Mandya Bakery, Cake, Sealed: ಕಲರ್ ಫುಲ್ ಕೇಕ್ ನಲ್ಲಿ ಹುಳುಗಳ ರಾಶಿ, ತಿಂದು ಆಸ್ಪತ್ರೆಗೆ ದಾಖಲಾದ ಒಂದು ವರ್ಷದ ಮಗು, ಮಂಡ್ಯದಲ್ಲಿ ಡರ್ಟಿ ಬೇಕರಿ ! 

22-07-25 03:02 pm       HK News Desk   ಕರ್ನಾಟಕ

ಬೇಕರಿಯಿಂದ ತಂದಿದ್ದ ಕಲರ್ ಫುಲ್ ಕೇಕ್ ತಿಂದು ಒಂದು ವರ್ಷದ ಮಗು ಅಸ್ವಸ್ಥಗೊಂಡಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.

ಮಂಡ್ಯ, ಜುಲೈ 22 : ಬೇಕರಿಯಿಂದ ತಂದಿದ್ದ ಕಲರ್ ಫುಲ್ ಕೇಕ್ ತಿಂದು ಒಂದು ವರ್ಷದ ಮಗು ಅಸ್ವಸ್ಥಗೊಂಡಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.

ಆನಂದ್ ಎಂಬುವವರು ತಮ್ಮ ಪುಟ್ಟ ಮಗಳಿಗಾಗಿ ಪಟ್ಟಣದ ಹೈ ಟೆಕ್ ಕಾವೇರಿ ಬೇಕರಿಯಿಂದ ಕೇಕ್ ಖರೀದಿಸಿದರು. ಕೇಕ್ ತಿಂದ ಕೆಲ ಹೊತ್ತಲ್ಲೇ ಮಗು ಅಸ್ವಸ್ಥಗೊಂಡಿದೆ. ಕೊನೆಗೆ ಆಕೆಯ ತಂದೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ತಪಾಸಣೆ ಮಾಡಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ತಂದಿದ್ದ ಕೇಕ್ ಪರಿಶೀಲಿಸಿದಾಗ ಅದರಲ್ಲಿ ಹುಳುಗಳ ರಾಶಿ ಇರೋದು ಪತ್ತೆಯಾಗಿದೆ. ಬೆನ್ನಲ್ಲೇ ಆನಂದ್, ಆತನ ಸ್ನೇಹಿತರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಬೇಕರಿ ಹೋಗಿ ಕಿಚನ್ ಪರಿಶೀಲನೆ ಮಾಡಿದ್ದಾಗ ಬೆಚ್ಚಿ ಬಿದ್ದಿದ್ದಾರೆ.  ಕಿಚನ್ ಗಬ್ಬು ನಾರುತ್ತಿದ್ದು, ತಯಾರಿ ಮಾಡಿದ್ದ ಕೇಕ್ ಗಳನ್ನ ಮೂರು ನಾಲ್ಕು ದಿನ ಫ್ರಿಜ್ಜಿನಲ್ಲಿಟ್ಟು, ಹುಳಗಳಿಂದ ತೇಲಾಡುತ್ತಿದ್ದ ಸ್ವೀಟ್ ಹಾಗೂ ಕೇಕ್ ಗಳನ್ನ ಗ್ರಾಹಕರಿಗೆ ಮಾರುತ್ತಿದ್ದ ವಿಷಯ ತಿಳಿದು ಬಂದಿದೆ. 

ಬೇಕರಿ ಮಾಲೀಕ ಮಹೇಶ್​​ಗೆ ಪೋಷಕರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದು, ನಂತರ ಪುರಸಭಾ ಅಧಿಕಾರಿಗಳು, ವೈದ್ಯಾಧಿಕಾರಿಗಳು ಬೇಕರಿಗೆ ಬೀಗ ಜಡಿದಿದ್ದಾರೆ.

A shocking case of food contamination has emerged from Nagamangala, Mandya, where a one-year-old baby girl was hospitalized after consuming a worm-infested, colorful cake bought from a local bakery.