ಬ್ರೇಕಿಂಗ್ ನ್ಯೂಸ್
11-04-25 11:10 pm Bangalore Correspondent ಕರ್ನಾಟಕ
ಬೆಂಗಳೂರು, ಎ.11 : ಯಾರು ಹೆಚ್ಚು ಅಕ್ರಮ ಆಸ್ತಿ, ಅನಾಚಾರ ಮಾಡುತ್ತಾರೋ ಅಂಥ ಅಧಿಕಾರಿಗಳನ್ನೇ ಸಿಎಂ ಪದಕ ಹುಡುಕಿಕೊಂಡು ಬರುತ್ತಾ ಎನ್ನುವ ಅನುಮಾನ ಈ ಸಲ ಬಲವಾಗತೊಡಗಿದೆ. ಯಾಕಂದ್ರೆ, ಮಂಗಳೂರಿನಲ್ಲಿ ಆರೋಪಿಯಿಂದಲೇ ಹಣ, ಒಡವೆ ಕಿತ್ತುಕೊಂಡಿದ್ದ ಆರೋಪ, ಜೊತೆಗೆ ರಾಬರಿ ಪ್ರಕರಣದಲ್ಲೂ ಗಿಫ್ಟ್ ಕೇಳಿ ಬೇರೆ ಠಾಣೆಗೆ ದಬ್ಬಿಸಿಕೊಂಡಿದ್ದ ಒಬ್ಬ ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗೆ ಸಿಎಂ ಪದಕ ನೀಡಲಾಗಿದೆ. ಬೆಂಗಳೂರಿನಲ್ಲಿಯೂ ಅತಿ ಭ್ರಷ್ಟ ಎಂದು ಹೆಸರಾದ, ಗುತ್ತಿಗೆದಾರನನ್ನೇ ಹಣಕ್ಕಾಗಿ ಪೀಡಿಸಿ ಆತನ ಮನೆಯನ್ನೇ ತನ್ನದಾಗಿಸಿಕೊಳ್ಳಲು ಮಾಡಬಾರದ ಕೆಲಸವನ್ನೆಲ್ಲ ಮಾಡಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ ಪೆಕ್ಟರ್ ಎ.ವಿ ಕುಮಾರ್ ಎಂಬವರನ್ನು ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿತ್ತು.
ಪುಣ್ಯವಶಾತ್ ಎ.2ರಂದು ಸಿಎಂ ಪದಕ ಪ್ರದಾನ ಕಾರ್ಯಕ್ರಮ ಏರ್ಪಡಿಸಿದ್ದರೆ, ಇನ್ಸ್ ಪೆಕ್ಟರ್ ಕುಮಾರ್ ವಿರುದ್ಧ ಎ.1ರಂದು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದ್ದರಿಂದ ಆ ವ್ಯಕ್ತಿ ಪದಕ ಪಡೆಯುವುದರಿಂದ ದೂರ ಉಳಿದಿದ್ದರು. ವಿಚಿತ್ರ ಏನಪ್ಪಾಂದ್ರೆ, ಲೋಕಾಯುಕ್ತ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಆತನನ್ನು ಬಂಧನ ಮಾಡಿಲ್ಲ. ಜೊತೆಗೆ, ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುವುದಕ್ಕೂ ಬಿಟ್ಟುಕೊಟ್ಟು ಮೇಲಧಿಕಾರಿಗಳು ತಾವೂ ಆತನ ಜೊತೆಗೆ ಶಾಮೀಲಾಗಿದ್ದಾರೇನೋ ಅನ್ನುವ ಸಂಶಯಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ.
ದೂರುದಾರ ಚನ್ನೇಗೌಡ ಪರ ವಕೀಲ ವೆಂಕಟ್ ಹೇಳುವ ಪ್ರಕಾರ, ಕುಮಾರ್ ಇನ್ಸ್ ಪೆಕ್ಟರ್ ಆಗಿದ್ದುಕೊಂಡು ಅನ್ನಪೂರ್ಣೇಶ್ವರಿ ನಗರ ಠಾಣೆಯನ್ನು ರಿಯಲ್ ಎಸ್ಟೇಟ್ ಏಜಂಟರ ದಂಧೆಯನ್ನಾಗಿ ಮಾಡಿಕೊಂಡಿದ್ರಂತೆ. ಇಡೀ ಪೊಲೀಸ್ ತಂಡವನ್ನೇ ಭ್ರಷ್ಟರ ಕೂಪವನ್ನಾಗಿ ಮಾಡಿಕೊಂಡಿದ್ದರಂತೆ. ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾದ ದೂರಿನ ಬಗ್ಗೆ ವಕೀಲ ವೆಂಕಟ್ ಪೂರ್ತಿ ವಿವರ ಕೊಟ್ಟಿದ್ದಾರೆ.
ದೂರುದಾರ ಚನ್ನೇಗೌಡ ಸಣ್ಣ ಮಟ್ಟದ ಗುತ್ತಿಗೆದಾರನಾಗಿದ್ದು, ಆತನ ಪತ್ನಿ ಅನುಷಾ ಕೆಎಎಎಸ್ ಅಧಿಕಾರಿ ಆಗಿದ್ದಾರೆ. ಇವರು ಬೆಂಗಳೂರಿನ ನಾಗರಬಾವಿ ಡಿ ಗ್ರೂಪ್ ಲೇಔಟ್ ನಲ್ಲಿ ನಾಲ್ಕು ಮಹಡಿಯ ಡ್ಯುಪ್ಲೆಕ್ಸ್ ಮನೆ ಹೊಂದಿದ್ದಾರೆ. ಇನ್ಸ್ ಪೆಕ್ಟರ್ ಎವಿ ಕುಮಾರ್, ಆ ಮನೆಯ ಮೇಲೆ ಕಣ್ಣು ಹಾಕಿದ್ದು, ಹೇಗಾದ್ರೂ ಅದನ್ನು ತನ್ನದಾಗಿಸಬೇಕೆಂದು ಪ್ಲಾನ್ ಹಾಕ್ಕೊಂಡು ಲೋಕಲ್ ರೌಡಿ ಸೋಮಶೇಖರ್ ಎಂಬಾತನನ್ನು ಸೆಟ್ ಮಾಡಿಸುತ್ತಾನೆ. ಆತನಲ್ಲಿ ಮೂರು ವರ್ಷಗಳಿಂದ ಆ ಮನೆಯಲ್ಲಿ ಲೀಸಿಗೆ ಇದ್ದಾನೆಂದು ಹೇಳಿಸಿ ದೂರು ಕೊಡಿಸಿ ಚನ್ನೇಗೌಡ ವಿರುದ್ಧ ಎಫ್ಐಆರ್ ಮಾಡಿಸುತ್ತಾನೆ.
ಅಷ್ಟೇ ಅಲ್ಲದೆ, ಚನ್ನೇಗೌಡರ ಪತ್ನಿ ಒಬ್ಬ ಕೆಎಎಸ್ ಅಧಿಕಾರಿಯಾಗಿದ್ದರೂ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಆಕೆಯನ್ನು ಈ ಪ್ರಕರಣದಲ್ಲಿ ಅರೆಸ್ಟ್ ಮಾಡುತ್ತಾನೆ. ಮಹಿಳೆಯಾಗಿದ್ದರೂ ಠಾಣೆಯಲ್ಲಿ ಕೂಡಿಹಾಕಿ ಕಿರುಕುಳ ಕೊಟ್ಟು ಜೈಲಿಗೂ ಹಾಕುತ್ತಾನೆ. ಈ ವೇಳೆ, ತನ್ನನ್ನೂ ಅರೆಸ್ಟ್ ಮಾಡುತ್ತಾನೆಂಬ ಭಯದಲ್ಲಿ ಚೆನ್ನೇಗೌಡ ಎಸ್ಕೇಪ್ ಆಗುತ್ತಾರೆ. ಆನಂತರ ನಮ್ಮ ಬಳಿಗೆ ಬಂದು ಆಗಿರುವ ವಿಷಯ ಹೇಳಿಕೊಂಡಿದ್ದಾರೆ. ಮೊದಲಿಗೆ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆಯುತ್ತೇವೆ. ಪೊಲೀಸ್ ದೂರಿನ ಬಗ್ಗೆ ಪರಿಶೀಲನೆ ಮಾಡಿದಾಗ ದೂರೇ ಫೇಕ್ ಎಂದು ಕಂಡುಬಂತು. ಹೈಕೋರ್ಟ್ ಹೋಗಿ ಎಫ್ಐಆರ್ ವಜಾ ಮಾಡಲು ಅರ್ಜಿ ಹಾಕಿದಾಗ, ಅಲ್ಲಿ ತಡೆಯಾಜ್ಞೆ ಸಿಕ್ಕಿತ್ತು.
ಈ ನಡುವೆ, ಚೆನ್ನೇಗೌಡ ಅವರು ತನಗಾದ ಕಿರುಕುಳ ಮತ್ತು ಇನ್ಸ್ ಪೆಕ್ಟರ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಸಿಪಿ, ಬೆಂಗಳೂರು ಡಿಸಿಪಿಗೆ ದೂರು ಕೊಟ್ಟರೂ ಯಾರಿಂದಲೂ ನೆರವು ಸಿಗಲಿಲ್ಲ. ಇಷ್ಟಾದರೂ ಕೆಂಗೇರಿಯ ಶ್ರೀಶೈಲ ಹೊಟೇಲ್ ನಲ್ಲಿ ಚನ್ನೇಗೌಡರನ್ನು ಮತ್ತೆ ಕರೆಸಿ ಇನ್ಸ್ ಪೆಕ್ಟರ್ ಕುಮಾರ್ ಧಮ್ಕಿ ಹಾಕಿದ್ದಾನೆ. ಮನೆಯನ್ನು 2.10 ಕೋಟಿಗೆ ಅಗ್ರೀಮೆಂಟ್ ಮಾಡಿಸುತ್ತೇನೆಂದು ಹೇಳಿ ಕೇವಲ 65 ಲಕ್ಷಕ್ಕೆ ಮನೆ ಬರೆದುಕೊಡುವಂತೆ ಬೆದರಿಕೆ ಹಾಕಿದ್ದಾನೆ. ಇದಕ್ಕೆಲ್ಲ ಕುಮಾರ್ ಜೊತೆಗಿದ್ದ ರೌಡಿಗಳು ಮತ್ತು ಪೊಲೀಸ್ ಪೇದೆಗಳು ಸಹಕಾರ ನೀಡುತ್ತಾರೆ.
ಚನ್ನೇಗೌಡ ಒಂದು ಹಂತದಲ್ಲಿ ಮನೆ ಬರೆದುಕೊಡಲು ಒಪ್ಪಿದರೂ, ಆ ಮನೆ ಪತಿ- ಪತ್ನಿ ಜಂಟಿ ಹೆಸರಲ್ಲಿ ರಿಜಿಸ್ಟರ್ ಆಗಿದ್ದುದರಿಂದ ಒಬ್ಬನಿಗೆ ಬರೆದುಕೊಡುವುದು ಸಾಧ್ಯವಾಗಲಿಲ್ಲ. ಇದೇ ವೇಳೆ, ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದು, ಅಲ್ಲಿ ಎ ವನ್ ಆರೋಪಿ ಕುಮಾರ್, ಎ2 ಆಗಿ ಪೊಲೀಸ್ ಕಾನ್ಸ್ ಟೇಬಲ್ ಅನಂತ್, ಇನ್ನೊಬ್ಬ ಪೇದೆ ಉಮೇಶ್ ಎ3 ಹಾಗೂ ಇನ್ನುಳಿದ 3-4 ರೌಡಿಗಳು ಸೇರಿ ಒಟ್ಟು 8 ಮಂದಿ ವಿರುದ್ಧ ಎಫ್ಐಆರ್ ದಾಖಲಾಗುತ್ತದೆ.
ಎಪ್ರಿಲ್ 1ರಂದು ಶ್ರೀಶೈಲ ಹೊಟೇಲಿನಲ್ಲಿ ಕುಳಿತು ಕುಮಾರ್ ಮತ್ತು ಇತರ ಏಳು ಮಂದಿ ಡೀಲ್ ಮಾಡುತ್ತಿದ್ದಾಗಲೇ ಲೋಕಾಯುಕ್ತ ಡಿವೈಎಸ್ಪಿ ವಸಂತ ಕುಮಾರ್ ನೇತೃತ್ವದಲ್ಲಿ ದಾಳಿಯಾಗಿದ್ದು ಎಲ್ಲರನ್ನೂ ಅರೆಸ್ಟ್ ಮಾಡುತ್ತಾರೆ. ಇನ್ಸ್ ಪೆಕ್ಟರ್ ಕುಮಾರ್ ಮಾತ್ರ ನೆಪಹೇಳಿ ತಪ್ಪಿಸಿಕೊಳ್ತಾನೆ. ಉಳಿದವರನ್ನೆಲ್ಲ ಬಂಧನ ಮಾಡಿ ಸ್ಥಳ ಮಹಜರನ್ನೂ ಮಾಡಿದ್ದಾರೆ. ಇನ್ಸ್ ಪೆಕ್ಟರ್ ಕೂಡ ಬಂಧನ ಆಗಬೇಕಿದ್ದರೂ ಮೇಲಧಿಕಾರಿಗಳ ಕೃಪೆಯಿಂದ ಬಚಾವಾಗಿದ್ದಾನೆ. ಅಷ್ಟೇ ಅಲ್ಲ, ಎರಡು ದಿನಗಳ ನಂತರ ತನ್ನ ಮೇಲೆ ಎಫ್ಐಆರ್ ದಾಖಲಾಗಿದ್ದರೂ ಪೊಲೀಸ್ ಛಾಣೆಗೆ ಕೆಲಸಕ್ಕೆ ಹಾಜರಾಗಿದ್ದಾನೆ. ಹಿರಿಯ ಅಧಿಕಾರಿಗಳು ಮೆಮೋ ಕೊಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಕೀಲ ವೆಂಕಟ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ನಡುವೆ, ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್, ಆರೋಪಿತ ಇನ್ಸ್ ಪೆಕ್ಟರ್ ಎ.ವಿ ಕುಮಾರ್ ಮತ್ತು ಇನ್ನಿಬ್ಬರು ಪೊಲೀಸ್ ಪೇದೆಗಳನ್ನು ಅನ್ನಪೂರ್ಣೇಶ್ವರ ಠಾಣೆಯಿಂದ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಲೋಕಾಯುಕ್ತ ತನಿಖೆ ಬಳಿಕ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಒಬ್ಬ ಗುತ್ತಿಗೆದಾರ ಮತ್ತು ಕೆಎಎಸ್ ಅಧಿಕಾರಿಗೆ ಈ ಪರಿ ಕಿರುಕಳ ಆಗಿದ್ದರೂ ಆರೋಪಿತರನ್ನು ಕನಿಷ್ಠ ಸಸ್ಪೆಂಡ್ ಮಾಡುವುದಕ್ಕೂ ಸಾಧ್ಯವಾಗಿಲ್ಲ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಇನ್ಸ್ ಪೆಕ್ಟರ್ ಲೋಕಾಯುಕ್ತ ಕುಣಿಕೆಯಿಂದ ಬಚಾವಾಗಿದ್ದು ಹೇಗೆ ಎನ್ನುವ ಬಗ್ಗೆ ಜಾಲತಾಣದಲ್ಲಿ ತೀವ್ರ ಚರ್ಚೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಪೊಲೀಸರು ವಿಶ್ವಾಸ ಕಳಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಠಾಣೆಯ ಮುಂದೆ ಸೇರಿ ಪ್ರತಿಭಟನೆಯನ್ನೂ ಮಾಡಿದ್ದಾರೆ.
ಇದೇ ವೇಳೆ, ಕುಮಾರ್ ತನ್ನ ಸೇವೆಯ ಉದ್ದಕ್ಕೂ ಭ್ರಷ್ಟಾಚಾರವನ್ನೇ ಮಾಡಿಕೊಂಡು ಬಂದಿದ್ದಾರೆಂಬ ಆರೋಪ ಕೇಳಿಬಂದಿದ್ದು, ಬೆಂಗಳೂರಿನಲ್ಲೇ 18 ನಿವೇಶನ, ನೆಲಮಂಗಲದಲ್ಲಿ ತೋಟದ ಮನೆ, 30 ಎಕ್ರೆ ಕೃಷಿ ಜಮೀನು ಹೊಂದಿದ್ದಾರೆ ಎಂಬ ಬಗ್ಗೆ ವದಂತಿಗಳು ಹರಡಿದೆ. ಈ ಬಗ್ಗೆ ತನಿಖೆ ನಡೆಸಬೇಕಾದ ಲೋಕಾಯುಕ್ತ ಅಧಿಕಾರಿಗಳು ಎಲ್ಲರೂ ಕಳ್ಳರು, ಯಾರು ಹೆಚ್ಚು ಕಳ್ಳರು ಅಂತ ಹುಡುಕಲು ಮುಂದಾಗಿದ್ದಾರೋ ಅನ್ನುವ ಅನುಮಾನ ಬಂದಿದೆ.
In a surprising turn of events, A.V. Kumar, the police inspector of Annapoorneshwari Nagar, has not been arrested despite a recent raid conducted by the Lokayukta and a formal case filed by a victim. This has raised questions about accountability and the integrity of the law enforcement system in the region. Speaking about the case, a police officer said, “A person named Somashekar Aradhya had filed a complaint in Annapoorneshwari Nagar in 2024 against civil contractor Channegowda and his wife Anusha over a property dispute. The couple had taken Rs 60 lakh from Aradhya for a property.”
12-04-25 11:09 pm
Bangalore Correspondent
Annapoorneshwari Nagar Police Inspector, A.V....
11-04-25 11:10 pm
Sameer MD, Vidoe Deleted, Dharmasthala: ಸೌಜನ್...
11-04-25 10:27 pm
Bangalore High court, Birthday, suspend: ಬೆಂಗ...
11-04-25 03:45 pm
Yatnal, Muslim, Prophet Muhammad Paigambar: ಪ...
11-04-25 03:28 pm
12-04-25 09:01 pm
HK News Desk
Indian Mujahideen, Yasin Bhatkal: ಹೈದರಾಬಾದ್ ಬ...
10-04-25 09:10 pm
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
12-04-25 10:13 pm
Mangalore Correspondent
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
Dinesh Gundurao, Mangalore: ಸರಕಾರಿ ಆಸ್ಪತ್ರೆಗಳ...
12-04-25 05:30 pm
Mangalore Subrahmanya train, Timings: ಎ.12ರಿಂ...
11-04-25 02:49 pm
Mangalore, Kolya, accident: ತೆಂಗಿನ ಮರದಿಂದ ಕೆಳ...
11-04-25 10:35 am
12-04-25 10:52 pm
Mangalore Correspondent
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am