಡೆದು ಪರಾರಿಯಾಗುತ್ತಿದ್ದ ಜಗದೀಶ್ ನಾಯ್ಕ್ ಅವರ ಕಾರು ಚಾಲಕ ಅಬಕಾರಿ ಇಲಾಖೆ ಕಾನ್ಸ್ಟೆಬಲ್ ಲಕ್ಕಪ್ಪ ಗನಿ ಅವರನ್ನೂ ಬಂಧಿಸಿದ್ದರು.
The Lokayukta has received a complaint seeking investigation against Karnataka Excise Minister R.B. Timmapur in a bar licence bribery case. Three excise officials were caught red-handed while accepting ₹25 lakh as part of a ₹1.5 crore bribe demand for issuing a CL-7 licence. The complainant alleged that the bribe amount included a share for the minister, a claim reportedly supported by audio recordings submitted to the Lokayukta.
20-01-26 02:15 pm
Bangalore Correspondent
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
ಇವಿಎಂಗೆ ಗುಡ್ ಬೈ, ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ;...
20-01-26 12:03 pm
ನನ್ನ ವಿರುದ್ಧ ಯಾರೋ ಅಪರಿಚಿತರು ಷಡ್ಯಂತ್ರ ಮಾಡಿದ್ದಾ...
19-01-26 08:42 pm
19-01-26 11:03 pm
HK News Desk
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
President Donald Trump: ಅಮೆರಿಕದ ಸುಂಕ ಬರೆಗೆ ಭಾ...
18-01-26 11:47 am
ಕುಂಬ್ಡಾಜೆ ; ಕರಿಮಣಿ ಸರ ಎಗರಿಸಲು ಮಹಿಳೆಯ ಕತ್ತು ಹಿ...
17-01-26 03:08 pm
19-01-26 10:55 pm
Mangalore Correspondent
Kukke Subramanya, Drowning: ಕುಕ್ಕೆ ಸುಬ್ರಹ್ಮಣ್...
18-01-26 09:58 pm
ಸೇಂಟ್ ಅಲೋಶಿಯಸ್ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿ...
17-01-26 05:12 pm
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
19-01-26 10:20 pm
HK News Desk
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm
Mangalore Crime, Konaje Police: ಕಾಂಗ್ರೆಸ್ ಕಾರ...
18-01-26 12:58 pm
Mandya Murder: ಆಸ್ತಿ ವಿಚಾರಕ್ಕೆ ಗಲಾಟೆ ; ನಾಲ್ಕು...
16-01-26 09:01 pm