ಬ್ರೇಕಿಂಗ್ ನ್ಯೂಸ್
21-07-25 04:16 am HK News Desk ಕರ್ನಾಟಕ
ಬೆಂಗಳೂರು, ಜುಲೈ 20: 'ತುಳುನಾಡ್ದ ಹೈಕೋರ್ಟ್ ವಕೀಲೆರ್' ತಂಡ ಬೆಂಗಳೂರಿನ ಕೃಷ್ಣದೇವರಾಯ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ವಕೀಲರಾದ ಶಶಿರಾಜ್ ಕಾವೂರು ಬರೆದ ಎರಡು ಕನ್ನಡ ನಾಟಕಗಳಾದ 'ನೆಮ್ಮದಿ ಅಪಾರ್ಟ್ಮೆಂಟ್ ಬ್ಲಾಕ್-ಬಿ' ಮತ್ತು ಯೇಸುಕ್ರಿಸ್ತನ ಜೀವನ ಆಧರಿಸಿದ 'ದಿವ್ಯಜ್ಯೋತಿ' ನಾಟಕ ಕೃತಿಗಳ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ.ನವಾಝ್ ನೆಮ್ಮದಿ ಅಪಾರ್ಟ್ಮೆಂಟ್ ಬ್ಲಾಕ್-ಬಿ ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ 'ದಿವ್ಯಜ್ಯೋತಿ' ಕೃತಿಯನ್ನು ಬಿಡುಗಡೆಗೊಳಿಸಿದರು.
ಇದೇ ವೇಳೆ ನಾಟಕ ಕೃತಿಯ ಬಗ್ಗೆ ಮಾತನಾಡಿದ ಬಿಷಪ್ ಪೀಟರ್ ಮಚಾದೋ ಅವರು, ಅನ್ಯ ಸಮುದಾಯಕ್ಕೆ ಸಂಬಂಧಿಸಿದ ಮಹಾತ್ಮರ ಬಗ್ಗೆ ಬರೆಯುವಾಗ ಬರಹಗಾರರು ತುಂಬ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲ್ಲದೆ, ಸಾಕಷ್ಟು ಓದಿಕೊಂಡಿರಬೇಕು. ಸರಿಯಾದ ಗ್ರಹಿಕೆ ಮತ್ತು ಸ್ಪಷ್ಟ ತಿಳುವಳಿಕೆ ಇಲ್ಲವಾದಲ್ಲಿ ಸಮಸ್ಯೆ- ಸಂಘರ್ಷಗಳಿಗೆ ಕಾರಣವಾಗುತ್ತದೆ. ಶಶಿರಾಜ್ ಅವರು ಈ ಕೃತಿಯನ್ನು ಬರೆಯುವ ಮೊದಲು ಸಾಕಷ್ಟು ಅಧ್ಯಯನ ನಡೆಸಿದ್ದಾರೆ ಎನ್ನುವುದು ನಾಟಕ ಪುಸ್ತಕ ಓದಿದಾಗ ತಿಳಿಯುತ್ತದೆ. ನಾಟಕ ಉದ್ದಕ್ಕೂ ಅವರು ಕೊಡುವ ವಿವರಗಳು ಅತ್ಯಂತ ಅಧಿಕೃತ ಅನ್ನುವಷ್ಟು ಮೂಲದ್ದೇ ಆಗಿವೆ. ಬೈಬಲ್ ನಲ್ಲಿರುವ ಅಂಶಗಳನ್ನೇ ಯಾವ ಗೊಂದಲವೂ ಇಲ್ಲದೆ ಸುಂದರವಾಗಿ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಕ್ರೈಸ್ತೇತರ ವ್ಯಕ್ತಿಯೊಬ್ಬ ಜೀಸಸ್ ಬದುಕಿನ ಚಿತ್ರಣವನ್ನು ನಾಟಕ ರೂಪದಲ್ಲಿ ಬರೆದದ್ದಕ್ಕೆ ಅಭಿನಂದಿಸುತ್ತೇನೆ. ಯಾಕೆಂದರೆ, ಜೀಸಸ್ ಬಗೆಗಿನ ಪರಿಪೂರ್ಣ ನಾಟಕ ಕನ್ನಡದಲ್ಲಿ ಬೇರೊಂದು ಬಂದಿಲ್ಲ. ಆ ಕೆಲಸವನ್ನು ಶಶಿರಾಜ್ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ ಕೆ.ರಾಜೇಶ್ ರೈ, ಕರ್ನಾಟಕ ಸರಕಾರದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್ ಹಾಗೂ ಕಾರ್ಯಕ್ರಮದ ಆಯೋಜಕರಗಳಾದ ಖ್ಯಾತ ಹಿರಿಯ ಹೈಕೋರ್ಟ್ ವಕೀಲರು ಸುಧಾಕರ್ ಪೈ , ನಿಶಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಗಣ್ಯರಾಗಿ ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಮತ್ತು ಉದ್ಯಮಿ, ಶಿಕ್ಷಣ ತಜ್ಞ ದಯಾನಂದ ಪೈ ಭಾಗವಹಿಸಿದ್ದರು. ಇದೇ ವೇಳೆ, ದೇವದಾಸ್ ಕಾಪಿಕಾಡ್ ಮತ್ತು ಶಶಿರಾಜ್ ರಾವ್ ಕಾವೂರು ಅವರನ್ನು ಒಂದೇ ಸಮಯದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮ ನಂತರ ಚಾ ಪರ್ಕ ತಂಡದವರಿಂದ "ಏರ್ಲಾ ಗ್ಯಾರಂಟಿ ಅತ್ತ್ " ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.
Two Kannada plays authored by noted advocate and writer Shashiraj Kavoor were officially released during a grand event organized by the ‘Tulu Nadu High Court Advocates’ at Krishnadevaraya Kalamandira in Bengaluru. The plays, titled ‘Nemmadi Apartment Block-B’ and ‘Divyajyothi’—the latter based on the life of Jesus Christ—were unveiled in the presence of distinguished guests and legal luminaries. The event was graced by several dignitaries, including High Court Justices S. Vishwajith Shetty and K. Rajesh Rai, Advocate General of Karnataka K. Shashikiran Shetty, renowned Tulu dramatist Devadas Kapikad of Telikeda Bolli fame and the event organizers—prominent High Court advocates Sudhakar Pai and Nishit Kumar Shetty —were present at the event.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 10:41 pm
HK News Desk
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 10:17 pm
Mangalore Correspondent
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm